ಗಲಾಟೆ ಬಿಡಿಸಲು ಹೋದ ಪೊಲೀಸ್​​ ಮೇಲೆ ಹಲ್ಲೆ : 7 ಜನರ ಮೇಲೆ ಪ್ರಕರಣ ದಾಖಲು

prathapa thirthahalli
Prathapa thirthahalli - content producer

Police assault  ಗಲಾಟೆ ಬಿಡಿಸಲು ಹೋದ  ಪಿಎಸ್​ಐ  ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಭದ್ರಾವತಿಯ ಸುರಗಿತೋಪು ಗ್ರಾಮದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸುರಗಿತೋಪುನಲ್ಲಿ ಗಣಪತಿ ವಿಸರ್ಜನೆ ಮಾಡಿ ಬರುವ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಭದ್ರಾವತಿ ಪೇಪರ್ ಟೌನ್ ಎಎಸ್ಐ ಕೃಷ್ಣಮೂರ್ತಿ ಗಲಾಟೆಯನ್ನು ನಿಲ್ಲಿಸಲು ತೆರಳಿದ್ದಾರೆ. ಆಗ ಪೊಲೀಸ್​ ಸಿಬ್ಬಂದಿ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ ಎನ್ನಲಾಗಿದೆ. ಈ ಹಿನ್ನೆಲೆ ಕರ್ತವ್ಯಕ್ಕೆ ಅಡ್ಡಿ ಕಾಯ್ದೆಯಡಿ ಏಳು ಜನರ ಮೇಲೆ ಪ್ರಕರಣ ದಾಖಲಾಗಿದೆ.

- Advertisement -

Malenadu Today

ಎಎಸ್ಐ ಕೃಷ್ಣಮೂರ್ತಿ

Share This Article