3 ಜಿಲ್ಲೆ ,10 ಊರು, 18 ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಪ್ರಾಥಮಿಕ ಶಾಲೆಯ ಶಿಕ್ಷಕ

Malenadu Today

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಠಾಣೆ ಪೊಲೀಸರು ಕಳೆದ ನವೆಂಬರ್​ 18 ರಂದು ನಡೆದಿದ್ದ 2 ಕಳ್ಳತನ ಪ್ರಕರಣವನ್ನು ಭೇದಿಸಲು ಮುಂದಾಗಿದ್ದರು. ಈ ಸಂಬಂಧ ತನಿಖೆಯನ್ನು ಗಂಭೀರವಾಗಿ ನಡೆಸಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಅಂತರ್ ಜಿಲ್ಲಾ ಕಳ್ಳರ ಗ್ಯಾಂಗ್​.. ವಿಶೇಷ  ಅಂದರೆ, ಈ ಗ್ಯಾಂಗ್​ನ್ನ ಮುನ್ನೆಡೆಸುತ್ತಿದ್ದವನು ಒಬ್ಬ ಪ್ರಾಥಮಿಕ ಶಾಲೆ ಶಿಕ್ಷಕ. ಹೌದು, ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಗಾಳಪೂಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಸಂತ್‌ಕುಮಾರ್ ತಂಬಾಕದ (40) ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. 

ಇದನ್ನು ಸಹ ಓದಿ : ಶಿವಮೊಗ್ಗದ ಗೂಂಡಾಗಳಿಗೆ ಗಡಿಪಾರು ಖಾಯಂ/ 2 ತಿಂಗಳಿನಲ್ಲಿ 22 / ವರ್ಷದಲ್ಲಿ 45 ಮಂದಿಗೆ ಗೇಟ್​ಪಾಸ್​ ಲಿಸ್ಟ್​

ಇನ್ನೊಬ್ಬ ಆರೋಪಿ ರಾಣೆಬೆನ್ನೂರು ತಾಲ್ಲೂಕು ಗುಡ್ಡದಬೇವಿನಹಳ್ಳಿ ಗ್ರಾಮದ ನಿವಾಸಿ ಕಾರು ಚಾಲಕ ಸಲೀಂ ಕಮ್ಮಾರ (28). ಶೋಕಿ ಜೀವನಕ್ಕಾಗಿ ಈ ಆರೋಪಿಗಳು ನಾಲ್ಕು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದು ಎಲ್ಲಿಯು ಸಿಕ್ಕಿಬಿದ್ದಿರಲಿಲ್ಲವಂತೆ. ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಊರುಗಳಲ್ಲಿ ಇವರು ಕಳ್ಳತನ ನಡೆಸ್ತಿದ್ದರೂ, ಕೇವಲ ಪ್ರಕರಣ ದಾಖಲಾಗುತ್ತಿತ್ತು. ಆರೋಪಿಗಳು ಮಾತ್ರ ಸಿಗುತ್ತಿರಲಿಲ್ಲ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು,  ಮೂರು ಜಿಲ್ಲೆಯಲ್ಲಿ ನಡೆದಿದ್ದ ಒಟ್ಟೂ 18 ದೇವಸ್ಥಾನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. 

