SHIVAMOGGA | MALENADUTODAY NEWS | ಮಲೆನಾಡು ಟುಡೆ Dec 4, 2024
ಶಿವಮೊಗ್ಗ ನಗರದ ಎನ್ ಟಿ ರಸ್ತೆಯ ಉರ್ದು ಶಾಲೆಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಮಾರು 50 ರಿಂದ 55 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯೊಬ್ಬರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಡಿಸೆಂಬರ್ 1 ರಂದು ಸಾವನ್ನಪ್ಪಿದ್ದಾರೆ. ಅವರ ಗುರುತು ಪತ್ತೆಗಾಗಿ ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರು ಪ್ರಕಟಣೆ ನೀಡಿದ್ದಾರೆ.
ನ. 26 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೇ ಡಿ. 1 ರಂದು ಮೃತಪಟ್ಟಿರುತ್ತಾರೆ. ಮೃತನು 5.6 ಅಡಿ ಉದ್ದ, ಕೋಲು ಮುಖ, 1 ಇಂಚು ಉದ್ದದ ಕಪ್ಪು ಬಿಳಿ ಮೀಸೆ ಗಡ್ಡ, 2 ಇಂಚು ಉದ್ದದ ಕೂದಲು, ಬಲ ಕೆನ್ನೆಯ ಮೇಲೆ 1 ಇಂಚು ಉದ್ದದ ಹಳೆ ಗಾಯದ ಗುರುತು, ಹೊಟ್ಟೆ ಮಧ್ಯಭಾಗದಲ್ಲಿ 3 ಇಂಚು ಉದ್ದದ ಕಪ್ಪು ಮಚ್ಚೆ, ನೀಲಿ ಹಾಗೂ ಬಿಳಿ ಬಣ್ಣದ ಪ್ರಿಂಟೆಡ್ ತುಂಬು ತೋಳಿನ ಶರ್ಟ್ ಧರಿಸಿರುತ್ತಾರೆ.
ಈ ವ್ಯಕ್ತಿಯ ವಾರಸುದಾದರು ಯಾರದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ 08182 261414 ಅಥವಾ 9916882544 ಸಂಪರ್ಕಿಸುವಂತೆ ದೊಡ್ಡಪೇಟೆ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
SUMMARY | unidentified man aged between 50 and 55 years was admitted to The Meggan Hospital in an unconscious state died on December 1.
KEY WORDS | Meggan Hospital, Urdu School on NT Road , Shivamogga city