realme gt 7t launch date in india? : ಹೊಸ ರಿಯಲ್​ ಮಿ ಫೋನ್​ ಹೇಗಿದೆ?

Malenadu Today

ದೆಹಲಿ : ಈಗಾಗಲೇ ಚೀನಾದಲ್ಲಿ ರಿಲೀಸ್ ಮಾಡಿರುವ ರಿಯಲ್‌ಮಿ GT 7 ಸರಣಿಯನ್ನು ಭಾರತದಲ್ಲಿ ವಿಸ್ತರಿಸಲು ರಿಯಲ್‌ಮಿ ಸಜ್ಜಾಗಿದೆ. ಎರಡು ಹೊಸ ಫೋನ್‌ಗಳು – ರಿಯಲ್‌ಮಿ GT 7 ಮತ್ತು GT 7T ಮಾರುಕಟ್ಟೆಯನ್ನು ಸೇರುವ ನಿರೀಕ್ಷೆಯಿದೆ.  GT 7 ಮತ್ತು GT 7T ಎರಡೂ ಮೇ 27 ರಂದು ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆಯಾಗಲಿವೆ ಎಂದು ರಿಯಲ್‌ಮಿ ಅಧಿಕೃತವಾಗಿ ದೃಢಪಡಿಸಿದೆ.

realme gt 7t launch date in india
realme gt 7t launch date in india

realme gt 7t launch date in india

ಈ ಫೋನ್ಗಳ ಲಾಂಚಿಂಗ್ ಕಾರ್ಯಕ್ರಮವು ಪ್ಯಾರಿಸ್‌ನಲ್ಲಿ ನಡೆಯಲಿದೆ. ಆಬಳಿಕ ಅಮೆಜಾನ್ ಇಂಡಿಯಾ ಮತ್ತು ಇತರ ಆನ್‌ಲೈನ್ ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್ಗಳಲ್ಲಿ ಹೊಸ ಫೋನ್ ದೊರೆಯಲಿದೆ. ಅಂದಹಾಗೆ ಈ ಫೋನ್ನ ನಿಖರವಾದ ಬೆಲೆ ಪ್ರಕಟವಾಗಿಲ್ಲ. ಇದರ ಹಿಂದಿನ ಮಾಡಲ್ GT 6 ಮತ್ತು GT 6T ಕ್ರಮವಾಗಿ 40,999 ಮತ್ತು 30,999 ರೂ.ಗಳ ಆರಂಭಿಕ ಬೆಲೆಯ ಹೊಂದಿದ್ದು, ಈ ರೇಂಜ್ನಲ್ಲಿ ಹೊಸ ಫೋನ್ಗಳು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. 120W ವೇಗದ ಚಾರ್ಜಿಂಗ್‌ , 7,000mAh ಬ್ಯಾಟರಿಯೊಂದಿಗೆ ಈ ಫೋನ್ ಎರಡು ಬಣ್ಣಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. 6.78-ಇಂಚಿನ ಪೂರ್ಣ-HD+ OLED ಡಿಸ್ಪ್ಲೇ, 50-ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಹಾಗೂ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದು ಹೊಂದಿರಲಿದೆ ಎನ್ನಲಾಗುತ್ತಿದೆ.

Share This Article