RCB ಯ ಹನ್ನೊಂದು ವರ್ಷದ ರೆಕಾರ್ಡ್‌ ಮುರಿದುಬಿತ್ತು! ನಿನ್ನೆ ಮುಂಬೈ/ಹೈದರಾಬಾದ್‌ ಮ್ಯಾಚ್‌ನಲ್ಲಿ ಏನೆಲ್ಲಾ ಆಯ್ತು ಗೊತ್ತಾ?

RCB's eleven year old record broken! Do you know what happened in the Mumbai/Hyderabad match yesterday?

RCB ಯ ಹನ್ನೊಂದು ವರ್ಷದ ರೆಕಾರ್ಡ್‌ ಮುರಿದುಬಿತ್ತು! ನಿನ್ನೆ ಮುಂಬೈ/ಹೈದರಾಬಾದ್‌ ಮ್ಯಾಚ್‌ನಲ್ಲಿ ಏನೆಲ್ಲಾ ಆಯ್ತು ಗೊತ್ತಾ?
RCB record broken

Shivamogga  Mar 28, 2024 RCB record broken  11 ವರ್ಷದಿಂದ ಯಾರೂ ಮುರಿಯದ ಆರ್ ಸಿ ಬಿ ದಾಖಲೆ ನಿನ್ನೆ ದೂಳಿಪಟವಾಗಿದೆ. ಐ ಪಿ ಎಲ್ ಇತಿಹಾಸದಲ್ಲಿಯೇ ಪಂದ್ಯ ವೊಂದರಲ್ಲಿ  ಎಸ್ ಆರ್ ಹೆಚ್ ತಂಡ ಗರಿಷ್ಟ ರನ್‌ ದಾಖಲಿಸಿದೆ. ಅಲ್ಲದೆ ನಿನ್ನೆಯ ಮ್ಯಾಚ್‌ನಲ್ಲಿ  ಪಂದ್ಯವೊಂದರ ಗರಿಷ್ಟ ಸ್ಕೋರ್‌ ಕೂಡ ದಾಖಲೆ ಎನಿಸಿದೆ. 

ಫ್ರಾಂಚೈಸಿ ಟಿ20 ಲೀಗ್‌ನಲ್ಲೂ ಗರಿಷ್ಠ ಮೊತ್ತ!

ಸನ್‌ ರೈಸರ್ಸ್‌ 277 ರನ್ ಫ್ರಾಂಚೈಸಿ ಟಿ20 ಲೀಗ್‌ನಲ್ಲೂ ಗರಿಷ್ಠ ರನ್ ದಾಖಲೆ ಎನಿಸಿದೆ. 2022ರ ಲ್ಲಿ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಮೆಲ್ಬರ್ನ್ ಸ್ಟಾರ್ಸ್ ತಂಡ ಹೊಬಾರ್ಟ್ ಹರಿಕೇನ್ ವಿರುದ್ಧ 2 ವಿಕೆಟ್‌ಗೆ 273 ರನ್ ಗಳಿಸಿದ್ದು ಈ ಹಿಂದಿನ ದಾಖಲೆ 2. 20225 ದ.ಆಫ್ರಿಕಾ ಲೀಗ್‌ನಲ್ಲಿ ನೈಟ್ಸ್ ವಿರುದ್ಧ ಟೈಟಾನ್ಸ್ 3 ವಿಕೆಟ್‌ ಗೆ 271 ರನ್‌ ಮಾಡಿತ್ತು. 

ಮುಂಬೈಗೆ 278 ಗರಿಷ್ಠ ರನ್ ಟಾರ್ಗೆಟ್ ಕೊಟ್ಟ ಸನ್ ರೈಸರ್ಸ್ ಹೈದರಾಬಾದ್

ನಾಂದಿನಿನ್ನೆಯ ಮ್ಯಾಚ್ ನಲ್ಲಿ ಹೈದರಾಬಾದ್ ತಂಡವು ಮುಂಬೈ  ಇಂಡಿಯನ್ಸ್ ವಿರುದ್ಧ ಗರಿಷ್ಠ ರನ್ ಕಲೆ ಹಾಕುವುದರ ಮೂಲಕ ಹೊಸದೊಂದು ದಾಖಲೆಗೆ  ಹಾಡಿದೆ. ರಾಜೀವ್ ಗಾಂಧಿ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ  

ಟಾಸ್ ಗೆದ್ದ ಪಾಂಡ್ಯ ಪಡೆ ಬೌಲಿಂಗ್ ಅನ್ನು ಆಯ್ದುಕೊಂಡಿತು.

