ಜನವರಿ 17 ಮತ್ತು 18ರಂದು ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ: ಏನೆಲ್ಲಾ ಕ್ರೀಡೆಗಳು ಇರಲಿವೆ

ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಜನವರಿ 17 ಮತ್ತು 18ರಂದು ಜಿಲ್ಲಾ ಮಟ್ಟದ  ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು  ಮಾಹಿತಿ ನೀಡಿದ ಜಿಲ್ಲಾಧ್ಯಕ್ಷ ಆರ್. ಮೋಹನ್‌ಕುಮಾರ್ ಅವರು, ಈ ಕ್ರೀಡಾ ಹಬ್ಬದಲ್ಲಿ ಜಿಲ್ಲೆಯ ಸುಮಾರು 3000ಕ್ಕೂ ಹೆಚ್ಚು ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Government Employees Sports Meet Jan 17-18
Government Employees Sports Meet Jan 17-18

ಶಿವಮೊಗ್ಗ ಸಿಮ್ಸ್ ಹಾಸ್ಟೆಲ್‌ನಲ್ಲಿ ರೇಡಿಯಾಲಜಿ ವಿಭಾಗದ ಪಿಜಿ ವೈದ್ಯ ಆತ್ಮಹತ್ಯೆ 

ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರರಿಗೆ ಉತ್ತೇಜನ ನೀಡಲು ಜಿಲ್ಲಾಡಳಿತದಿಂದ ಎರಡು ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದ್ದು, ಸ್ಪರ್ಧಾ ದಿನಗಳಂದು ಊಟೋಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪೊಲೀಸ್ ಮತ್ತು ಕ್ರೀಡಾ ಕೋಟಾದಡಿ ಆಯ್ಕೆಯಾದವರನ್ನು ಹೊರತುಪಡಿಸಿ, ಅರಣ್ಯ, ಅಗ್ನಿಶಾಮಕ ಸೇರಿದಂತೆ ಎಲ್ಲಾ ಇಲಾಖೆಯ ಪ್ರತಿಭಾವಂತ ನೌಕರರು ಈ ಸ್ಪರ್ಧೆಗಳಲ್ಲಿ ತಮ್ಮ ಕೌಶಲ ಪ್ರದರ್ಶಿಸಲು ಅವಕಾಶವಿದೆ. 

Government Employees Sports ಏನೆಲ್ಲಾ ಕ್ರೀಡೆಗಳು ಇರಲಿವೆ. 

ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಕೂಟದಲ್ಲಿ ಪ್ರಮುಖವಾಗಿ ಪುಟ್ಬಾಲ್‌, ವಾಲಿಬಾಲ್‌, ಹಾಕಿ, ಕಬ್ಬಡ್ಡಿ, ಟೇಬಲ್‌ಟೆನ್ನೀಸ್‌, ಷಟಲ್‌ಬ್ಯಾಡ್ಮಿಂಟನ್‌, ಬಾಲ್‌ಬ್ಯಾಡ್ಮಿಂಟನ್‌, ಕೇರಂ, ಕ್ರಿಕೆಟ್‌, ಬಾಸ್ಕೆಟ್‌ಬಾಲ್‌, ಚೆಸ್‌, ಥ್ರೋಬಾಲ್‌, ಖೋ-ಖೋ, ಯೋಗ, ಈಜು, ಓಟ ಇರಲಿದೆ. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕರ್ನಾಟಕ-ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಲಘು ಸಂಗೀತ, ಜಾನಪದ ಗೀತೆ, ಪಾಶ್ಚಾತ್ಯ ಸಂಗೀತ, ಪಾಶ್ಚಾತ್ಯ ನೃತ್ಯ, ಕಿರುನಾಟಕಗಳು ಇರಲಿವೆ. ಜನವರಿ 17ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಈ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.ಸಂಸದ ಬಿ.ವೈ. ರಾಘವೇಂದ್ರ ಧ್ವಜಾರೋಹಣ ನೆರವೇರಿಸಲಿದ್ದು, ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು.

Government Employees Sports Meet Jan 17-18

Government Employees Sports Meet Jan 17-18
Government Employees Sports Meet Jan 17-18