ನವೆಂಬರ್ 11 2025 ಮಲೆನಾಡು ಟುಡೆ ಸುದ್ದಿ : ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ಹಣ ವಸೂಲಿ, ಆಟೋ ಚಾಲಕನಿಗೆ ದಂಡ ವಿಧಿಸಿದ ಶಿವಮೊಗ್ಗ ಟ್ರಾಫಿಕ್ ಪೊಲೀಸ್

ಶಿವಮೊಗ್ಗ ಪೊಲೀಸ್ ಇಲಾಖೆ ರೈಲ್ವೆ ನಿಲ್ದಾಣದ ಬಳಿ ಪ್ರಿಪೈಡ್ ಆಟೋ ಕೌಂಟರ್ ಆರಂಭಿಸಿದೆ. ಇದರ ನಡುವೆಯು ಆಟೋ ಚಾಲಕರೊಬ್ಬರು ಹೆಚ್ಚುವರಿ ಬಾಡಿಗೆ ಕೇಳಿದ್ದಷ್ಟೆ ಅಲ್ಲದೆ, ಪ್ರಯಾಣಿಕರ ಜೊತೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲಿಲ್ಲ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರಿದ್ದರು.
ಪತ್ರ ಬರೆದಿಟ್ಟು ನಾಪತ್ತೆಯಾದ ಯುವಕ/ ಮಾಳೂರು ಸ್ಟೇಷನ್ನಿಂದ ಬಂತು ಪ್ರಕಟಣೆ! ಸಾಗರದಲ್ಲಿ ಮತ್ತೊಂದು ಮಿಸ್ಸಿಂಗ್ ಕೇಸ್
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಹೆಚ್ಚುವರಿ ಬಾಡಿಗೆ ವಸೂಲಿ ಮಾಡಿದ್ದ ಆಟೋ ಚಾಲಕನನ್ನ ವಿಚಾರಣೆ ನಡೆಸಿ ಪ್ರಯಾಣಿಕ ಮಹಿಳೆಗೆ, ಅವರು ಈ ಮೊದಲು ಹೆಚ್ಚುವರಿಯಾಗಿ ನೀಡಿದ್ದ 15 ರೂಪಾಯಿ ಬಾಡಿಗೆಯನ್ನು ವಾಪಸ್ ನೀಡಿದ್ದಾರೆ. ಅಲ್ಲದೆ ರೈಲ್ವೆ ನಿಲ್ದಾಣದ ಆಟೋ ಪ್ರೀಪೇಯ್ಡ್ (Prepaid) ಟಿಕೆಟ್ ದರಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡಿದ ಆರೋಪದ ಅಡಿಯಲ್ಲಿ ಐಎಂವಿ ಕಾಯ್ದೆಯಡಿ Indian Motor Vehicle Act ದಂಡ ವಿಧಿಸಿದ್ದಾರೆ. ಜೊತೆಯಲ್ಲಿ ಇನ್ಮುಂದೆ ಈ ರೀತಿಯಲ್ಲಿ ಮಾಡದಂತೆ ಆಟೋ ಚಾಲಕನಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ರಿಪ್ಪನ್ ಪೇಟೆ : ಸೌದಿ ಅರೇಬಿಯಾದಿಂದ ಬಂದ 48 ಗಂಟೆಗಳಲ್ಲೇ ಯುವಕ ಹೃದಯಾಘಾತದಿಂದ ಸಾವು
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
