ರೋಗಿಯ ಸೋಗಿನಲ್ಲಿ ಬಂದು ನರ್ಸ್ ಮೊಬೈಲ್ ಕದ್ದ ಕಳ್ಳ

ajjimane ganesh

Chikkamagaluru, malenadu today news : ಆಸ್ಪತ್ರೆಗೆ ಚಿಕಿತ್ಸೆಗೆ ಅಂತಾ ಬಂದ ರೋಗಿಯೊಬ್ಬ ನರ್ಸ್​ವೊಬ್ಬರ ಮೊಬೈಲ್​ನ್ನೆ ಕದ್ದು ಪರಾರಿಯಾದ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ವರದಿಯಾಗಿದೆ.  

ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಚಿಕಿತ್ಸೆ ಪಡೆಯುವ ನೆಪದಲ್ಲಿ ಆಸ್ಪತ್ರೆಗೆ ಬಂದಿದ್ದ ಈ ವ್ಯಕ್ತಿ, ತನಗಾಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿ ನರ್ಸ್‌ಗೆ ಇಂಜೆಕ್ಷನ್ ನೀಡುವಂತೆ ಕೇಳಿಕೊಂಡಿದ್ದಾನೆ. ನರ್ಸ್ ಔಷಧಿಯನ್ನು ತರಲು ಹೋದಾಗ, ಅಲ್ಲಿಯೇ ಟೇಬಲ್ ಮೇಲೆ ಇಟ್ಟಿದ್ದ  ನರ್ಸ್​ನ  ಮೊಬೈಲನ್ನು ಕದ್ದು ಅಲ್ಲಿಂದ ಕಾಲ್ಕಿತ್ತಿದ್ದಾನೆ.ಈ ಸಂಬಂದ ಆಲ್ದೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

- Advertisement -

Patient Steals Nurses Phone in Chikkamagaluru Hospital

 

View this post on Instagram

 

A post shared by KA on line (@kaonlinekannada)

Share This Article
Leave a Comment

Leave a Reply

Your email address will not be published. Required fields are marked *