ಶಿವಮೊಗ್ಗದ ಭಾರತಿ ಕಾಲೋನಿಯ ನಿವಾಸಿ ಸಚಿನ್ ಪತ್ತೆಗೆ ಸಹಕರಿಸಿ: ಪೊಲೀಸ್ ಇಲಾಖೆಯ ಪ್ರಕಟಣೆ

ajjimane ganesh

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಕಾಲೋನಿ  ನಿವಾಸಿ, ಫರ್ಟಿಲೈಜರ್​ ಅಂಗಡಿ ಹೊಂದಿರುವ ಸಚಿನ್ ಎಂಬವರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಪೊಲೀಸ್ ಇಲಾಖೆ ಪ್ರಕಟಣೆಯನ್ನು ನೀಡಿದೆ. ದೊಡ್ಡಪೇಟೆ ಪೊಲೀಸ್​ ಠಾಣೆಯಿಂದ ನೀಡಲಾಗಿರುವ ಪ್ರಕಟಣೆಯ ವಿವರ ಹೀಗಿದೆ. 

Missing in Shivamogga
Missing in Shivamogga

ಶಿವಮೊಗ್ಗ ಪೊಲೀಸಪ್ಪನ ಕರ್ತವ್ಯ ನಿಷ್ಠೆ ಮತ್ತು ಮೃತ ಮಹಿಳೆಯ ಚಿನ್ನ, ದುಡ್ಡಿನ ಕಥೆ!

ಭಾರತಿ ಕಾಲೋನಿಯ 1ನೇ ಕ್ರಾಸ್ ನಿವಾಸಿ ಸಚಿನ್ ನಾಪತ್ತೆಯಾದವರು. ಹೊಳೆಹೊನ್ನೂರು ಗ್ರಾಮದಲ್ಲಿ ಫರ್ಟಿಲೈಜರ್ ಅಂಗಡಿಯನ್ನು ಹೊಂದಿರುವ ಸಚಿನ್​, ಡಿಸೆಂಬರ್ 14 ರಂದು ಸಂಜೆ 7.30ರ ಸುಮಾರಿಗೆ ಹೊರಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಅಂದಿನಿಂದ ಈವರೆಗೆ ಅವರು ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ.

Missing in Shivamogga
Missing in Shivamogga

ಸಿದ್ದಾಪುರ-ಹೊಸನಗರ ಹೆದ್ದಾರಿಯಲ್ಲಿ ಹೊಳೆಗೆ ಪಲ್ಟಿಯಾದ ಇಂಧನ ಲಾರಿ!

ಕಾಣೆಯಾಗಿರುವ ಸಚಿನ್ ಅವರ ಚಹರೆ ವಿವರ:  ಸಚಿನ್ ಅವರು 5.5 ಅಡಿ ಎತ್ತರವಿದ್ದು, ಕೋಲು ಮುಖ ಮತ್ತು ಗೋಧಿ ಮೈಬಣ್ಣವನ್ನು ಹೊಂದಿದ್ದಾರೆ. ವಿಶೇಷವಾಗಿ ಅವರು ದಪ್ಪ ಗಡ್ಡ ಮತ್ತು ಮೀಸೆಯನ್ನು ಬಿಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ನಾಪತ್ತೆಯಾದ ಸಮಯದಲ್ಲಿ ಇವರು ಕೇಸರಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದರು ಮತ್ತು ಇವರು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆಗೆ ಡಿಮ್ಯಾಂಡ್ ಜಾಸ್ತಿ! ಚಿತ್ರದುರ್ಗ, ಹೊನ್ನಾಳಿ, ಶಿರಸಿ, ಭದ್ರಾವತಿ, ತೀರ್ಥಹಳ್ಳಿ ಎಷ್ಟಿದೆ ಅಡಿಕೆ ದರ?

ಇವರ ಬಗ್ಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸುಳಿವು ಅಥವಾ ಮಾಹಿತಿ ಲಭ್ಯವಾದಲ್ಲಿ ತಕ್ಷಣವೇ ದೊಡ್ಡಪೇಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳಾದ 08182-261414 ಅಥವಾ ಮೊಬೈಲ್ ಸಂಖ್ಯೆ 9620348689 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ಕೋರಲಾಗಿದೆ. 

Missing in Shivamogga
Missing in Shivamogga

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ಶಿವಮೊಗ್ಗದ ಭಾರತಿ ಕಾಲೋನಿಯ ಸಚಿನ್ ನಾಪತ್ತೆ: ದೊಡ್ಡಪೇಟೆ ಪೊಲೀಸರಿಂದ ಪ್ರಕಟಣೆ ,  Sachin from Bharati Colony Missing in Shivamogga Doddapete Police Issue Notice
Share This Article