political news : ಸಿಎಂ, ಡಿಸಿಎಂ ಹಾಗೂ ಸ್ಪೀಕರ್ಗೆ ಧನ್ಯವಾದ ತಿಳಿಸಿದ ಎಸ್ ಎನ್ ಚನ್ನಬಸಪ್ಪ
political news : ಶಾಸಕ ಸ್ಥಾನದ ಅಮಾನತ್ತನ್ನು ವಾಪಸ್ಸು ಪಡೆದಿರುವ ಸಭಾದ್ಯಕ್ಷರಾದ ಯುಟಿ ಖಾದರ್ಗೆ ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪ ಕೃತಜ್ಞತೆಯನ್ನು ತಿಳಿಸಿದರು.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹನಿಟ್ರ್ಯಾಪ್ ವಿಚಾರವಾಗಿ ನಾವು 18 ಜನ ಶಾಸಕರು ಸಭೆಯಲ್ಲಿ ಚರ್ಚೆ ನಡೆಸಿದ್ದೆವು. ಆ ವೇಳೆ ನಾವು ನಡೆದುಕೊಂಡ ರೀತಿ ಸಭಾಧ್ಯಕ್ಷರ ಪೀಠಕ್ಕೆ ಅಪಮಾನ ಮಾಡಿದಂತಿತ್ತು. ಆ ಹಿನ್ನಲೆ 18 ಜನ ಶಾಸಕರನ್ನು 6 ತಿಂಗಳುಗಳ ಕಾಲ ಅಮಾನತ್ತು ಮಾಡಲಾಗಿತ್ತು. ಇದು ನಡೆದು ಕೆಲ ತಿಂಗಳ ನಂತರ ನಮ್ಮ ವಿರೋದ ಪಕ್ಷದ ನಾಯರಾದ ಆರ್ ಅಶೋಕ್ರವರು ಸಭಾದ್ಯಕ್ಷರಾದ ಯುಟಿ ಖಾದರ್, ಸಿಎಂ ಸಿದ್ದರಾಮಯ್ಯ, ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ರವರೊಡನೆ ಸಭೆನಡೆಸಿ ಅಮಾನತ್ತನ್ನು ವಾಪಾಸ್ಸು ಪಡೆಯುವಂತೆ ಮಾಡಿದ್ದಾರೆ. ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಅಮಾನತ್ತು ಆದೇಶ ವಾಪಾಸ್ ಪಡೆದ ಅವರೆಲ್ಲರಿಗೂ ಧನ್ಯವಾದಗಳು ಎಂದರು.
ಆದರೆ ಹನಿಟ್ರ್ಯಾಪ್ ವಿಚಾರ ಹಾಗೆಯೇ ಉಳಿದಿದೆ. ಸದನ ಮುಗಿದು ಕೆಲ ತಿಂಗಳು ಕಳೆದರೂ ಸಚಿವ ರಾಜಣ್ಣರಿಗೆ ನ್ಯಾಯ ಸಿಕ್ಕಿದೆಯೋ ಇಲ್ಲವೂ ಎಂಬುದು ತಿಳಿದಿಲ್ಲ. ಸಚಿವ ರಾಜಣ್ಣ ಬಹಳ ನೊಂದು ಆ ವಿಷಯ ಪ್ರಸ್ತಾಪಿಸಿದ್ದರು.ಆದರೆ ಹನಿಟ್ರ್ಯಾಪ್ ವಿಚಾರದ ಬಗ್ಗೆ ಸತ್ಯ ಸಂಗತಿ ಹೊರಗೆ ಬಾರದೆ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಎಂದರು.
