SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024
ನಿನ್ನೆ ದಿನ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮುಪ್ಪಾನೆ ಸಮೀಪ ನಡೆದ ಟೂರಿಸ್ಟ್ ಬಸ್ ಅಪಘಾತದಲ್ಲಿ ಬರೋಬ್ಬರಿ 40 ಮಂದಿ ಪ್ರವಾಸಿಗರು ಗಾಯಗೊಂಡಿದ್ದು ಈ ಪೈಕಿ 10 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇವರನ್ನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕಾರ್ಗಲ್ ಪೋಲೀಸ್ ಠಾಣಾ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಮಂಗಳೂರು ಬಿ.ಸಿ. ರೋಡ್ ಮೂಲದ ಖಾಸಗಿ ಬಸ್‌ನಲ್ಲಿ 49 ಪ್ರವಾಸಿಗರು ಜೋಗ ಜಲಪಾತ ವೀಕ್ಷಿಸಲು ಭಾನುವಾರ ಬೆಳಿಗ್ಗೆ ಹೊರಟಿದ್ದರು. ಅಲ್ಲಿಂದ ಘಾಟಿ ದಾಟಿ ಮೇಲೆ ಬಂದಿದ್ದ ಬಸ್ ಅರಳಗೋಡು ಸಮೀಪದ ಭಟ್ಕಳ ಕಾರ್ಗಲ್ ಮಾರ್ಗದಲ್ಲಿ ಪಲ್ಟಿಯಾಗಿದೆ. ಅತಿ ವೇಗದಿಂದ ಬರುತ್ತಿದ್ದ ವಾಹನ ಟರ್ನಿಂಗ್‌ನಲ್ಲಿ ಕಂಟ್ರೋಲ್‌ಗೆ ಸಿಗದೇ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮತ್ತೆ ಕೆಲವು ವರದಿ ಪ್ರಕಾರ, ಬಸ್ ಬ್ರೇಕ್ ಫೇಲ್ ಆದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ


SUMMARY | 40 tourists were injured in a tourist bus accident near Muppane in Sagar taluk of Shimoga district yesterday
KEY WORDS | 40 tourists were injured, tourist bus accident near Muppane, Sagar taluk ,Shimoga district yesterday