ಯುವಕನೊಬ್ಬ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಿಪ್ಪನ್ ಪೇಟೆ ಸಮೀಪದ ಕಾರಗೋಡು ಗ್ರಾಮದಲ್ಲಿ ಭಾನುವಾರ ನಡೆದಿದೆ. ಸೃಜನ್ (19) ಆತ್ಮಹತ್ಯೆಗೆ ಶರಣಾದ ಯುವಕ ಎಂದು ತಿಳಿದುಬಂದಿದೆ.
ripponpete : ಆತ್ಮಹತ್ಯೆಗೆ ಕಾರಣವೇನು
ಐಐಟಿ ವ್ಯಾಸಾಂಗ ಮಾಡಿದ್ದ ಸೃಜನ್ಗೆ ಸರಿಯಾದ ಉದ್ಯೋಗ ದೊರಕಿರಲಿಲ್ಲ. ಹಾಗಾಗಿ ಆತ ಗಾರೆಕೆಲಸ ಮಾಡುತ್ತಿದ್ದ. ಈ ಹಿನ್ನಲೆ ಓದಿಗೆ ತಕ್ಕ ಉದ್ಯೋಗ ಸಿಗಲಿಲ್ಲ ಎಂಬ ಕಾರಣದಿಂದ ಮನೆಯವರೆಲ್ಲಾ ಸಂಬಂಧಿಕರ ಮದುವೆಗೆಂದು ಹೋಗಿದ್ದ ಸಂದರ್ಭದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
