ಅರಿವು ಶೈಕ್ಷಣಿಕ ಸಾಲಸೌಲಭ್ಯಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನ

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS

ಶಿವಮೊಗ್ಗ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023-24ನೇ ಸಾಲಿಗೆ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಮತ್ತು ಆಂಗ್ಲೋಇಂಡಿಯನ್ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡುತ್ತಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಿದೆ. 

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗುವ ಹೊಸ/ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳಾದ ಎಂಬಿಬಿಎಸ್, ಬಿ.ಇ., ಡೆಂಟಲ್, ಮೆಡಿಕಲ್, ಬಿಡಿಎಸ್, ಆಯುಷ್, ಆರ್ಟಿಟೆಕ್ಚರ್, ಟೆಕ್ನಾಲಜಿ ಕೋರ್ಸ್, ಅಗ್ರಿಕಲ್ಚರ್ ಸೈನ್ಸ್, ವೆಟರ್ನರಿ ಮತ್ತು ಫಾರಂ ಸೈನ್ಸ್ ಕೋರ್ಸುಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ ಸೌಲಭ್ಯ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. 

ಆಸಕ್ತರು  ಅರ್ಜಿಯನ್ನು ಇಲಾಖೆಯ ವೆಬ್‍ಸೈಟ್ www.kmdconline.karnataka.gov.in ರಲ್ಲಿ ಭರ್ತಿ ಮಾಡಿದ ಅರ್ಜಿಯ ಪ್ರಿಂಟೌಟನ್ನು ತೆಗೆದುಕೊಂಡು ಆದಾಯ ಪ್ರಮಾಣ ಪತ್ರ (8 ಲಕ್ಷದೊಳಗಿರಬೇಕು), ಎಸ್‍ಎಸ್‍ಎಲ್‍ಸಿ, ಡಿಪ್ಲೊಮಾ/ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಶುಲ್ಕ ರಸೀದಿ,ಆಧಾರ್‍ಕಾರ್ಡ್, ರೇಷನ್‍ಕಾರ್ಡ್, ವಿಧ್ಯಾರ್ಥಿ/ಪೋಷಕರ ಫೋಟೋ,ಸಿಇಟಿ/ನೀಟ್ ಹಾಲ್‍ಟಿಕೇಟ್‍ಗಳನ್ನು, ನೋಟರಿಯಾಗಿರುವ ನಷ್ಟಪರಿಹಾರ ಬಾಂಡ್, ವಿಧ್ಯಾರ್ಥಿ/ಪೋಷಕರ  ಸ್ವಯಂ ಘೋಷಣಾ ಪತ್ರ ಎಲ್ಲಾ ದಾಖಲೆಗಳನ್ನು ಲಗತ್ತಿಸಿ 

ಜಿಲ್ಲಾ ವ್ಯವಸ್ಥಾಪಕರ ಕಚೇರಿ,  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಚ್ಯುತ್‍ರಾವ್ ಲೇಔಟ್, 4ನೇ ತಿರುವು, ನಂಜಪ್ಪ ಆಸ್ಪತ್ರೆ ಮುಂಭಾಗ, ಶಿವಮೊಗ್ಗ ಇಲ್ಲಿ ದಿ: 10/07/2022ರೊಳಗಾಗಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ.: 08182-228262 ನ್ನು ಸಂಪರ್ಕಿಸುವುದು. 


ಸಾಗರದಲ್ಲಿ ಬೈಕ್​ ಕದ್ದಿದ್ದ ಕಳ್ಳ ಸೊರಬದಲ್ಲಿ ಸಿಕ್ಕಿಬಿದ್ದ!

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ಗೋರೆಗದ್ದೆ ಗ್ರಾಮದ ನಿವಾಸಿಯೊಬ್ಬರ ಬೈಕ್ ಕಳ್ಳತನ ಪ್ರಕರಣವನ್ನು ಸಾಗರ ಟೌನ್​ ಪೊಲೀಸರು ಭೇದಿಸಿದ್ದಾರೆ.  ದಿನಾಂಕಃ 13-09-2022  ರಂದು ಕಳ್ಳತನವಾಗಿದ್ದ ಬೈಕ್​ಗೆ ಸಂಬಂಧಿಸಿದಂತೆ  ಕಲಂ 379 ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಾಗಿತ್ತು. 

ಸದ್ಯ ಪ್ರಕರಣದ ತನಿಖೆ ನಡೆಸಿದ ಸಾಗರ ಟೌನ್​ ಪೊಲೀಸರು ಆರೋಪಿ  ಸಂತೋಷ ಪಿ @ ಸಂತೂ, ಎಂಬಾತನನ್ನ ಬಂಧಿಸಿದೆ.  ಸೊರಬದ ಕಾನಗೋಡು ನಿವಾಸಿಯಾದ ಈತನನ್ನ ಬಂಧಿಸಿರುವ ಪೊಲೀಸರು  20,000 ಮೌಲ್ಯದ, 01 ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಅಮಾನತ್ತುಪಡಿಸಿಕೊಂಡಿದೆ. 


 

Leave a Comment