ಅರ್ಚಕರ ಸಂಬಳ ವಾಪಸ್! ಸಿದ್ದರಾಮಯ್ಯರ ಸರ್ಕಾರದ ವಿರುದ್ಧ ಕೆ.ಎಸ್.ಈಶ್ವರಪ್ಪ ವಾಗ್ದಾಳಿ
SHIVAMOGGA | Jan 23, 2024 | ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಂ ಎಂದು ಘೋಷಣೆ ಕೂಗಿರುವುದು ನನಗೆ ಅತೀವ ಸಂತೋಷವಾಗಿದೆ ಅಂತಾ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ರವರು ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅವರು ರಾಮನ ಭಕ್ತರು ಎಂದು ನಾನು ಮೊದಲೇ ಹೇಳಿದ್ದೆ ರುಜುವಾತಾಗಿದೆ ಎಂದುರು. ಶ್ರೀರಾಮ ಎಲ್ಲರಿಗೂ ಒಂದೇ ಕಾಂಗ್ರೆಸ್ ರಾಮ ಬಿಜೆಪಿರಾಮ ಎಂದಿಲ್ಲ.ರಾಜಕಾರಣಕ್ಕಾಗಿ ಕಾಂಗ್ರೆಸ್ ವಿಭಿನ್ನ ನಿಲುವು ತೋರುತ್ತಿದೆ. ಮಹಾತ್ಮ ಗಾಂಧಿಯವರ ಸಮಾಧಿ ಮೇಲೆ ಹೇ ರಾಮ್ ಎಂದು ಬರೆದಿದೆ. … Read more