ಹೆಡ್ ಕಾನ್‌ಸ್ಟೇಬಲ್ ಆತ್ಮಹತ್ಯೆ; ಎಸ್ಪಿ ನಿಖಿಲ್ ಬಿ  ಹೇಳಿದ್ದೇನು 

ಶಿವಮೊಗ್ಗ: ಜಿಲ್ಲೆಯ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್‌ಸ್ಟೇಬಲ್ ಒಬ್ಬರು ಠಾಣೆಯ ಒಳಗಡೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನಗೆ ಸಂಬಂಧಿಸಿದಂತೆ ಎಸ್​ ಪಿ ನಿಖಿಲ್​ ಬಿ ಮಾಹಿತಿ ನೀಡಿದ್ದಾರೆ. 

police Commits Suicide After SendingWhatsAp Note
police Commits Suicide After SendingWhatsAp Note

ಸಂಕ್ರಾಂತಿ ವಿಶೇಷ : ತಾಳಗುಪ್ಪ ಶಿವಮೊಗ್ಗ ಬೆಂಗಳೂರು ನಡುವೆ 2 ಸ್ಪೆಷಲ್ ಟ್ರೈನ್​ ಓಡಾಟ! ವೇಳಾಪಟ್ಟಿ ಇಲ್ಲಿದೆ

ಈ ಕುರಿತು ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು ಜಕ್ರೀಯಾ ಅವರು ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದ ಕಾರಣ ರಜೆಯಲ್ಲಿದ್ದರು. ಜನವರಿ 6 ರಂದು ಪುನಃ ಕರ್ತವ್ಯಕ್ಕೆ ಹಾಜರಾಗಿದ್ದರು.  ನಿನ್ನೆ ರಾತ್ರಿ ಸ್ಟೇಷನ್ ಹೌಸ್ ಆಫೀಸರ್ (SHO) ಆಗಿ ಇವರನ್ನು ಕರ್ತವ್ಯಕ್ಕೆ ನೇಮಿಸಲಾಗಿತ್ತು. ಇಂದು ಮುಂಜಾನೆ 5 ರಿಂದ 5.30ರ ಸುಮಾರಿಗೆ ಠಾಣೆಯ ಕಬ್ಬಿಣದ ಬಾಗಿಲಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಆತ್ಮಹತ್ಯೆಗೂ ಮುನ್ನ ಜಕ್ರೀಯಾ ಅವರು ವಾಟ್ಸಪ್‌ನಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದು, ಸಹೋದ್ಯೋಗಿಯೊಬ್ಬರ ಹೆಸರನ್ನು ಉಲ್ಲೇಖಿಸಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಇತರರ ಜೊತೆ ಮಾತನಾಡಿ ಕಿಂಡಲ್ ಮಾಡಿದ್ದಾರೆ ಎಂದು ಆರೋಪಿಸಿ ಎಲ್ಲ ಅಧಿಕಾರಿಗಳಿಗೂ ಮೆಸೇಜ್ ಶೇರ್ ಮಾಡಿದ್ದಾರೆ ಎನ್ನಲಾಗಿದೆ. 

ಜಕ್ರೀಯಾ ಅವರು ಈ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು ಮತ್ತು ಮಾನಸಿಕವಾಗಿ ನೊಂದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.  ಘಟನೆ ಕುರಿತಾಗಿ ಹೆಚ್ಚಿನ ಮಾಹಿತಿಗೆ ತನಿಖೆಯನ್ನು ನಡೆಸುತ್ತಿದ್ದೇವೆ ಎಂದರು. 

police Commits Suicide After Sending WhatsAp Note

police Commits Suicide After SendingWhatsAp Note
police Commits Suicide After SendingWhatsAp Note
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು