ಕುವೆಂಪು ವಿವಿ ಮುಚ್ಚುತ್ತಾರಾ? | ಡಿಎಸ್‌ ಅರುಣ್‌ ಹೀಗಂದಿದ್ಯಾಕೆ

ಹಂಚಿಕೊಳ್ಳಿ
WhatsApp Facebook X Telegram
ಕುವೆಂಪು ವಿವಿ ಮುಚ್ಚುತ್ತಾರಾ? | ಡಿಎಸ್‌ ಅರುಣ್‌ ಹೀಗಂದಿದ್ಯಾಕೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 30, 2025

ಶಿವಮೊಗ್ಗ | ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಹೆಚ್ಚಾಗುತ್ತಿದೆ ಅಲ್ಲಿರುವ ವ್ಯವಸ್ಥೆಯನ್ನ ಉನ್ನತ ಶಿಕ್ಷಣ ಸಚಿವರು ಸರಿ ಪಡಿಸಬೇಕು ಇಲ್ಲದಿದ್ದರೆ  ಕುವೆಂಪು ವಿಶ್ವವಿದ್ಯಾಲಯ ಮುಚ್ಚೋದು ಗ್ಯಾರಂಟಿ. ಇದಕ್ಕೆ ನಿಮ್ಮ ಕಾಂಗ್ರೆಸ್‌ ಸರ್ಕಾರವೇ ಹೊಣೆ ಎಂದು ವಿಧಾನ ಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಕಾಂಗ್ರೆಸ್‌ ಸರ್ಕಾರದ ವಿರುದ್ದ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುವೆಂಪು ಘಟಿಕೋತ್ಸವಕ್ಕೆ ಶಿಕ್ಷಣ ಸಚಿವರಾದ ಮಧುಬಂಗಾರಪ್ಪನವರನ್ನು ಆಹ್ವಾನಿಸಲಾಗಿತ್ತು. ಆದರೆ ಸಚಿವರು ಆ ಕಾರ್ಯಕ್ರಮಕ್ಕೆ ಗೈರಾಗಿದ್ದರು. ರಾಜ್ಯಪಾಲರು ಆ ಕಾರ್ಯಕ್ರಮಕ್ಕೆ ಬಂದಿದ್ದರಿಂದ ಮಧು  ಬಂಗಾರಪ್ಪನವರು ಗೈರಾಗಿರಬಹುದು ಎಂದು ಡಿ ಎಸ್‌ ಅರುಣ್‌ ಅನುಮಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ನವರು ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳಲ್ಲಿ ಯುವನಿಧಿ ಸಹ ಒಂದು. ಆದರೆ ಇದುವರೆಗೆ ಯುವನಿಧಿ ಯೋಜನೆಯಲ್ಲಿ ಒಬ್ಬ ವಿದ್ಯಾರ್ಥಿಯು ಸಹ ಪಾಲುದಾರರಾಗಿಲ್ಲ. ಅದಕ್ಕೆ ಕಾರಣ  ಕುವೆಂಪು ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ  ಮಾರ್ಕ್ಸ್ ಕಾರ್ಡ್ ಕೊಟ್ಟಿಲ್ಲ.

ಹೀಗೆ ಮುಂದುವರೆದರೆ ಕುವೆಂಪು ವಿಶ್ವವಿದ್ಯಾಲಯವನ್ನ ದೇವರೇ ಕಾಪಾಡಬೇಕು, ನಮ್ಮ ವಿದ್ಯಾರ್ಥಿಗಳಿಗೆ ಕುವೆಂಪು ವಿವಿಯಿಂದ ಅನ್ಯಾಯ ಆಗ್ತಿದೆ, ಕುವೆಂಪು ವಿವಿ ಸಾಕಷ್ಟು ಅವ್ಯವಹಾರ ಆಗಿದೆ ಈ ಬಗ್ಗೆ ಯಾರ ಬಳಿ ನಾವು ಪ್ರಶ್ನೆ ಮಾಡಬೇಕು. ಕುವೆಂಪು ವಿವಿಯಲ್ಲಿ ಅವ್ಯವಹಾರದ ಬಗ್ಗೆ ಪ್ರಶ್ನೆ ಮಾಡಿದ್ರು ಅಲ್ಲಿ ಯಾವುದಕ್ಕೂ ಉತ್ತರ ಸಿಕ್ತಿಲ್ಲ. ಒಟ್ಟಾರೆ, ಕುವೆಂಪು ವಿವಿ ಮುಚ್ಚುವ ಹುನ್ನಾರ ನಡೆಯುತ್ತಿದೆ,  ಹಾಗೇನಾದ್ರೂ ಆದ್ರೆ ಅದಕ್ಕೆ ಕಾಂಗ್ರೆಸ್‌ ಸರ್ಕಾರವೇ  ಹೊಣೆ ಆಗುತ್ತದೆ ಎಂದು ಆರೋಪಿಸಿದರು.

SUMMARY | The closure of Kuvempu University is guaranteed. MLC D S Arun blamed the Congress government for this.

KEYWORDS | Kuvempu University,  D S Arun, Congress government,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor