Missing ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಹಾಸ್ಟೆಲ್‌ನಲ್ಲಿದ್ದುಕೊಂಡು ಕಾಲೇಜಿಗೆ ತೆರಳಿದ್ದ 19 ವರ್ಷದ ಯುವತಿಯೊಬ್ಬರು ಕಾಣೆಯಾಗಿರುವ ಕುರಿತು ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ನಿಲ್ಲಿಸಿ ಫೋಟೋ ತೆಗೆಸಿಕೊಳ್ತಿದ್ದ ಯುವತಿ : ಚಾಕು ತೋರಿಸಿ ಯುವಕರು ಮಾಡಿದ್ದೇನು..?
ಬಗ್ಗೊಡಿಗೆ ಗ್ರಾಮದ ಕೊರೊಡಿ ಆನಂದ್ ಹೆಚ್.ಎಸ್. ಅವರ ಪುತ್ರಿ ಈಶಾನ್ಯ ಎಂಬಾಕೆ ನವೆಂಬರ್ 10 ರಂದು ಕಾಲೇಜಿಗೆ ಹೋಗುವುದಾಗಿ ಹಾಸ್ಟೆಲ್‌ನಿಂದ ಹೊರಟು ನಾಪತ್ತೆಯಾಗಿದ್ದಾರೆ. ಈ ಯುವತಿ ಶಿವಮೊಗ್ಗದ ವಸುಂಧರ ಹಾಸ್ಟೆಲ್‌ನಲ್ಲಿ ನೆಲೆಸಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು.
ಕಾಣೆಯಾಗಿರುವ ಯುವತಿಯ ಚಹರೆ ಇಂತಿದೆ: ಆಕೆಯು ಸುಮಾರು 5 ಅಡಿ ಎತ್ತರವಿದ್ದು, ದೃಢವಾದ ಮೈಕಟ್ಟು, ದುಂಡನೆಯ ಮುಖ ಮತ್ತು ಎಣ್ಣೆ ಕಪ್ಪು ಮೈ ಬಣ್ಣ ಹೊಂದಿದ್ದಾರೆ. ಆಕೆಯ ತಲೆಯಲ್ಲಿ ಸರಿಸುಮಾರು 14 ಇಂಚು ಉದ್ದದ ಕಪ್ಪು ಕೂದಲಿರುತ್ತದೆ. ಆಕೆಯ ಎಡ ತುಟಿಯ ಮೇಲ್ಭಾಗದಲ್ಲಿ ರಾಗಿ ಕಾಳಿನ ಗಾತ್ರದ ಕಪ್ಪು ಮಚ್ಚೆ ಇದೆ. ಈಶಾನ್ಯ ಕನ್ನಡ ಭಾಷೆಯನ್ನು ಮಾತನಾಡಲು, ಓದಲು ಮತ್ತು ಬರೆಯಲು ಬರುತ್ತದೆ.
ಯುವತಿ ಮನೆಯಿಂದ ತೆರಳುವಾಗ ಕೆಂಪು ಬಣ್ಣದ ಚೂಡಿದಾರ್, ಬಿಳಿ ಬಣ್ಣದ ವೇಲ್ (ದುಪ್ಪಟ್ಟ) ಧರಿಸಿದ್ದು, ಕಪ್ಪು ಬಣ್ಣದ ಸ್ಕೂಲ್ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾರೆ. ಆಕೆಯ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಪೊಲೀಸರಿಗೆ ತಿಳಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ. ಈಶಾನ್ಯಳ ಕುರಿತು ಯಾವುದೇ ಸುಳಿವು ಲಭ್ಯವಾದಲ್ಲಿ ಕೆಳಗೆ ನೀಡಿರುವ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ಶಿವಮೊಗ್ಗ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ:
ಎಸ್.ಪಿ. ಶಿವಮೊಗ್ಗ: 08182-261400
ಡಿವೈಎಸ್‌ಪಿ ತೀರ್ಥಹಳ್ಳಿ: 08181 – 220388
ಸಿಪಿಐ ಮಾಳೂರು ವೃತ್ತ: 9480803333
ಪಿಎಸ್‌ಐ ಆಗುಂಬೆ: 9480803314
ಕಂಟ್ರೋಲ್ ರೂ ಶಿವಮೊಗ್ಗ: 9480803300
Missing 19Year Old B.Com Student Ishanya Missing
