ಪ್ರಧಾನಿ ಮೋದಿ ಜನ್ಮದಿನ: ಬಸ್​ ನಿಲ್ದಾಣದಲ್ಲಿ ಟೀ ಬೋಂಡಾ ಮಾರಾಟ ಮಾಡಿದ ಪದವೀಧರರು, ಕಾರಣವೇನು

Modi birthday ಶಿವಮೊಗ್ಗ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದರ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಎಲ್ಲೆಡೆ ಸಂಭ್ರಮಾಚರಣೆ ನಡೆಸಿದ್ದರೆ, ಇತ್ತ  ಶಿವಮೊಗ್ಗದಲ್ಲಿ  ಯುವ ಕಾಂಗ್ರೆಸ್ ಮತ್ತು ಪದವೀಧರರು ‘ನಿರುದ್ಯೋಗ ದಿನ’ ಎಂದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪದವೀಧರರು ವಿನೂತನ ಪ್ರತಿಭಟನೆಗೆ ಮುಂದಾದರು. ಪದವಿ ಪಡೆದ ಯುವಕರು ಅಕಾಡೆಮಿಕ್ ಗೌನ್ ಧರಿಸಿ, ಚಹಾ, ಬೋಂಡಾ, ತರಕಾರಿ ಮಾರಾಟ ಮಾಡಿದರು. ಜೊತೆಗೆ ಬೂಟ್ ಪಾಲಿಷ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಕೂಡ ಬಸ್ ನಿಲ್ದಾಣದ ಬಳಿ ತರಕಾರಿ ಮಾರಾಟ ಮಾಡಿ, ವಾಹನ ಸವಾರರಿಗೆ ಚಹಾ, ಪತ್ರಿಕೆ ಮತ್ತು ಬೋಂಡಾ ಮಾರಾಟ ಮಾಡಿದರು.

ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸಬೇಕು ಮತ್ತು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನೀಡಿದ ಭರವಸೆಯನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಆರ್. ಪ್ರಸನ್ನಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

Modi birthday

Malenadu Today

Modi birthday
Modi birthday

Malenadu Today

 

Leave a Comment