ದಿನ ಬೀಳುವ ಕನಸಿನ ಹಿಂದೆ ಶಿವಮೊಗ್ಗ ಬಾಯ್ಸ್! ಸಿನಿಮಾಗೆ ಸಿಕ್ಕಿದೆ 6000 ಒಕೆ! ನಾಳೆ ರಿಲೀಸ್​ ಆಗ್ತಿರೋ ಈ ಚಿತ್ರದ ಸಸ್ಪೆನ್ಸ್​ ಇಲ್ಲಿದೆ ನೋಡಿ

Namastha Ghost, a film featuring the youth of Shivamogga, will be released tomorrow.

ದಿನ ಬೀಳುವ ಕನಸಿನ ಹಿಂದೆ ಶಿವಮೊಗ್ಗ ಬಾಯ್ಸ್! ಸಿನಿಮಾಗೆ ಸಿಕ್ಕಿದೆ  6000 ಒಕೆ! ನಾಳೆ  ರಿಲೀಸ್​ ಆಗ್ತಿರೋ ಈ ಚಿತ್ರದ ಸಸ್ಪೆನ್ಸ್​ ಇಲ್ಲಿದೆ ನೋಡಿ

KARNATAKA NEWS/ ONLINE / Malenadu today/ Jul 13, 2023 SHIVAMOGGA NEWS

ಚಿರಾಯು ಕ್ರಿಯೇಟಿವ್‌ ಸಿನಿಮಾಸ್ (ರಿ) ಅಡಿಯಲ್ಲಿ ರಮೇಶ್‌ಕುಮಾರ್ ನಿರ್ಮಾಣದ ಭರತ್‌ ನಂದ ನಿರ್ದೇಶನದ ನಮಸ್ತೆ ಗೋಸ್ಟ್ ಸಿನಿಮಾ ಇದೇ ಜುಲೈ 14 ಶುಕ್ರವಾರದಂದು ಬೆಂಗಳೂರಿನಲ್ಲಿ ಹಾಗೂ ಶಿವಮೊಗ್ಗದ ಸಿಟಿ ಸೆಂಟರ್ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ಬಿಡುಗಡೆಯಾಗುತ್ತಿದೆ. 

ಮಧ್ಯಾಹ್ನ 2.00 ಗಂಟೆಗೆ ಶೋ ಇರುತ್ತದೆ. ಚಿತ್ರ ತಂಡವು ವಿಭನ್ನ ರೀತಿಯಲ್ಲಿ ಪ್ರಚಾರ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದೆ. ಈವರೆಗೂ ಚಿತ್ರ ತಂಡಗಳು ಪ್ರೀಮಿಯರ್ ಶೋ ಮಾಡಿ ಸಿನಿಮಾ ತೋರಿಸುತ್ತಿದ್ದವು. ಆದರೆ ನಮ್ಮ ಚಿತ್ರ ತಂಡ ಸಿನಿಮಾ ಬಿಡುಗಡೆಗೂ ಮೊದಲೇ ಸುಮಾರು 6000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿನಿಮಾ ತೊರಿಸಿ ಅವರ ಅಭಿಪ್ರಾಯ ಪಡೆದಿದೆ. ಈ ರೀತಿ ವಿದ್ಯಾರ್ಥಿಗಳಿಗೆ ಸಿನಿಮಾ ತೋರಿಸಿದರೆ ಅವರು ಮತ್ತೊಂದಷ್ಟು ಜನರಿಗೆ ಹೇಳಿದರೆ ಚಿತ್ರಕ್ಕೆ ಪ್ರಚಾರ ಸಿಗುತ್ತದೆ ಎಂಬುದು ನಮ್ಮ ತಂಡದ ನಂಬಿಕೆ.

ತಾರಾಗಣದಲ್ಲಿ ಮುಖ್ಯ ಪಾತ್ರದಲ್ಲಿ ನಿರ್ದೇಶಕರಾದ ಭರತ್ ನಂದರವರೇ ನಾಯಕ ನಟನಾಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ವಿದ್ಯಾರಾಜ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ಮುಖ್ಯಪಾತ್ರಗಳಲ್ಲಿ ಬಾಲರಾಜ್‌ವಾಡಿ, ಶಿವಮೊಗ್ಗ ಹರೀಶ್, ಶಿವಕುಮಾರ್ ಆರಾಧ್ಯ, ಅಖಿಲೇಶ್ ಮುಂತಾದವರು ನಟಿಸಿದ್ದಾರೆ. ಇನ್ನೂ ವಿಶೇಷವೆನೆಂದರೆ ನಮ್ಮ ಶಿವಮೊಗ್ಗದವರೇ ಆದ ಮಧುಸೂದನ್ ರವರ ಕ್ಯಾಮರಾ ಕೈ ಚಳಕದಲ್ಲಿ ಚಿತ್ರ ಮೂಡಿಬಂದಿದೆ. ಜೊತೆಗೆ ರೂಪ ಹರೀಶ್ ರವರು ಪ್ರಸಾದನದಲ್ಲಿ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ 80% ನಮ್ಮ ಶಿವಮೊಗ್ಗದವರೇ ಕೆಲಸ ಮಾಡಿದ್ದಾರೆ 


ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಬಾರ್ಡ್​ ಫೌಂಡೇಶನ್​ ದಿನಾಚರಣೆ

ನಬಾರ್ಡ್​ ಮತ್ತು ಚೈತನ್ಯ ರೂರಲ್ ಡೆವೆಲಪ್ ಮೆಂಟ್ ಸೊಸೈಟಿ , ಶಿವಮೊಗ್ಗ ಇವರ ಸಹಯೋಗದೊಂದಿಗೆ ನಬಾಡ೯ ಫೌಂಡೇಶನ್ ದಿನಾಚರಣೆಯ ನ್ನು ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ದಿನಾಂಕ 12/07/2023 ರಂದು ಆಚರಿಸಲಾಯಿತು