ಇದನ್ನು ಸಹ ಒದಿ : ಅಡಿಕೆ ದರ  ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ  ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಅಲ್ಲದೆ  ಕೃತ್ಯಕ್ಕೆ ಬಳಸಿದ 1] ಮಾರುತಿ ನೆಕ್ಸಾ ಕಂಪನಿಯ ಎಸ್.ಕ್ರಾಸ್ ಕಾರ್​-01,  2] ಬಜಾಜ್​ ಪ್ಲಾಟಿನಾ ಕಂಪನಿಯ ಮೋಟಾರ ಸೈಕಲ್  3] ನಗದು ಹಣ 2,29,000 ರೂಪಾಯಿ 4] 50 ಸಾವಿರ ಮೌಲ್ಯದ  9 ಗ್ರಾಂ ತೂಕದ ದೇವರ ಬಂಗಾರದ ಆಭರಣಗಳು,  5] 1 ಲಕ್ಷದ 80 ಸಾವಿರ ಮೌಲ್ಯದ 3 ಕೆ.ಜಿ 400 ಗ್ರಾಂ ತೂಕದ ದೇವರ ಬೆಳ್ಳಿಯ ಆಭರಣಗಳು, 6] 1 ಲಕ್ಷದ 45 ಸಾವಿರ ಮೌಲ್ಯದ ಹಿತ್ತಾಳೆಯ 140 ಘಂಟೆಗಳು,   40 ಸಾವಿರ ಮೌಲ್ಯದ   27 ಹಿತ್ತಾಳೆಯ ದೀಪದ ಶಮೆ,  8] 22 ಹಿತ್ತಾಳೆಯ ತೂಗು ದೀಪಗಳು 9] 7 ತಾಮ್ರದ ಕೊಡಗಳು,  ಹಾಗೂ 8] ಇನ್ನಿತರೇ 35 ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಗ್ರಿಗಳು, 9] ಡಿ.ವಿ.ಆರ್-01 ಹೀಗೆ ಒಟ್ಟು 19,20,285/- ಬೆಲೆಯ ಸ್ವತ್ತನ್ನು ಜಪ್ತು ಮಾಡಲಾಗಿದೆ. 

BREAKING NEWS  | India Cyber Cop Award ಪ್ರಶಸ್ತಿ ಪಟ್ಟಿಯಲ್ಲಿ ಶಿವಮೊಗ್ಗದ ಸೈಬರ್​ ಕ್ರೈಂ ಪೊಲೀಸ್​ ಠಾಣೆ ಕೇಸ್​ &  ತನಿಖಾಧಿಕಾರಿ ಕೆ.ಟಿ ಗುರುರಾಜ್​ 

ನವೆಂಬರ್ 18ರಂದು ಯಲ್ಲಾಪುರ ಸಮೀಪದ ಮಂಚಿಕೇರಿಯ ಮಹಾ ಗಜಲಕ್ಷ್ಮೀ ದೇವಸ್ಥಾನದ ಕಾಣಿಕೆ ಹುಂಡಿ ಒಡೆದು ನಗದು ಕಳ್ಳತನ ಮಾಡಲಾಗಿತ್ತು. ಅದೇ ದಿನ ಗುಳ್ಳಾಪುರ ಗ್ರಾಮದ ಶಿವವ್ಯಾಘ್ರೇಶ್ವರ ದೇವಸ್ಥಾನದ ಬಾಗಿಲ ಬೀಗ ಒಡೆದು ಪೂಜಾ ಸಾಮಗ್ರಿ ಕಳ್ಳತನ ಆಗಿದ್ದು, ಪ್ರಕರಣಗಳ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 

ಕಳ್ಳತನವೆಸಗಿದ ಊರಿನ ವಿವರಗಳು

ಇನ್ನೂ ಈ ಆರೋಪಿಗಳನ್ನು ಬಾಡಿವಾರೆಂಟ್‌ ಮೂಲಕ ಶಿವಮೊಗ್ಗ ಜಿಲ್ಲೆಗೆ ಕರೆತಂದು ಹೆಚ್ಚಿನ ತನಿಖೆಗೆ ಒಳಪಡಿಸುವ ಬಗ್ಗೆ ಶಿವಮೊಗ್ಗ ಪೊಲೀಸರು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಇನ್ನೂ  2007ರಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆ ಆಗಿದ್ದ  ವಸಂತಕುಮಾರ್​,  ಶಿರಸಿ ತಾಲ್ಲೂಕಿನ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಕಳೆದ ಅಕ್ಟೋಬರ್​ ನಂತರ ಶಾಲೆಗೆ ಗೈರಾಗುತ್ತಿದ್ದರು ಎನ್ನಲಾಗಿದೆ. 

ಕಟ್ಸಾರ್ವಜನಿಕರ ಗಮನಕ್ಕೆ | 14 ನೇ ತಾರೀಖು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಪವರ್​ ಕಟ್

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp 

Share This Article