ಚೆಕ್​ ಬೌನ್ಸ್​ : ಗೂಗಲ್​ನಲ್ಲಿ ಬ್ಯಾಂಕ್​ ನಂಬರ್​ ಹುಡುಕಿ ಫೋನ್​ ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್​

prathapa thirthahalli
Prathapa thirthahalli - content producer

online fraud  ಶಿವಮೊಗ್ಗ : ಶಿವಮೊಗ್ಗದ ಗಾಡಿಕೊಪ್ಪದ ನಿವಾಸಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ ₹2,94,479 ಕಳೆದುಕೊಂಡ ಘಟನೆ ನಡೆದಿದೆ. ತಮ್ಮ ಚೆಕ್ ವಜಾ ಆಗಿದ್ದಕ್ಕೆ ಮಾಹಿತಿ ಪಡೆಯಲು ಹೋಗಿ, ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಈ ಸಂಬಂಧ ನಗರದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಕೇವಲ 9 ದಿನಗಳಲ್ಲಿ ಮಹಿಳಾ ಇಂಜಿನಿಯರ್‌ಗೆ 11 ಲಕ್ಷ ವಂಚನೆ! 

ನವೆಂಬರ್ 6, 2025 ರಂದು ರಾತ್ರಿ,  ದೂರುದಾರರು ಗೂಗಲ್‌ನಲ್ಲಿ ಕರ್ನಾಟಕ ಬ್ಯಾಂಕಿನ ಗ್ರಾಹಕ ಸೇವಾ ಸಂಖ್ಯೆ ಎಂದು ಹುಡುಕಿ, ಸಿಕ್ಕ ನಂಬರ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವಂಚಕ ಹಿಂದಿಯಲ್ಲಿ ಮಾತನಾಡಿ, ಚೆಕ್ ವಜಾ ಮತ್ತು ಶುಲ್ಕಗಳ ಬಗ್ಗೆ ಮಾಹಿತಿ ನೀಡುವ ನೆಪದಲ್ಲಿ ವ್ಯಕ್ತಿಯನ್ನು ನಂಬಿಸಿದ್ದಾನೆ.

ನಂತರ ವಂಚಕ, ಪಿನ್ ನಮೂದಿಸುವಂತೆ ಹೇಳಿ ಫೋನ್‌ಪೇ ಅಪ್ಲಿಕೇಶನ್ತೆರೆಯುವಂತೆ ಸೂಚಿಸಿದ್ದಾನೆ. ಸಂತ್ರಸ್ತರು ಆತನ ಸೂಚನೆಗಳನ್ನು ಅನುಸರಿಸಿದ್ದಾರನಂತರ ಕರೆ ಕಡಿತಗೊಂಡಿದ್ದು, ನವೆಂಬರ್ 10 ಮತ್ತು 11 ರಂದು ಸಂತ್ರಸ್ತರ ಮೊಬೈಲ್ ಫೋನ್ ಆಕ್ಸೆಸ್ ಆಗಿರಲಿಲ್ಲ. ಅನುಮಾನಗೊಂಡ ಸಂತ್ರಸ್ತರು ನಂತರ ಕರ್ನಾಟಕ ಬ್ಯಾಂಕಿನ ಅಧಿಕೃತ ಅಪ್ಲಿಕೇಶನ್‌ನಲ್ಲಿ ತಮ್ಮ ಖಾತೆಯನ್ನು ಪರಿಶೀಲಿಸಿದಾಗ, ತಮ್ಮ ಖಾತೆಯಿಂದ ಹಂತ ಹಂತವಾಗಿ ಒಟ್ಟು 2,94,479/- ಹಣವನ್ನು ಆನ್‌ಲೈನ್ ಮೂಲಕ ವಂಚಕರು ವರ್ಗಾವಣೆ ಮಾಡಿಕೊಂಡಿರುವುದು ದೃಢಪಟ್ಟಿದೆ.

online fraud Shimoga Man Loses ₹2.9 Lakh

 

Share This Article