ಹುಲಿ ಉಗುರು ಸೇರಿದಂತೆ ವನ್ಯಪ್ರಾಣಿಗಳ ಅಂಗಾಂಗ ಒಪ್ಪಿಸಲು ನೀಡಿರುವ ಅವಕಾಶದಲ್ಲಿಯೇ ಲೋಪ ಇದ್ಯಾ? ಜೆಪಿ ಬರೆಯುತ್ತಾರೆ.

In the opportunity given to hand over the organs of wild animals, including tiger claws, Is there a loophole? JP writes.

ಹುಲಿ ಉಗುರು ಸೇರಿದಂತೆ ವನ್ಯಪ್ರಾಣಿಗಳ ಅಂಗಾಂಗ  ಒಪ್ಪಿಸಲು ನೀಡಿರುವ ಅವಕಾಶದಲ್ಲಿಯೇ ಲೋಪ ಇದ್ಯಾ? ಜೆಪಿ ಬರೆಯುತ್ತಾರೆ.
In the opportunity given to hand over the organs of wild animals, including tiger claws, Is there a loophole? JP writes.

SHIVAMOGGA  |  Jan 19, 2024  |  ಮಲೆನಾಡಿಗರಿಗೆ ಕಂಟಕವಾದ ಅರಣ್ಯ ಇಲಾಖೆಯ ಬಿಗ್ ಆಫರ್..ವನ್ಯಪ್ರಾಣಿಗಳ ಅಂಗಾಂಗಗಳನ್ನು ಇಲಾಖೆಗೆ ಒಪ್ಪಿಸಲು ಕಾನೂನಿನಲ್ಲಿ ನೀಡಿರುವ ಅವಕಾಶದಲ್ಲಿಯೇ ಲೋಪ ಇರುವುದು ಎದ್ದು ಕಾಣುತ್ತಿದೆ. ಜೆಪಿ ಬರೆಯುತ್ತಾರೆ.

ರಾಜ್ಯದಲ್ಲಿ ಅರಣ್ಯ ಕಾಯ್ದೆಗಳು ಪೊಲೀಸ್ ಕಾಯ್ದೆಗಳಿಗಿಂತಲೂ ತುಂಬ ಕಠಿಣವಾಗಿದೆ, ಓರ್ವ ವಾಚರ್ ನಿಂದ ಹಿಡಿದು ಮೇಲಾಧಿಕಾರಿಯವರಿಗೆ ಎಪ್.ಐ.ಆರ್ ಹಾಕುವ ಅವಕಾಶ ನೀಡಲಾಗಿದೆ. ಆದರೆ ಇಲಾಖೆಯ ಈ ಕಠಿಣ ಕಾಯ್ದ ಕಾನೂನುಗಳು ಹಲ್ಲು ಕಿತ್ತ ಹಾವಿನಂತಾಗಿದೆ. ವನ್ಯಜೀವಿ ಅಂಗಾಗಗಳನ್ನು ಮನೆಯಲ್ಲಿಟ್ಟಿಕೊಳ್ಳುವುದೇ ಅಪರಾಧ ಎಂದ ಕಾನೂನು ಜಾರಿಯಲ್ಲಿದ್ದು ಮೂರು ದಶಕಗಳೇ ಕಳೆದಿದೆ.

ಆದರೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವರ್ತೂರು ಸಂತೋಷ್ ಹುಲಿ ಉಗುರಿನ ಪ್ರಕರಣದಿಂದ ಆರಂಭವಾದ, ಅಭಿಯಾನ. ಮಲೆನಾಡಿನ ಮನೆ ಮನೆಗಳಿಗೂ ಎಚ್ಚರಿಕೆಯ ಕರೆಗಂಟೆ ನೀಡಿದೆ. ಈ ಅಭಿಯಾನ ಸೋಶಿಯಲ್ ಮೀಡಿಯಾ ಟ್ರೆಂಡಿಂಗ್​ ಆದ ಬೆನ್ನಲ್ಲೆ  ಸರ್ಕಾರ ವನ್ಯ ಪ್ರಾಣಿ ಅಂಗಾಂಗ ಅಥವಾ ಟ್ರೋಫಿಗಳನ್ನು ಸರ್ಕಾರಕ್ಕೆ ವಾಪಸ್ಸು ನೀಡಲು ಮುಕ್ತ ಅವಕಾಶ ನೀಡಿದೆ.

ಆದರೆ ಷರತ್ತಿನಲ್ಲಿಯೇ ಗೊಂದಲವಿರುವುದರಿಂದ ಜನರು ತಮ್ಮ ಮನೆಗಳಲ್ಲಿರುವ ವನ್ಯಪ್ರಾಣಿ ಅಂಗಾಗ ಅಥವಾ ಟ್ರೋಫಿಯನ್ನು ವಾಪಸ್ಸು ಕೊಡಲು ಮುಂದಾಗುವರೇ ಎಂಬ ಅನುಮಾನ ಕಾಡತೊಡಗುತ್ತದೆ. 

ನೂತನ ಪ್ರಕಟಣೆಯಲ್ಲಿ ಏನು ಹೇಳಲಾಗಿದೆ

ಇದಕ್ಕೆ ಪೂರಕವಾಗಿ ಹೇಳುವುದಾದರೆ, ಈ ಸಂಬಂಧ ಪ್ರಕಟಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಂಗಾಂಗ ವಾಪಸ್ಸು ಪಡೆಯಬೇಕಾದ ಸಂದರ್ಭದಲ್ಲಿ ಸ್ವೀಕೃತವಾಗುವ ವನ್ಯಪ್ರಾಣಿಗಳ ಅಂಗಾಂಗಗಳು ಕಾನೂನುಬಾಹಿರ ಯಾವುದಾದರೂ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದೆ ಎಂಬ ಅನುಮಾನ ಅಥವಾ ದೂರು ಬಂದಲ್ಲಿ ನಿಯಮ-6 ರಡಿಯಲ್ಲಿ ವಿಚಾರಣೆ ನಡೆಸಿ ಅಂತಹ ವನ್ಯಪ್ರಾಣಿ ಅಂಗಾಂಗಗಳು ಯಾವುದೇ ವನ್ಯಪ್ರಾಣಿಯದ್ದಾಗಿರುವುದಿಲ್ಲವೆಂದು ಧೃಡೀಕರಿಸಲ್ಪಡುವುದು.

ಒಂದು ವೇಳೆ ಅಂತಹ ಅಂಗಾಂಗಗಳು ಬೇಟೆ / ಕೊಲ್ಲಲ್ಪಟ್ಟ ವನ್ಯಪ್ರಾಣಿಯದಾಗಿದ್ದಲ್ಲಿ ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ರನ್ವಯ ಪ್ರಕರಣ ದಾಖಲಿಸಿ ಎಲ್ಲಾ ವಿಚಾರಣೆಗಳನ್ನು ಸ್ವೀಕರಿಸಿದ ದಿನಾಂಕದಿಂದ 90 ದಿನದೊಳಗೆ ಮುಕ್ತಾಯಗೊಳಿಸಿ ಸಂಬಂಧಪಟ್ಟ ಅಧಿಕೃತ ವ್ಯಕ್ತಿಗೆ ಅಂಗಾಂಗಗಳನ್ನು ವರ್ಗಾಯಿಸುವುದು ಎಂದು ತಿಳಿಸಲಾಗಿದೆ. 

ಹಾಗೆ ನೋಡಿದರೆ, ವನ್ಯ ಪ್ರಾಣಿಗಳ ಅಂಗಾಂಗಗಳನ್ನು ಈ ಹಿಂದೆ ಬೇಟೆಯಾಡಿಯೇ ಅದರ ಅಂಗಾಂಗಗಳನ್ನು ಮನೆಯಲ್ಲಿ ಶೋಗಾಗಿ ಇಡಲಾಗುತ್ತಿತ್ತು. ಪೂರ್ವಜರ ಕಾಲದಿಂದ ಮಲೆನಾಡಿನ ಮನೆಗಳಲ್ಲಿ ವನ್ಯಪ್ರಾಣಿಗಳ ಕೊಂಬು ಮುಖ ಉಗುರುಗಳನ್ನು ಆಲಂಕಾರಿಕ ವಸ್ತುಗಳನ್ನಾಗಿ ಬಳಸಲಾಗುತ್ತಿದೆ. ಈಗ ಅರಣ್ಯ ಇಲಾಖೆಗೆ ಅವುಗಳನ್ನು ಒಪ್ಪಿಸುವಾಗ ಅದು ಬೇಟೆಯಾಡಿದ್ದೋ..ಕೊಲ್ಲಲ್ಪಟ್ಟಿದ್ದೋ ಎಂದು ಅನುಮಾನ ಬಂದರೆ ಕೇಸ್ ಹಾಕುವ ಅವಕಾಶವನ್ನು ಅರಣ್ಯ ಇಲಾಖೆ ಕಾಯ್ದಿರಿಸಿಕೊಂಡಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. 

ಮೊದಲು ಅರಣ್ಯ ಇಲಾಖೆ ವನ್ಯ ಪ್ರಾಣಿ ಅಂಗಾಂಗ ವಾಪಸ್ಸಿಗೆ ಗಡುವು ನೀಡುವ ಮುನ್ನ ಅದರ ಬಗ್ಗೆ ಅರಿವು ಜಾಗೃತಿ ಮೂಡಿಸುವ ಪ್ರಚಾರಕ್ಕೆ ಮುಂದಾಗಬೇಕಿದೆ.. ಸರ್ಕಾರಿ ಆದೇಶದಲ್ಲಿ ವನ್ಯಪ್ರಾಣಿ ಅಂಗಾಂಗಳನ್ನು ವಾಪಸ್ಸು ನೀಡಲು ರೂಪಿಸಿರುವ ನಿಯಮಗಳನ್ನು ಸಡಿಲಗೊಳಿಸಬೇಕು. ಮನೆಯಲ್ಲಿರುವ ವನ್ಯಪ್ರಾಣಿ ಟರ್ಚ ಕೊಂಬು ಇಲ್ಲವೇ ಬೇರೆ ವಸ್ತುಗಳನ್ನು ನೀಡಲು ಬರುವವರನ್ನು ಅಧಿಕಾರಿಗಳು ಅನುಮಾನದಿಂದ ನೋಡುವಂತಾದರೆ, ಈಗ ಮಾಡಿರುವ ಯೋಜನೆಗೆ ಬೆಲೆ ಇಲ್ಲದಂತಾಗುತ್ತದೆ.

ಸರ್ಕಾರಿ ಆದೇಶದಲ್ಲಿ ಏನಿದೆ ?

ವನ್ಯಜೀವಿ (ಸಂರಕ್ಷಣೆ- ಅಘೋಷಿತ ವನ್ಯಜೀವಿ / ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಅಧ್ಯರ್ಪಿಸಲು ಅವಕಾಶ) ಕರ್ನಾಟಕ ನಿಯಮಗಳು 2023 ರಡಿಯಲ್ಲಿ ಅನುಸರಿಸಬೇಕಾದ / ಕೈಗೊಳ್ಳಬೇಕಾದ ಕ್ರಮಗಳ ಕುರಿತು…,

ವನ್ಯಜೀವಿ (ಸಂರಕ್ಷಣೆ - ಅಘೋಷಿತ ವನ್ಯಜೀವಿ / ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಅಧ್ಯರ್ಪಿಸಲು ಅವಕಾಶ) ಕರ್ನಾಟಕ ನಿಯಮಗಳು 2023 ರಡಿಯಲ್ಲಿ ಅನುಸರಿಸಬೇಕಾದ / ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಅಧಿಸೂಚನೆ ಹೊರಡಿಸುವ ಬಗ್ಗೆ, ದಿನಾಂಕ: 05-01-2024 ರಂದು ಸಚಿವ ಸಂಪುಟದಲ್ಲಿ ಅನುಮೋದನೆಗೊಂಡಿರುತ್ತದೆ ಹಾಗೂ ಈ ಕುರಿತಾದ ಅಧಿಸೂಚನೆ ಶೀಘ್ರವಾಗಿ ಸರ್ಕಾರದ ರಾಜ್ಯ ಪತ್ರದಲ್ಲಿ ಹೊರಡಿಸಲಾಗುವುದು.

ಮುಂದುವರೆದು, ಸದರಿ ನಿಯಮವು ಅಧಿಕೃತವಾಗಿ ಪ್ರಕಟಗೊಂಡ ನಂತರ ಈ ನಿಯಮವನ್ನು ರಾಜ್ಯಾದಂತ ಏಕರೂಪವಾಗಿ ಅನುಷ್ಠಾನಗೊಳಿಸಬೇಕಾಗಿರುತ್ತದೆ. ಆದುದರಿಂದ ಈ ನಿಯಮವನ್ನು ರಾಜ್ಯಾದಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವಿಧ ಹಂತಗಳಲ್ಲಿ ಪೂರ್ವಭಾವಿ ಕ್ರಮಗಳನ್ನು ತಕ್ಷಣವೆ ಕೈಗೊಳ್ಳಬೇಕಾಗಿದ್ದು ಈ ನಿಟ್ಟಿನಲ್ಲಿ ಈ ಕೆಳಕಂಡ ನಿರ್ದೇಶನಗಳನ್ನು ಕಟ್ಟುನಿಟ್ಟಿನ ಪಾಲನೆಗಾಗಿ ನೀಡಲಾಗಿದೆ.

  • 1ಮೇಲ್ಕಂಡ ನಿಯಮವು ಅಧಿಕೃತವಾಗಿ ಅಧಿಸೂಚನೆಗೊಂಡ ದಿನದಿಂದ ಸದರಿ ನಿಯಮದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವುದು.

  • 2. ನಿಯಮದಲ್ಲಿ ಲಗತ್ತಾಗಿರುವ Form No.1 ನ್ನು ವಿಭಾಗ ಕಛೇರಿ, ಉಪ-ವಿಭಾಗ ಕಛೇರಿ ಮತ್ತು ವಲಯ ಕಛೇರಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಿಂಟ್ ಮಾಡಿಸಿ ಲಭ್ಯವಿರುವಂತೆ ನೋಡಿಕೊಳ್ಳುವುದು.

  • 3. Form No.1 ನೊಂದಿಗೆ ಅಘೋಷಿತ ವನ್ಯಜೀವಿ / ವನ್ಯಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಸಾರ್ವಜನಿಕರಿಂದ ಪಡೆಯಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶದ ಮೂಲಕ ವಿಭಾಗ ಕಛೇರಿ, ಉಪ-ವಿಭಾಗ ಕಛೇರಿ ಮತ್ತು ವಲಯ ಕಛೇರಿಗಳಲ್ಲಿ ಜವಾಬ್ದಾರಿಯುತ ಅಧಿಕಾರಿಯನ್ನು ಅಧಿಕೃತಗೊಳಿಸುವುದು.

  • 4. ನೇಮಿಸಲ್ಪಟ್ಟ ಅಧಿಕೃತ ಅಧಿಕಾರಿಯು ಆಯಾ ಕಛೇರಿಗಳಲ್ಲಿ Form No.1 ಅನ್ನು ಅರ್ಜಿದಾರರಿಂದ ದ್ವಿಪ್ರತಿಯಲ್ಲಿ (duplicate) ಪಡೆಯುವುದು.

  • 5. ನೇಮಿಸಲ್ಪಟ್ಟ ಅಧಿಕೃತ ಅಧಿಕಾರಿಯು ಆಯಾ ಕಛೇರಿಗಳಲ್ಲಿ ಇಲಾಖಾ ವೆಬ್ ಪೋರ್ಟಲ್ ನಲ್ಲಿ ನೀಡಲಾದ ಅರ್ಜಿಯ ಮಾದರಿಯಲ್ಲಿಯೇ ಬೌತಿಕ ಪ್ರತಿಯಲ್ಲಿ ಒಂದು ರಿಜಿಸ್ಟರ್ ಅನ್ನು ನಿರ್ವಹಣೆ ಮಾಡುವುದು. ಸದರಿ ರಿಜಿಸ್ಟರ್ ಮಾದರಿಯು ಈ ಕೆಳಕಂಡಂತೆ ಇರುವುದು.

  • 6. ಇಲಾಖಾ ವೆಬ್ ಪೋರ್ಟಲ್ ನಲ್ಲಿ ನೀಡಲಾದ ಅರ್ಜಿಯಲ್ಲಿ ಅಧ್ಯರ್ಪಿಸುತ್ತಿರುವವರ ಮಾಹಿತಿಯನ್ನು ಭರ್ತಿ ಮಾಡಿದ ನಂತರ Generate ಆಗುವ Computer Generated ಸಂಖ್ಯೆಯನ್ನು ಅರ್ಜಿದಾರರಿಗೆ ನೀಡುವ ಪ್ರತಿಯಲ್ಲಿ ನಮೂದಿಸಿ ಸ್ವೀಕೃತಿ ನೀಡುವುದು.

  • 7. ನೇಮಿಸಲ್ಪಟ್ಟ ಅಧಿಕೃತ ಅಧಿಕಾರಿಯು ಆಯಾ ಕಛೇರಿಗಳಲ್ಲಿ ದ್ವಿಪ್ರತಿಯಲ್ಲಿ (duplicate) Form No.1 ಮತ್ತು ವನ್ಯಪ್ರಾಣಿಗಳ ಅಂಗಾಂಗಗಳನ್ನು ಪರಿಶೀಲನೆ ಮಾಡಿ (measurement etc.) ತಾಳೆಯಾದಲ್ಲಿ ಸ್ವೀಕೃತಿ ಪಡೆಯುವುದು. ಸ್ವೀಕೃತವಾಗುವ ವನ್ಯಪ್ರಾಣಿಗಳ ಉಗುರು, ಚರ್ಮ, ಇತರೆ ಚಿಕ್ಕಗಾತ್ರದ ಅಂಗಾಗಗಳನ್ನು ಸಂಬಂಧಪಟ್ಟ Form No.1ನ ನಕಲು ಪ್ರತಿಯೊಂದಿಗೆ ವ್ಯವಸ್ಥಿತವಾಗಿ ಪ್ಯಾಕಿಂಗ್ ಮಾಡುವುದು. ಪ್ಯಾಕಿಂಗ್ ವೇಳೆ ವನ್ಯಜೀವಿ ಅಂಗಾಂಗ ಮತ್ತು ಟ್ರೋಪಿಗಳ ರಕ್ಷಣೆಗಾಗಿ ಪ್ಲಾಸ್ಟಿಕ್, ಕಾಟನ್ ಮತ್ತು ಇತರೆ ಸೂಕ್ತ ಕವರ್ ಗಳಿಂದ ವ್ಯವಸ್ಥಿತವಾಗಿ ಪ್ಯಾಕಿಂಗ್ ಮಾಡುವುದು. ಮುಂದುವರೆದು, ವನ್ಯಪ್ರಾಣಿಗಳ ಸಂಸ್ಕರಿಸಿದ ದೊಡ್ಡ ಗಾತ್ರದ ವನ್ಯಪ್ರಾಣಿ ಅಂಗಾಂಗಗಳು / ಟ್ರೋಪಿಗಳು ಸ್ವೀಕೃತವಾದಲ್ಲಿ, ಅಂತಹ ವನ್ಯಪ್ರಾಣಿ ಅಂಗಾಂಗಗಳನ್ನು Form No.1 ನಂಬರ್ ಅನ್ನು ಅಂತಹ ಟ್ರೋಪಿಗಳ ಮೇಲೆ Permanent marker ಮೂಲಕ ನಮೂದಿಸುವುದು. ಯಾವುದೇ ಕಾರಣಕ್ಕೆ Form No.1 ಮತ್ತು ವನ್ಯಪ್ರಾಣಿಗಳ ಅಂಗಾಂಗಗಳಲ್ಲಿ ವ್ಯತ್ಯಾಸವಾಗದ ರೀತಿಯಲ್ಲಿ ನೋಡಿಕೊಳ್ಳತ್ತಕ್ಕದ್ದು.

  • 8. ಸ್ವೀಕೃತವಾಗುವ ವನ್ಯಪ್ರಾಣಿಗಳ ಅಂಗಾಂಗಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಮತ್ತು ಭದ್ರತೆ ಕಲ್ಪಿಸಲು ಕ್ರಮ ಕೈಗೊಳ್ಳುವುದು, ಒಂದು ವೇಳೆ ಭದ್ರತೆ ಇಲ್ಲದಿದ್ದಲ್ಲಿ ಅಂತಹ ಅಂಗಾಂಗಳನ್ನು ಹತ್ತಿರದ ಮೈಸೂರು/ ಶಿವಮೊಗ್ಗ / ಧಾರವಾಡ ಶ್ರೀಗಂಧ ಕೋಠಿಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಕ್ರಮ ಕೈಗೊಳ್ಳುವುದು.

  • 9. ಸ್ವೀಕೃತವಾಗುವ ವನ್ಯಪ್ರಾಣಿಗಳ ಅಂಗಾಂಗಳ ಮಾಹಿತಿಯನ್ನು ಪ್ರತಿ ವಾರ ಮುಖ್ಯ ವನ್ಯಜೀವಿ ಪರಿಪಾಲಕರ ಕಛೇರಿಗೆ ವರದಿ ನಿಯಮಿತವಾಗಿ ತಪ್ಪದೇ ಸಲ್ಲಿಸುವುದು.

  • 10. ಮುಂದುವರೆದು ಮೇಲ್ಕಂಡಂತೆ ಸ್ವೀಕೃತವಾಗುವ ವನ್ಯಪ್ರಾಣಿಗಳ ಅಂಗಾಂಗಗಳು ಕಾನೂನುಬಾಹಿರ / ಯಾವುದಾದರೂ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದೆ ಎಂಬ ಅನುಮಾನ ಅಥವಾ ದೂರು ಬಂದಲ್ಲಿ ನಿಯಮ-6 ರಡಿಯಲ್ಲಿ ವಿಚಾರಣೆ ನಡೆಸಿ ಅಂತಹ ವನ್ಯಪ್ರಾಣಿ ಅಂಗಾಂಗಗಳು ಯಾವುದೇ ವನ್ಯಪ್ರಾಣಿಯದ್ದಾಗಿರುವುದಿಲ್ಲವೆಂದು ಧೃಡೀಕರಿಸಲ್ಪಡುವುದು. ಒಂದು ವೇಳೆ ಅಂತಹ ಅಂಗಾಂಗಗಳು ಬೇಟೆ / ಕೊಲ್ಲಲ್ಪಟ್ಟ ವನ್ಯಪ್ರಾಣಿಯದಾಗಿದ್ದಲ್ಲಿ ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ರನ್ವಯ ಪ್ರಕರಣ ದಾಖಲಿಸಿ ಎಲ್ಲಾ ವಿಚಾರಣೆಗಳನ್ನು ಸ್ವೀಕರಿಸಿದ ದಿನಾಂಕದಿಂದ 90 ದಿನದೊಳಗೆ ಮುಕ್ತಾಯಗೊಳಿಸಿ ಸಂಬಂಧಪಟ್ಟ ಅಧಿಕೃತ ವ್ಯಕ್ತಿಗೆ ಅಂಗಾಂಗಗಳನ್ನು ವರ್ಗಾಯಿಸುವುದು.

  • 11. ಸದರಿ ನಿಯಮದ ಅವಧಿಯು ಮುಕ್ತಾಯವಾದ ನಂತರ ಸ್ವೀಕೃತವಾದ ಎಲ್ಲಾ ಅಂಗಾಂಗಗಳನ್ನು o Fd Wild Life Disposal of Wild Animal Article Rules, 2023 ថ ಮುಖ್ಯ ವನ್ಯಜೀವಿ ಪರಿಪಾಲಕರಿಂದ ಆದೇಶದನ್ವಯ ವಿಲೇ ಮಾಡಲು ಕ್ರಮ ಕೈಗೊಳ್ಳುವುದು.