Muthappa Rai son Ricky Rai: ರಿಕ್ಕಿ ರೈ ಶೂಟೌಟ್​ ಕೇಸ್​ಲ್ಲಿ ಶಿವಮೊಗ್ಗದಲ್ಲಿ ಎಸ್​​ಪಿಗೆ ಮನವಿ, ಏನಿದು?

prathapa thirthahalli
Prathapa thirthahalli - content producer

Muthappa Rai son Ricky Rai:  ಶಿವಮೊಗ್ಗ | ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಮಹಿಳಾ ಘಟಕ.  ಜಿಲ್ಲಾ ಪೋಲೀಸ್ ರಕ್ಷಣಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

Muthappa Rai son Ricky Rai: ಏನಿದು ಘಟನೆ

ಕಳೆದ ಶನಿವಾರ ಬಿಡದಿಯಲ್ಲಿ ಬೆಳಿಗ್ಗೆ 1:30 ರ ಸುಮಾರಿಗೆ ಉದ್ಯಮಿ ಹಾಗೂ ಮಾಜಿ ಅಂಡರ್ ವರ್ಲ್ಡ್​ ಡಾನ್​ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಇದರಿಂದಾಗಿ ರಿಕ್ಕಿ ರೈ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಬಿಡದಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದರ ನಡುವೆ ಮುತ್ತಪ್ಪ ರೈ ರವರ ಪಕ್ಷವಾದ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಪದಾದಿ ಕಾರಿಗಳು ಆರೋಪಿಗಳನ್ನು ಶೀಘ್ರವಾಗಿ ಬಂಧಿಸುಬೇಕೆಂದು ಆಗ್ರಹಿಸಿ. ಗೃಹ ಇಲಾಖೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸಿದ್ದಾರೆ.

Muthappa Rai son Ricky Rai:
Muthappa Rai son Ricky Rai: ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಮಹಿಳಾ ಸದಸ್ಯರು ಮನವಿ ಸಲ್ಲಿಸಿದರು.

Muthappa Rai son Ricky Rai : ಮನವಿಯಲ್ಲಿ ಏನಿದೆ

ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳಾದ ನಾವು ನಮ್ಮ ರಾಜ್ಯಾಧ್ಯಕ್ಷರ ಅದೇಶದ ಮೇರೆಗೆ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಜಯ ಕರ್ನಾಟಕ ಸಂಘಟನೆಯು ಕನ್ನಡ ನಾಡಿನ ನಾಡು, ನುಡಿ, ನೆಲ, ಜಲ ಸೇರಿದಂತೆ ಹಲವಾರು ಕನ್ನಡಪರ ಹೋರಾಟಗಳು, ಜನಪರ ಹೋರಾಟಗಳನ್ನು ಮಾಡುತ್ತಾ ರಾಜ್ಯದಲ್ಲಿ ಸಕ್ರಿಯವಾಗಿದೆ. ಇಂತಹ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈ ರವರ ಸುಪುತ್ರ ರಿಕ್ಕಿ ರೈ ರವರ ಮೇಲೆ ಶೂಟ್‌ ಔಟ್ ಮಾಡಿ ಕೊಲೆ ಯತ್ನ ಮಾಡಿರುವುದು ಖಂಡನೀಯ.

ಘಟನೆ ನೆಡೆದು ನಾಲ್ಕು ದಿನಗಳು ಕಳೆದರೂ ಆರೋಪಿಗಳ ವಿರುದ್ದ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ, ದಯಮಾಡಿ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಸರ್ಕಾರದ ವತಿಯಿಂದ ಅಕ್ಕಿ ರೈ ರವರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ.

ಒಂದು ವೇಳೆ ಸೂಕ್ತ ಕ್ರಮ ಕೈ ಗೊಳ್ಳದೇ ಹೋದರೆ ಜಯ ಕರ್ನಾಟಕ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಈ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೇವೆ. ಎಂದು ಎಚ್ಚರಿಸಿ ಮನವಿ ಮಾಡಲಾಗಿದೆ. 

Share This Article