ಬಸ್​​ ಟಯರ್​ ಬ್ಲಾಸ್ಟ್,​ ಬೈಕ್​ ಸವಾರ ಸಾವು 

ಹಂಚಿಕೊಳ್ಳಿ
WhatsApp Facebook X Telegram
 Bhadravathi bus tire blast accident in BRP Junction
 Bhadravathi bus tire blast accident in BRP Junction

ಭದ್ರಾವತಿ: ಚಲಿಸುತ್ತಿದ್ದ ಖಾಸಗಿ ಬಸ್‌ನ ಟಯರ್  ಬ್ಲಾಸ್ಟ್​ ಆದ  ಪರಿಣಾಮ, ಪಕ್ಕದಲ್ಲೇ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಬಿಆರ್‌ಪಿ ಹೆಚ್.ಕೆ. ಜಂಕ್ಷನ್ ಬಳಿ ಸಂಭವಿಸಿದೆ. 

ಶಿವಮೊಗ್ಗ ಸಿಮ್ಸ್ ಹಾಸ್ಟೆಲ್‌ನಲ್ಲಿ ರೇಡಿಯಾಲಜಿ ವಿಭಾಗದ ಪಿಜಿ ವೈದ್ಯ ಆತ್ಮಹತ್ಯೆ

ಬೀರು (42)  ಈ ಅಪಘಾತದಲ್ಲಿ ಬಲಿಯಾದ ದುರ್ದೈವಿ. ಇವರು ಭದ್ರಾವತಿಯಿಂದ ಕೂಲಿ ಮಹಿಳೆ ಲಕ್ಷ್ಮೀ ಎಂಬುವರನ್ನು ಬೈಕ್‌ನಲ್ಲಿ ರಂಗೇನಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಅಂಗಳ ಪರಮೇಶ್ವರಿ ದೇವಸ್ಥಾನದ ಬಳಿ ಬೈಕ್ ಚಲಿಸುತ್ತಿದ್ದಾಗ, ಪಕ್ಕದಲ್ಲೇ ಸಾಗುತ್ತಿದ್ದ ಖಾಸಗಿ ಬಸ್ ಓವರ್ ಟೇಕ್ ಮಾಡಲು ಪ್ರಯತ್ನಿಸಿದೆ.

ಬಸ್ ಬೈಕ್‌ನಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಅದರ ಟಯರ್ ಸ್ಫೋಟಗೊಂಡಿದೆ (Blast). ಈ ಸಂದರ್ಭದಲ್ಲಿ ಬಸ್‌ನ ಚಕ್ರದಲ್ಲಿದ್ದ ಕಬ್ಬಿಣದ ಚೂರೊಂದು ಸಿಡಿದು ವೇಗವಾಗಿ ಬಂದು ಬೀರು ಅವರ ತಲೆಗೆ ಬಡಿದಿದೆ. ತೀವ್ರ ಪೆಟ್ಟಾದ ಪರಿಣಾಮ ಬೈಕ್ ಸವಾರ ಮತ್ತು ಹಿಂಬದಿ ಕುಳಿತಿದ್ದ ಮಹಿಳೆ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. 

ತಕ್ಷಣವೇ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಹಿಂಬದಿ ಸವಾರೆ ಲಕ್ಷ್ಮೀ ಅವರಿಗೆ ಮೆಗ್ಗಾನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ತಲೆಗೆ ಗಂಭೀರ ಗಾಯವಾಗಿದ್ದ ಬೀರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

 Bhadravathi bus tire blast accident in BRP Junction

 Bhadravathi bus tire blast accident in BRP Junction
Bhadravathi bus tire blast accident in BRP Junction

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor