ಸಾವರ್ಕರ್‌ ವಿಚಾರ, ಕ್ರಮ ಕೈಗೊಳ್ಳದಿದ್ದರೆ ನಾವೇ ಬುದ್ಧಿ ಕಲಿಸುತ್ತೇವೆ – ಶಾಸಕ ಚನ್ನಬಸಪ್ಪ

prathapa thirthahalli
Prathapa thirthahalli - content producer

MLA Channabasappa ಶಿವಮೊಗ್ಗ :  ವಾಟ್ಸಾಪ್ ಡಿಪಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಫೋಟೋ ಹಾಕಿದ್ದಕ್ಕೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಕೊಡದ ಕಾಂಗ್ರೆಸ್ ಸರ್ಕಾರದ ನೀತಿಯಿಂದಲೇ ಇಂತಹ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಅವರು  ಸಂಬಂಧಪಟ್ಟವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ತಾವೇ ಕಾನೂನು ಕೈಗೆತ್ತಿಕೊಂಡು ಬುದ್ಧಿ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇಂದು ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಇದು ಕಾಂಗ್ರೆಸ್ ಸರ್ಕಾರದ ನೀತಿಯೇ ಆಗಿದೆ. ಕಾಂಗ್ರೆಸ್‌ನವರಿಗೆ ಯಾವುದೇ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಗೌರವವಿಲ್ಲ. ನೆಹರೂ, ಸೋನಿಯಾ, ರಾಹುಲ್ ಇವರ ಕುಟುಂಬದ ರಕ್ಷಣೆಗೆ ಮಾತ್ರ ಸೀಮಿತರಾಗಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರ ಸಾವರ್ಕರ್‌ಗೆ ಗೌರವ ನೀಡುವುದು ಇವರಿಗೆ ಗೊತ್ತಿಲ್ಲ. ಈ ಸಾಮಾನ್ಯ ಜ್ಞಾನವೇ ಇಲ್ಲವಾಗಿದೆ. ಅವರಿಂದ ನಾವು ನಿರೀಕ್ಷೆ ಮಾಡುವುದು ತಪ್ಪಾಗುತ್ತದೆ ಎಂದು ಶಾಸಕರು ಹರಿಹಾಯ್ದರು.

ಯಾರ‍್ಯಾರು ಸಾವರ್ಕರ್‌ಗೆ ಅಪಮಾನ ಮಾಡುತ್ತಿದ್ದಾರೋ, ಅವರಿಗೆ ಬುದ್ಧಿ ಕಲಿಸುವ ಕೆಲಸವನ್ನು ನಾವೇ ಹಿಂದೂಗಳು ಮಾಡುತ್ತೇವೆ. ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿದ ಸಾವರ್ಕರ್ ಫೋಟೋ ಹಾಕಿಕೊಳ್ಳಬಾರದು ಎಂದರೆ, ಇದನ್ನು ಹೇಳಲು ಅವನ್ಯಾವನು ಶೇಖ್? ಮಗನೇ ಎದುರು ಬಂದು ನಿಂತುಕೊಂಡು ಸಾವರ್ಕರ್ ಬಗ್ಗೆ ಮೊದಲು ಮಾತನಾಡು, ಆಗ ಬದುಕಿರುತ್ತೀಯಾ ನೋಡು  ಎಂದು ಶಾಸಕ ಚನ್ನಬಸಪ್ಪ ಸವಾಲು ಹಾಕಿದರು.

ಇದಕ್ಕೆಲ್ಲಾ ಕಾರಣ ರಾಜ್ಯ ಸರ್ಕಾರವೇ ಆಗಿದೆ. ಜನ ಕಾನೂನು ಕೈಗೆತ್ತಿಕೊಳ್ಳಲು ಯಾಕೆ ನೋಡುತ್ತಾರೆಂದರೆ ಇದೇ ಕಾರಣಕ್ಕೆ. ಅಪಮಾನವನ್ನು ಬಹಳ ದಿನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಯಾವನೋ ಒಬ್ಬ ಶೇಖ್ ಬಗ್ಗೆ ಕ್ರಮ ತೆಗೆದುಕೊಳ್ಳಲ್ಲ ಎಂದರೆ ಹೇಗೆ? ಸರ್ಕಾರದ, ಜಿಲ್ಲಾಡಳಿತದ ವ್ಯವಸ್ಥೆ ಏನು? ಎಸ್‌ಪಿ ಯಾಕೆ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೋ ಗೊತ್ತಿಲ್ಲ” ಎಂದು ಅವರು ಪ್ರಶ್ನಿಸಿದರು.

ಸಾವರ್ಕರ್ ಶಿವಮೊಗ್ಗಕ್ಕೆ ಬಂದು ಹೋದ ಮಹಾನ್ ವ್ಯಕ್ತಿ. ಸಾವರ್ಕರ್ ಅವರಿಗೆ ಅಪಮಾನ ಮಾಡಲು ನಾವು ಬಿಡಲ್ಲ. ನೂರಾರು, ಸಾವಿರಾರು ಜನರು ಬಂದರೂ ಅವರಿಗೆ ನಾವು ಬುದ್ಧಿ ಕಲಿಸುತ್ತೇವೆ. ನಿಮಗೆ ತಾಕತ್ತಿಲ್ಲ ಎಂದು ರಾಜೀನಾಮೆ ಕೊಟ್ಟು ಹೋಗಿ, ನಾವು ಆ ಕೆಲಸ ಮಾಡುತ್ತೇವೆ ಎಂದರು

MLA Channabasappa ರಾಹುಲ್ ಗಾಂಧಿಗೆ  ಮಂಪರು ಪರೀಕ್ಷೆಗೆ ಅಗತ್ಯವಿದೆ

ಇದೇ ವೇಳೆ, ಮತ ಯಂತ್ರಗಳ (ಇವಿಎಂ) ಮೂಲಕ ವೋಟ್ ಚೋರಿ’ ಆಗಿದೆ ಎಂದು ಆರೋಪ ಮಾಡುತ್ತಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಶಾಸಕ ಚನ್ನಬಸಪ್ಪ ಕಿಡಿ ಕಾರಿದರು.

ಮೊದಲು ಎಐಸಿಸಿ ನಾಯಕ ರಾಹುಲ್ ಗಾಂಧಿ ಅರೆಸ್ಟ್ ಆಗಬೇಕು ಮತ್ತು ಅವರಿಗೆ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ದಾಖಲೆ ಇಲ್ಲದೇ ಕೇವಲ ‘ವೋಟ್ ಚೋರಿ’ ಆರೋಪದಲ್ಲಿ ತೊಡಗಿದ್ದಾರೆ. ಅವರು ಸಂವಿಧಾನ ಬದ್ಧವಾಗಿರುವ ಚುನಾವಣಾ ಆಯೋಗದ ಬಗ್ಗೆ ಪದೇ ಪದೇ ದೂರಿ, ದೇಶದ ವ್ಯವಸ್ಥೆಯನ್ನೇ ಅಸ್ತವ್ಯಸ್ತ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಅಪಮಾನ ಮಾಡುವ ಕೆಲಸ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಯಾರು ಮತಗಳ್ಳತನ ಮಾಡಿದ್ದಾರೆಂದು ತಾಕತ್ತಿದ್ದರೆ ಕಂಪ್ಲೇಂಟ್ ಕೊಡಲಿ ಎಂದರು.

MLA Channabasappa

 

Share This Article