Rashi Bhavishya December 4 2025 ಡಿಸೆಂಬರ್,04, 2025 : ಮಲೆನಾಡು ಟುಡೆ ಸುದ್ದಿ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸದ ಇಂದು ಶುಕ್ಲ ಚತುರ್ದಶಿ ಬೆಳಿಗ್ಗೆ 7.45ರವರೆಗೆ ಇರಲಿದ್ದು, ನಂತರ ಪೌರ್ಣಮಿ ತಿಥಿಯು ಮರುದಿನ ಬೆಳಿಗ್ಗೆ 5.21ರ ವರೆಗೆ ಇರಲಿದೆ.. ಕೃತಿಕಾ ನಕ್ಷತ್ರವು ಮಧ್ಯಾಹ್ನ 3.13ರ ವರೆಗೆ ಇರುತ್ತದೆ, ನಂತರ ರೋಹಿಣಿ ನಕ್ಷತ್ರವು ಪ್ರಾರಂಭವಾಗಲಿದೆ. ರಾಹುಕಾಲವು ಮಧ್ಯಾಹ್ನ 1.30ರಿಂದ 3.00ರ ವರೆಗೆ ಮತ್ತು ಯಮಗಂಡ ಕಾಲವು ಬೆಳಿಗ್ಗೆ 6.00ರಿಂದ 7.30ರ ವರೆಗೆ ಇರಲಿದೆ.
ಇವತ್ತಿನ ರಾಶಿಫಲ
ಮೇಷ : ಈ ದಿನವು ಸ್ವಲ್ಪ ಆಯಾಸಕರವಾಗಿದ್ದು, ಕೈಗೊಂಡ ಕಾರ್ಯಗಳಲ್ಲಿ ವಿಳಂಬ ಹಾಗೂ ಅಡಚಣೆ ಎದುರಾಗಬಹುದು. ಅನಗತ್ಯ ಖರ್ಚು , ಬಂಧುಗಳೊಂದಿಗೆ ವಾಗ್ವಾದ. ಅನಿರೀಕ್ಷಿತ ಪ್ರಯಾಣ, ಕೌಟುಂಬಿಕ ಸಮಸ್ಯೆ. ಆರೋಗ್ಯದಲ್ಲಿ ವ್ಯತ್ಯಯ. ವ್ಯಾಪಾರ ವಹಿವಾಟುಗಳಲ್ಲಿ ಸಾಮಾನ್ಯ ದಿನ ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲು ಎದುರಾಗಲಿವೆ.
ವೃಷಭ: ಅತ್ಯಂತ ಶುಭ ದಿನವಾಗಿದ್ದು, ಅನಿರೀಕ್ಷಿತವಾಗಿ ಧನಲಾಭವಾಗಲಿದೆ. ಬೆಲೆಬಾಳುವ ವಸ್ತು ಸಿಗುವ ಸಾಧ್ಯತೆ ಇದೆ. ಶುಭ ಸಮಾಚಾರ. ವಾಹನ ಖರೀದಿಯ ಯೋಗವಿದ್ದು, ಯಶಸ್ಸು ದೊರೆಯಲಿದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಅನುಕೂಲಕರ ವಾತಾವರಣ ಇರಲಿದೆ.
ಮಿಥುನ : ಆರ್ಥಿಕವಾಗಿ ಸ್ವಲ್ಪ ಇಕ್ಕಟ್ಟಿನ ಪರಿಸ್ಥಿತಿ, ಸಾಲಕ್ಕಾಗಿ ಪ್ರಯತ್ನ. ಆಲೋಚನೆಗಳು ಸ್ಥಿರವಾಗಿರಲ್ಲ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ, ಅನಿವಾರ್ಯ ಪ್ರಯಾಣ. ವ್ಯಾಪಾರ ವಹಿವಾಟುದಲ್ಲಿ ಈ ದಿನ ಸಾಮಾನ್ಯ ಮಟ್ಟದಲ್ಲಿದ್ದು, ಉದ್ಯೋಗದಲ್ಲಿ ನಿರುತ್ಸಾಹದ ವಾತಾವರಣವಿರುತ್ತದೆ.