ಬ್ಯಾಟಿಂಗ್ ಆರಂಬಿಸಿದ  ಎಸ್ ಆರ್ ಹೆಚ್ ನ ಬ್ಯಾಟರ್ ಗಳು ಮೈದಾನದಲ್ಲಿ ಸಿಕ್ಸರ್ ಗಳ ಸುರಿಮಳೆಯನ್ನೇ ಸುರಿಸಿದರು ಅದರ ಮೂಲಕ ಗರಿಷ್ಠ 277 ರನ್ ಗಳನ್ನು ಗಳಿಸಿ  ಈ ಹಿಂದೆ ಆರ್‌ಸಿಬಿ ತೆಕ್ಕೆಯಲ್ಲಿದ್ದ  ಗರಿಷ್ಠ 263 ರನ್ ದಾಖಲೆಯನ್ನು ಪುಡಿ ಮಾಡಿದರು.  ಈ ಪಂದ್ಯದಲ್ಲಿ ಹೆನ್ರಿಕ್ ಕ್ಲಾಸೆಮ್ 80 ಟ್ರವಿಸ್ ಹೆಡ್ 62 ಅಭಿಷೇಕ್ ಶರ್ಮಾ 63 ಇವರು ಗಳಿಸಿದ  ಅರ್ಧ ಶತಕದ ನೆರವಿನಿಂದ ಎಸ್ ಆರ್ ಎಚ್  ತಂಡ ಈ ಗರಿಷ್ಠ ಮೊತ್ತ ಕಲೆಹಾಕಲು ಸಾಧ್ಯವಾಯಿತು

2013ರಲ್ಲಿ ಆ‌ರ್.ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದಪುಣೆ ವಾರಿಯರ್ಸ್ ವಿರುದ್ಧದ ಕ್ರಿಕೆಟ್‌ ಪಂದ್ಯದಲ್ಲಿ 5 ವಿಕೆಟ್‌ಗೆ 263 ರನ್ ಕಲೆಹಾಕಿತ್ತು. ಆ ಪಂದ್ಯದಲ್ಲಿ ಕ್ರಿಸ್ ಗೇಲ್ 175 ರನ್ ಸಿಡಿಸಿದ್ದರು. ಇದುವರೆಗೂ ಐಪಿಎಲ್‌ನ ಗರಿಷ್ಟ ದಾಖಲೆ ಪಟ್ಟಿಯಲ್ಲಿ ಆರ್‌ಸಿಬಿ ಸ್ಕೋರ್‌ ಟಾಪ್‌ನಲ್ಲಿತ್ತು. ನಿನ್ನೆಯ ಮ್ಯಾಚ್‌ನಲ್ಲಿ ಎಸ್‌ಆರ್‌ಹೆಚ್‌ ತಂಡ ಈ ದಾಖಲೆಯನ್ನ ಅಳಿಸಿದೆ. 

ಇನ್ನೂ ಟಾರ್ಗೆಟ್‌ ರೀಚ್‌ ಮಾಡಲು ಕಣಕ್ಕಿಳಿದ ಮುಂಬೈ ಕೂಡ ಸಖತ್‌ ಕ್ಯೂರಿಯಾಸಿಟಿ ಮೂಡಿಸಿತ್ತು. ಆದರೆ ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯರ ನಿಧಾನಗತಿಯ ಆಟ ಮ್ಯಾಚ್‌ಗೆ ಕೈಕೊಟ್ಟಿತ್ತು.  ರೋಹಿತ್, ಕಿಶನ್ ಮೊದಲ 3 ಓವರಲ್ಲೇ 50 ರನ್ ಚಚ್ಚಿದರು. ತಿಲಕ್ ವರ್ಮಾ, ನಮನ್ ಧಿರ್ ಜೊತೆಯಾಟದ ಜೊತೆಯಲ್ಲಿ 10 ಓವರ್‌ಗೆ ಮುಂಬೈ 141 ರನ್‌ಗಳ ಗಡಿ ದಾಟಿತ್ತು.  ಆದರೆ ನಂತರ ಬಂದ ಹಾರ್ದಿಕ್‌  24 ರನ್ ಗಳಿಸಲು 20 ಎಸೆತ ತೆಗೆದುಕೊಂಡಿದ್ದು, ಸ್ಕೋರ್‌ ವೇಗ ಕಮ್ಮಿ ಮಾಡಿತ್ತು.  ಅಂತಿಮವಾಗಿ ಮುಂಬೈ 246 ರನ್‌ ಗಳಿಸಿ ಸೋಲೋಪ್ಪಿಕೊಂಡಿತು.