ನಿರ್ದೇಶನಕ್ಕಿಳಿದ ಪೃಥ್ವಿ ಅಂಬರ್ : ಎಐ ಜೆನರೇಟೆಡ್​ ಪೋಷ್ಟರ್​ನಲ್ಲಿ ಅರವಿಂದ್​ ಬೋಳಾರ್​​ ಡಾನ್​ 

prathapa thirthahalli
Prathapa thirthahalli - content producer

Prithvi ambar :  ಶಿವಮೊಗ್ಗ: ‘ದಿಯಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟ ಪೃಥ್ವಿ ಅಂಬರ್ ಇದೀಗ ತುಳು ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ‘ಬುಲ್‌ಡಾಗ್’ ಎಂದು ಹೆಸರಿಡಲಾಗಿದ್ದು, ಇಂದು ಈ ಚಿತ್ರದ ಶೀರ್ಷಿಕೆ ಟೀಸರ್ ಬಿಡುಗಡೆಯಾಗಿದೆ.

ಈ ಹಿಂದೆ ತುಳು ಚಿತ್ರಗಳಲ್ಲಿ ನಟಿಸಿ ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಪೃಥ್ವಿ, ‘ದಿಯಾ’, ‘ಬೈರಾಗಿ’, ‘ದೂರದರ್ಶನ’, ‘ಕೊತ್ತಲವಾಡಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಕನ್ನಡದಲ್ಲಿ ನಟನೆಯನ್ನು ಮುಂದುವರೆಸುತ್ತಿರುವಂತೆಯೇ, ಇದೀಗ ಅವರು ತುಳು ಚಿತ್ರದ ನಿರ್ದೇಶನದತ್ತ ಮುಖ ಮಾಡಿದ್ದಾರೆ.

ಬುಲ್‌ಡಾಗ್ ಚಿತ್ರದ ಟೈಟಲ್ ಟೀಸರ್‌ನಲ್ಲಿ ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್ ಅವರನ್ನು ‘ಬೋಳಾರ್‌ನ ಡಾನ್’ ಆಗಿ ಪರಿಚಯಿಸಲಾಗಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ವಿನ್ಯಾಸಗೊಳಿಸಲಾದ ಈ ಟೀಸರ್‌ನಲ್ಲಿ, ಅರವಿಂದ್ ಬೋಳಾರ್ ಸೂಟ್-ಬೂಟ್ ಧರಿಸಿ ಸಿಗಾರ್ ಹಿಡಿದು ಐಷಾರಾಮಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತುಳು ಚಿತ್ರರಂಗದಲ್ಲಿ ಎಐ ಬಳಸಿ ವಿನ್ಯಾಸಗೊಳಿಸಿದ ಮೊದಲ ಮೋಷನ್ ಪೋಸ್ಟರ್ ಎಂದು ಚಿತ್ರತಂಡ ತಿಳಿಸಿದೆ.

ಈ ಚಿತ್ರವನ್ನು ಅಸ್ತ್ರ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಂಚುಲಾಲ್ ಕೆ.ಎಸ್.ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ನಿಶಾನ್ ರೈ ಸಂಗೀತ ಸಂಯೋಜನೆ ನೀಡಲಿದ್ದಾರೆ.

Prithvi ambar

bull dog poster
bull dog poster

Share This Article