ಕರ್ಕಾಟಕ :ಕೈಗೆತ್ತಿಕೊಂಡ ಕೆಲಸಗಳಲ್ಲಿ ಜಯ ಸಿಗಲಿದೆ. ಸಂತೋಷದ ಸುದ್ದಿ ಕೇಳುವಿರಿ. ಹಣಕಾಸಿನ ವಿಚಾರ ತೃಪ್ತಿ ನೀಡಲಿವೆ. ಪ್ರಯಾಣದ ದಿನ. ಆಸ್ತಿ-ವಿವಾದ ಇತ್ಯರ್ಥವಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಅಭಿವೃದ್ಧಿ, ಉದ್ಯೋಗದಲ್ಲಿನ ತೊಂದರೆಗಳಿಂದ ಮುಕ್ತಿ ದೊರೆಯಲಿದೆ.

ಸಿಂಹ: ಸಾಲದ ಬಾಧೆಯಿಂದ ಮುಕ್ತಿ. ಅಚ್ಚರಿ ಮೂಡಿಸುವ ಘಟನೆ ನಡೆಯಲಿವೆ. ಔತಣಕೂಟ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಕಾರ್ಯಸಿದ್ಧಿಯ ಯೋಗವಿದ್ದು, ಸಾರ್ವಜನಿಕವಾಗಿ ಗೌರವ ಸನ್ಮಾನ ದೊರೆಯಲಿವೆ. ವ್ಯಾಪಾರದಲ್ಲಿನ ಏರಿಳಿತ ನಿವಾರಣೆಯಾಗಲಿವೆ ಮತ್ತು ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಲಿವೆ.
ಕನ್ಯಾ : ಕೆಲಸ ಕಾರ್ಯಗಳಲ್ಲಿ ಅಡೆತಡೆ ಎದುರಾಗಲಿವೆ. ಕುಟುಂಬದ ಸದಸ್ಯರೊಂದಿಗೆ ವೈಮನಸ್ಸು ಮೂಡಬಹುದು. ಆರೋಗ್ಯದ ವಿಷಯದಲ್ಲಿ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಉದ್ಯೋಗಕ್ಕಾಗಿ ಮಾಡುವ ಪ್ರಯತ್ನ ನಿಧಾನಗತಿಯಲ್ಲಿ ಸಾಗಲಿವೆ. ವ್ಯಾಪಾರ ಎಂದಿನಂತೆ ಸಾಮಾನ್ಯ ರೀತಿಯಲ್ಲಿ ನಡೆಯಲಿವೆ ಮತ್ತು ಉದ್ಯೋಗಸ್ಥರು ಕೆಲಸದ ಒತ್ತಡ ಎದುರಿಸಬೇಕಾಗುತ್ತದೆ.
ಸಿನಿಮೀಯ ಶೈಲಿಯಲ್ಲಿ ₹96 ಲಕ್ಷ ಕಳ್ಳತನ, 24 ಗಂಟೆಯಲ್ಲಿ ಪೊಲೀಸರ ರೋಚಕ ಆಪರೇಷನ್, ಜೆಪಿ ಬರೆಯುತ್ತಾರೆ
ತುಲಾ : ಬಂಧುಗಳ ಕಡೆಯಿಂದ ಒತ್ತಡ ಬರಲಿವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಲಿದೆ. ಕೈಗೊಂಡ ಕೆಲಸ ನಿಧಾನವಾಗಿ ಸಾಗಬಹುದು. ಆಲೋಚನೆ ಸ್ಥಿರವಾಗಿರಲ್ಲ, ಪ್ರಮುಖ ಕೆಲಸಗಳಲ್ಲಿ ವಿಘ್ನ. ವ್ಯಾಪಾರಗಳಲ್ಲಿ ಅಲ್ಪ ಪ್ರಮಾಣದ ಲಾಭ, ಉದ್ಯೋಗದಲ್ಲಿ ಹೆಚ್ಚುವರಿ ಕೆಲಸದ ಭಾರ.