ನಬಾಡ೯ ಡಿ ಡಿ ಎಂ ಶರತ್ ಗೌಡ ರವರು ಉದ್ಫಾಟಿಸಿ ಮಾತನಾಡುತ್ತಾ ನಬಾರ್ಡ್​ ಪ್ರಾರಂಭವಾಗಿ 42 ವಷ೯ ಕಳೆದಿದ್ದು ದೇಶದಾದ್ಯಂತ ರೈತರಿಗಾಗಿ ಹಣಕಾಸಿನ ಸಹಾಯ ಮಾಡುತ್ತಾ ಬಂದಿದೆ ಮುಂದೆಯೂ ಸಹ ಹೆಚ್ಚಿನ ಸವಲತ್ತುಗಳನ್ನು ನೀಡಲಿದೆ ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು ಈ ಕಾಯ೯ಕ್ರಮದಲ್ಲಿ  ಅಮರ್ ನಾಥ್  ಶೆಟ್ಟಿ Lead bank Manager ,, Canara bank shimoga, ಬಿ. ಟಿ ಭದ್ರೀಶ್ CEO , ಚೈತನ್ಯ ರೂರಲ್ ಡೆವೆಲಪ್ ಮೆಂಟ್ ಸೊಸೈಟಿ , ಶಿವಮೊಗ್ಗ,  ವಾಸುದೇವ್ DCC bank assistant director,  ಸಣ್ಣತಿಮ್ಮಪ್ಪ ಯೋಜನಾ ಸಂಯೋಜಕರು ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ಮತ್ತು ದಿನಕರ ಜಾದವ್ , ಇವರು ಬಾಗವಹಿಸಿದ್ದರು




ಹುಡುಗನ ಪ್ರೀತಿ ಕಿರುಕುಳ! ಸಾಗರ ಟೌನ್​ನಲ್ಲಿ ಉತ್ತರ ಕನ್ನಡ ಯುವತಿ ಆತ್ಮಹತ್ಯೆ! ಆರೋಪಿ ಬಂಧನ



ಮದುವೆಯಾಗು ಎಂದು ಪೀಡಿಸ್ತಿದ್ದ ಹುಡುಗನ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಸಾವನ್ನಪ್ಪಿದ್ದಾಳೆ . ಈ ಸಂಬಂಧ ಸಾಗರ ಟೌನ್ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದ್ದು,  ಪೊಲೀಸರು ನೊಂದ ಕುಟುಂಬಸ್ಥರು ನೀಡಿದ ದೂರಿನನ್ವಯ ಆರೋಪಿಯನ್ನು ಸಹ ಬಂಧಿಸಿದ್ದಾರೆ.. 

ನಡೆದಿದ್ದೇನು?

ಉತ್ತರ ಕನ್ನಡ ಜಿಲ್ಲೆಯ ಮೂಲದ ಯುವತಿ ಸಾಗರ ಪೇಟೆಯಲ್ಲಿರುವ ಕಾಲೇಜೊಂದರಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಳು. ಈಕೆಯ ಸಂಪರ್ಕಕ್ಕೆ ಬಂದಿದ್ದ ಯುವಕನೊಬ್ಬ, ತನ್ನನ್ನು ಪ್ರೀತಿಸು ಎಂದು ಪದೇ ಪದೇ ಹೇಳುತ್ತಿದ್ದನಂತೆ. ಅಲ್ಲದೆ, ತನ್ನನ್ನ ಮದುವೆಯಾಗು ಎಂದು ನಿರಂತರವಾಗಿ ಫೋನ್​ ಮಾಡುತ್ತಿದ್ದ ಎಂದು ದೂರಲಾಗಿದೆ. ಇದೇ ವಿಚಾರದಲ್ಲಿ ಒಂದು ಸಲ ಯುವತಿಯ ತಂದೆ,  ಯುವತಿಯ ಫೋನ್​ ತೆಗೆದುಕೊಂಡು ಆರೋಪಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. 

ನಡೆದ ಘಟನೆಗಳಿಂದ ಯುವತಿ ಮನನೊಂದಿದ್ದಳು ಎನ್ನಲಾಗಿದ್ದು,ಕಳೆದ 8 ರಂದು ಯುವತಿ ಕಾಲೇಜಿಗೆ ಹೊರಟವಳು ಅಲ್ಲಿಗೆ ಹೋಗಿ ತಲುಪಿರಲಿಲ್ಲ. ಈ ಮಧ್ಯೆ ಆರೋಪಿ , ಯುವತಿಯ ತಂದೆಗೆ ಕರೆ ಮಾಡಿ ನಿಮ್ಮ ಮಗಳು ಕಾಲೇಜಿಗೆ ಬಂದಿಲ್ಲ ವಿಚಾರಿಸಿ ಎಂದಿದ್ಧಾನೆ. ಆತನಿಗೆ ಜೋರು ಮಾಡಿದ ಯುವತಿ ತಂದೆ, ಆಕೆಯಿದ್ದ ಹಾಸ್ಟೆಲ್​ಗೆ ಕರೆ ಮಾಡಿದಾಗ, ಯುವತಿ ವಿಷ ಸೇವಿಸಿರುವುದು ಗೊತ್ತಾಗಿದೆ. ತಕ್ಷಣ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಬಳಿಕ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮತ್ತು ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆದರೆ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಸದ್ಯ ಘಟನೆ ಸಂಬಂಧ ಯುವತಿ ಸಹೋದರ ನೀಡಿದ ದೂರಿನನ್ವಯ ಪೊಲೀಸರು ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ಧಾರೆ.