Operation Kamala : ತೀರ್ಥಹಳ್ಳಿಯಲ್ಲಿ ‘ಆಪರೇಷನ್​ ಕಮಲ ’ | ಹೊಸಹಳ್ಳಿ ಸುಧಾಕರ್​ ಬಿಜೆಪಿಗೆ ಜಂಪ್​ | ಕಿಮ್ಮನೆ ಆರೋಪಕ್ಕೆ ಆರಗ ಆಕ್ರೋಶ

'Operation Kamala' in Thirthahalli Hosahalli Sudhakar jumps into BJP| Aragajnanendra reacts to Kimmane's allegations

Operation Kamala : ತೀರ್ಥಹಳ್ಳಿಯಲ್ಲಿ ‘ಆಪರೇಷನ್​ ಕಮಲ ’  | ಹೊಸಹಳ್ಳಿ ಸುಧಾಕರ್​  ಬಿಜೆಪಿಗೆ ಜಂಪ್​ |  ಕಿಮ್ಮನೆ ಆರೋಪಕ್ಕೆ ಆರಗ ಆಕ್ರೋಶ
Operation Kamala : ತೀರ್ಥಹಳ್ಳಿಯಲ್ಲಿ ‘ಆಪರೇಷನ್​ ಕಮಲ ’ | ಹೊಸಹಳ್ಳಿ ಸುಧಾಕರ್​ ಬಿಜೆಪಿಗೆ ಜಂಪ್​ | ಕಿಮ್ಮನೆ ಆರೋಪಕ್ಕೆ ಆರಗ ಆಕ್ರೋಶ

ಕಳೆದ 15 ದಿನಗಳಿಂದಲೂ ತೀರ್ಥಹಳ್ಳಿ ರಾಜಕಾರಣದಲ್ಲಿ ಬಾಯಿ ಪಟಾಕಿಗಳು ಜೋರಾಗಿ ಸದ್ದು ಮಾಡುತ್ತಿವೆ. ಅದರ ನಡುವೆ ,ನಡೆದ ಇಡಿ ಅಧಿಕಾರಿಗಳ ಪರಿಶೀಲನೆ ಹಾಗೂ ಸ್ಯಾಂಟ್ರೋ ರವಿ ವಿಚಾರಗಳು ಕಾಂಗ್ರೆಸ್​ ಹಾಗೂ ಬಿಜೆಪಿ ವಿರುದ್ಧದ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದವು. ಇದಕ್ಕೆ ಪೂರಕವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ (kimmane rathnakar shivamogga)​ ಆರಗ ಜ್ಞಾನೇಂದ್ರರೇ ಸ್ಯಾಂಟ್ರೋ ರವಿ ವಿಚಾರದಲ್ಲಿ ಎಒನ್ ಆರೋಪಿ ಎಂದು ದೂರಿದ್ದರು. ಅಲ್ಲದೆ ಕಾಂಗ್ರೆಸ್​ ವಲಯದಲ್ಲಿ ಸ್ಯಾಂಟ್ರೋ ರವಿಯ ಫೋಟೋಗಳು, ಬರಹಗಳು ವೈರಲ್​ ಆಗಿದ್ದವು ಇವೆಲ್ಲದಕ್ಕೂ ಗೃಹಸಚಿವ ಆರಗ ಜ್ಞಾನೇಂದ್ರ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ಆಪರೇಷನ್​ ಕಮಲದ ಮೂಲಕ ಕಾಂಗ್ರೆಸ್​ಗೆ ಶಾಕ್​ ಕೊಟ್ಟಿದದ್ದಾರೆ. ಹೌದು ಕಾಂಗ್ರೆಸ್​ ನಲ್ಲಿ, ತೀರ್ಥಹಳ್ಳಿ ತಾಲ್ಲೂಕಿನ ಪ್ರಭಾವಿ ಮುಖಂಡರೆನಿಸಿಕೊಂಡಿರುವ ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹೊಸಹಳ್ಳಿ ಸುಧಾಕರ್‌, ಕಾಸರವಳ್ಳಿ ಕೇಶವ್, ಜೆಡಿಎಸ್‌ ಪ್ರಭಾವಿ ಮುಖಂಡ ಮೇದೊಳಿಗೆ ಜಯರಾಮ್‌, ಬಾಂಡ್ಯ-ಕುಕ್ಕೆ, ಕುಡುಮಲ್ಲಿಗೆ ಪಂಚಾಯಿತಿ ಜೆಡಿಎಸ್ ಪ್ರಮುಖರು ಭಾನುವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. 

ಇದನ್ನು ಓದಿ : TODAY INFORMATION : ಸರ್ಕಾರಿ ಕೋಟಾದಡಿ ಡಿ-ಪಾರ್ಮಾ ಕೋರ್ಸ್​ಗೆ​ ಅರ್ಜಿ ಹಾಕಬಹುದು! ಬೆಂಗಳೂರಿನಲ್ಲಿ ಉದ್ಯೋಗವಕಾಶ! ವಿವರ ಇಲ್ಲಿದೆ

ಚುನಾವಣೆ ಹತ್ತಿರವಾಗುತ್ತಲೇ  ತೀರ್ಥಹಳ್ಳಿಯಲ್ಲಿ ನಡೆದಿರುವ ಈ ಬೆಳವಣಿಗೆ ಕುತೂಹಲ ಮೂಡಿಸಿದೆ. ಇನ್ನೂ ಇದರ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್​  ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಆಕಾಂಕ್ಷಿಗಳುನ್ನ 15 ರಿಂದ 20 ಲಕ್ಷಕ್ಕೆ ಖರೀದಿಸಲಾಗುತ್ತಿದೆ ಎಂದು ಆರೋಪಿಸಿದ್ದರು.  ಆದರೆ ಈ ಆರೋಪಕ್ಕೆ ಹೊಸಹಳ್ಳಿ ಸುಧಾಕರ್​ ಆಕ್ರೋಶ ಹೊರಹಾಕಿದ್ದಾರೆ. ರಾಜೀನಾಮೆ ಕೊಟ್ಟು 2 ತಿಂಗಳಾದರೂ ಯಾಕೆ ರಾಜೀನಾಮೆ ಕೊಟ್ಟಿರಿ ಎಂದು ಯಾರು ಕೇಳಿಲ್ಲ, ಯಾವುದೇ ಫಲಾಫೇಕ್ಷೆ ಇಲ್ಲದೆ ಬಿಜೆಪಿ ಸೇರಿದ್ದೇನೆ ಎಂದಿದ್ದಾರೆ. ಅಲ್ಲದೆ ಜೆಡಿಎಸ್​ನಿಂದ ಕಾಂಗ್ರೆಸ್​ ಸೇರಲು ನೀವೆಷ್ಟು ಕೋಟಿ ತೆಗೆದುಕೊಂಡಿದ್ದಿರಿ 2004 ರಲ್ಲಿ ಅಂಥಾ ಚಂದುವಳ್ಳಿ ಸೋಮಶೇಖರ್​ ಪ್ರಶ್ನಿಸಿದ್ಧಾರೆ. 

ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ

ನನ್ನನ್ನ ರಾಜಕೀಯವಾಗಿ ಮುಗಿಸುವ ಪಿತೂರಿ

ಇನ್ನೂ ಇದೇ ವೇಳೆ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ (araga jnanendra) ನನ್ನ ಮನೆಯಲ್ಲಿ ದುಡ್ಡು ಎಣಿಸುವ ದೈರ್ಯ ಯಾರಿಗೂ ಬಂಧಿಲ್ಲ. ನನ್ನನ್ನ ರಾಜಕೀಯವಾಗಿ ಮುಗಿಸುವ ಪಿತೂರಿ ಮಾಡ್ತಿದ್ದಾರೆ. ಕಿಮ್ಮನೆ ಮೈಯೆಲ್ಲಾ ವಿಷ ತುಂಬಿಕೊಂಡು ಮಾತನಾಡ್ತಿದ್ದಾರೆ ಅಂಥಾ ಕಾಂಗ್ರೆಸ್ ಕಾರ್ಯಕರ್ತರೇ ಫೋನ್​ ಮಾಡಿ ತನ್ನ ಬಳಿ ಬೇಸರ ತೋಡಿಕೊಂಡಿದ್ಧಾರೆ ಎಂದಿದ್ದಾರೆ.  ಮನೆಗೆ ನಿತ್ಯ ಸಾವಿರಾರು ಮಂದಿ ಬರುತ್ತಾರೆ. ಅವನೊಬ್ಬನ ಫೋಟೋ ಮಾತ್ರ ಹಾಕಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕುವಂತಿದ್ದರೇ ಆತನನ್ನು ನಾನು ಹಿಡಿಸುತ್ತಲೇ ಇರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com