SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 30, 2025
ಪುಷ್ಪ 2 ಚಿತ್ರವನ್ನು ಇಂದು ನೆಟ್ಫ್ಲಿಕ್ಸ್ ಹಿಂದಿ, ಮಳಯಾಳಂ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಮಾಡಿದ್ದು, ಕನ್ನಡದಲ್ಲಿ ಮಾತ್ರ ಚಿತ್ರವನ್ನು ಇನ್ನೂ ರಿಲೀಸ್ ಮಾಡಿಲ್ಲ.
2024 ರಲ್ಲಿ ರಿಲೀಸ್ ಆದ ಪುಷ್ಪ 2 ಚಿತ್ರ ವಿಶ್ವದಾದ್ಯಂತ ಬರೊಬ್ಬರಿ 1000 ಕೋಟಿಗೂ ಅಧಿಕ ರೂಪಾಯಿಗಳನ್ನು ಕಲೆಕ್ಷನ್ ಮಾಡಿತ್ತು. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಈ ಚಿತ್ರ 90 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅಷ್ಟರ ಮಟ್ಟಿಗೆ ಕರ್ನಾಟಕದಲ್ಲಿರುವ ತೆಲುಗಿನವರು ಸೇರಿದಂತೆ ಕನ್ನಡಿಗರು ಆ ಚಿತ್ರವನ್ನು ವೀಕ್ಷಿಸಿದ್ದರು.

ಈ ರೀತಿಯ ಹೈಪ್ ಕ್ರಿಯೇಟ್ ಮಾಡಿದ್ದ ಚಿತ್ರವನ್ನು ನೆಟ್ಫ್ಲಿಕ್ಸ್ ಬರೊಬ್ಬರಿ 275 ಕೋಟಿ ರೂಪಾಯಿ ಕೊಟ್ಟು ಖರೀದಿಸಿತು. ಇಂದು ಆ ಚಿತ್ರಕ್ಕೆ 23 ನಿಮಿಷ ಎಕ್ಸ್ಟ್ರಾ ಅವದಿಯನ್ನು ಸೇರಿಸಿ 3 ಗಂಟೆ 44 ನಿಮಿಷದ ರಿಲೋಡೆಡ್ ವರ್ಷನ್ನ್ನು ನೆಟ್ಫ್ಲಿಕ್ಸ್ ಬಿಡುಗಡೆ ಮಾಡಿದೆ.
ಆದರೆ ಈ ಚಿತ್ರ ಹಿಂದಿ ಮಳಯಾಳಂ ತಮಿಳು ತೆಲುಗು ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದು, ನೆಟ್ಫ್ಲಿಕ್ಸ್ನಲ್ಲಿ ಕನ್ನಡ ವರ್ಷನ್ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತಿದ್ದ ಕನ್ನಡಾಭಿಮಾನಿಗಳಿಗೆ ನಿರಾಸೆ ತಂದಿದೆ.
ಇದರ ಬಗ್ಗೆ ನೆಟ್ಫ್ಲಿಕ್ಸ್ 23 ಹೆಚ್ಚುವರಿ ನಿಮಿಷಗಳೊಂದಿಗೆ ಪುಷ್ಫ 2 ಚಿತ್ರ ತಮಿಳು, ತೆಲುಗು, ಹಿಂದಿ ಹಾಗೂ ಮಳಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದೆ. ಕನ್ನಡ ಅವತರಣಿಕೆ ಶಿಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದೆ.
SUMMARY | Pushpa 2 was released on Netflix today in Hindi, Malayalam, Tamil, Telugu and is yet to be released in Kannada.
KEYWORDS | Pushpa 2, Netflix, Kannada,