Pahalgam terrorist attack :ಕಾಶ್ಮೀರದಲ್ಲಿ ಪ್ರವಾಸಿಗರನ್ನು ಭಯೋತ್ಪಾದಕರು ಧರ್ಮ ಯಾವುದೆಂದು ಕೇಳಿ ಶೂಟ್ ಮಾಡಿದ್ದಾರೆಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿದ್ದು, ಈ ಬಗ್ಗೆ ಇದೀಗ ಶಿವಮೊಗ್ಗ ಮೂಲದ ಮೃತ ಮಂಜುನಾಥ್ ಪತ್ನಿ ಪಲ್ಲವಿ ಪ್ರತಿಕ್ರಿಯಿಸಿದ್ದಾರೆ.
Pahalgam terrorist attack : ಪಲ್ಲವಿ ಹೇಳಿದ್ದೇನು
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಗ್ರರು ಧರ್ಮವನ್ನು ಕೇಳಿ ಹಿಂದೂ, ಮುಸಲ್ಮಾನರಿಗೆ ಬೇರ್ಪಡಿಸಿ ಶೂಟ್ ಮಾಡಿದ್ದು ನಿಜ.ಆದರೆ ಅದನ್ನು ನಾನು ನೋಡಿಲ್ಲ. ಆ ಮಾತನ್ನು ನನಗೆ ಹೊಟೆಲ್ ನಲ್ಲಿ ಬೇರೆಯವರು ಹೇಳಿದ್ದರು. ಆದರೆ ಉಗ್ರರು ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ. ನನ್ನ ಪತಿ ಹಾಗೂ ಲೆಫ್ಟಿನೆಂಟ್ ಗೆ ಉಗ್ರರು ಒಮ್ಮೆಲೆ ಫೈರ್ ಮಾಡಿದ್ದರು. ಬಳಿಕ ಉಗ್ರಗಾಮಿಗಳು ತೆರಳುವಾಗ ನಾನು ನಮ್ಮನ್ನು ಸಹ ಶೂಟ್ ಮಾಡಿ ಎಂದು ಹೇಳಿದೆ. ಆಗ ನನ್ನ ಮಗ ಅವರ ಬಳಿ ಕುತ್ತೆ ನಮ್ಮನ್ನು ಕೊಂದುಬಿಡು ಎಂದು ಹೇಳಿದ್ದ. ಇದನ್ನು ನಿಜ ಎಂದು ಸಾಬೀತು ಪಡಿಸಲು ನಾನು ವಿಡಿಯೋ ಮಾಡಬೇಕಿತ್ತು ಅಷ್ಟೇ. ಸಾಕು ಸರ್ ಇನ್ನು ನಾನು ಈ ವಿಚಾರದ ಬಗ್ಗೆ ಏನೂ ಮಾತನಾಡಲ್ಲ. ಈಗಾಗಲೇ ಹಲವಾರು ನೆಗೆಟಿವ್ ಕಾಮೆಂಟ್ಸ್ ಗಳು ವಿನಾಕಾರಣ ಬಂದಿವೆ. ಎಂದು ಮಾದ್ಯಮಗಳೆದುರು ಪಲ್ಲವಿ ಬೇಸರವನ್ನು ವ್ಯಕ್ತಪಡಿಸಿದರು.