ವೃಶ್ಚಿಕ : ಹೊಸ ಕೆಲಸಗಳಿಗೆ ಚಾಲನೆ. ಹಣಕಾಸಿನ ಸ್ಥಿತಿಯು ಸುಧಾರಿಸಲಿದೆ. ಹೊಸ ಉದ್ಯೋಗ, ವಿವಾದಗಳಿಂದ ದೂರ. ವ್ಯಾಪಾರ ವಹಿವಾಟುಗಳಲ್ಲಿ ಈ ದಿನವೂ ಅನುಕೂಲಕರವಾಗಿರಲಿವೆ ಮತ್ತು ಉದ್ಯೋಗದಲ್ಲಿ ಪ್ರಗತಿ.

ಧನುಸ್ಸು : ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸಲಿದ್ದಾರೆ. ಆಸ್ತಿ-ಸಂಬಂಧಿ ವಿಷಯ ಇತ್ಯರ್ಥವಾಗಲಿವೆ. ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ವ್ಯವಹಾರಗಳಲ್ಲಿ ಯಶಸ್ಸು. ದೇವಸ್ಥಾನಗಳಿಗೆ ಭೇಟಿ. ವ್ಯಾಪಾರದಲ್ಲಿ ಲಾಭವಾಗಲಿದ್ದು, ಉದ್ಯೋಗದಲ್ಲಿ ಉತ್ತಮ ವಾತಾವರಣವಿರುತ್ತದೆ.
ಮಕರ : ಬಂಧುಗಳೊಂದಿಗೆ ಕಲಹ ಉಂಟಾಗಬಹುದು. ಆರೋಗ್ಯ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಲಿವೆ. ಉದ್ಯೋಗದ ಪ್ರಯತ್ನ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವ್ಯಾಪಾರ ಸಾಧಾರಣವಾಗಿ ನಡೆಯಲಿದ್ದು, ಉದ್ಯೋಗದಲ್ಲಿ ಕೆಲವು ಕಿರಿಕಿರಿ ಎದುರಾಗಲಿವೆ.
ರೋಡ್ ಸೈಡ್‌ನಲ್ಲಿ ಕಾಡುಕೋಣದ ಬೇಟೆ | ಹೊಸನಗರ ಸಂಪೆಕಟ್ಟೆಯಲ್ಲಿ ಅರಣ್ಯ ಇಲಾಖೆಗೆ ಶಾಕ್
ಕುಂಭ : ಕೆಲಸಗಳಲ್ಲಿ ಅಡಚಣೆ ಉಂಟಾಗಲಿವೆ. ಆರ್ಥಿಕ ವಿಷಯಗಳಲ್ಲಿ ಹಿನ್ನಡೆ. ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಬಂಧುಗಳೊಂದಿಗೆ ವಾಗ್ವಾದ. ದೂರ ಪ್ರಯಾಣ. ವ್ಯಾಪಾರವು ಮಂದಗತಿಯಲ್ಲಿ ಸಾಗಲಿದೆ. ಉದ್ಯೋಗದಲ್ಲಿ ಏರಿಳಿತ
ಮೀನ : ಉತ್ತಮ ಸುದ್ದಿಗಳನ್ನು ಕೇಳಲಿದ್ದಾರೆ. ಆರ್ಥಿಕವಾಗಿ ಪ್ರಗತಿ. ಉತ್ಸಾಹದಿಂದ ಕೆಲಸ. ಪ್ರಮುಖ ವ್ಯಕ್ತಿಗಳ ಪರಿಚಯ. ಸಮಾಜದಲ್ಲಿ ಗೌರವ. ವಾಹನಗ ಖರೀದಿಸುವ ಯೋಗವಿದೆ. ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಪ್ರೋತ್ಸಾಹ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಶಿವಮೊಗ್ಗ, ಚನ್ನಗಿರಿ, ದಾವಣಗೆರೆ, ಶಿರಸಿ! ಎಷ್ಟಿದೆ ಅಡಕೆ ರೇಟು? ಮಾರ್ಕೆಟ್ನಲ್ಲಿ ಏನಾಗ್ತಿದೆ?
