ಶಿವಮೊಗ್ಗ ನಗರದಲ್ಲಿ ಆ.27 ರಂದು ಮಾಂಸ ಮಾರಾಟ ನಿಷೇಧ

ajjimane ganesh

Meat Ban ಶಿವಮೊಗ್ಗ ನಗರದಲ್ಲಿ ಆ.27 ರಂದು ಮಾಂಸ ಮಾರಾಟ ನಿಷೇಧ

ಶಿವಮೊಗ್ಗ, ಆಗಸ್ಟ್ 25 ಮಲೆನಾಡುಟುಡೆ ನ್ಯೂಸ್:  ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಗಸ್ಟ್ 27 ರಂದು ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ನಿಷೇಧಿಸಿ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ವಾರ್ತಾ ಇಲಾಖೆಯ ಮೂಲಕ ಪ್ರಕಟಣೆಯನ್ನು ನೀಡಲಾಗಿದೆ. 

- Advertisement -
Meat Ban on August 27 in shivamogga
Meat Ban on August 27 in shivamogga

ಮಾಂಸ ಮಾರಾಟ ನಿಷೇಧ

ಪ್ರಕಟಣೆಯಲ್ಲಿ, ನಗರದ ಎಲ್ಲಾ ಮಾಂಸ ಮಾರಾಟದ ಮಳಿಗೆಗಳು, ಪ್ರಾಣಿವಧೆ ಮಾಡುವ ಘಟಕಗಳು ಮತ್ತು ಸಂಬಂಧಿತ ವ್ಯಾಪಾರಗಳು ಆ.27 ರಂದು ಸಂಪೂರ್ಣವಾಗಿ ಸ್ಥಗಿತಗೊಳ್ಳಬೇಕು. ಈ ಕುರಿತು ಸಾರ್ವಜನಿಕರ ಸಹಕಾರ ಕೋರಿರುವ ಆಯುಕ್ತರು, ಆದೇಶವನ್ನು ಉಲ್ಲಂಘಿಸಿ ವ್ಯಾಪಾರ ನಡೆಸುವ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ನಿರ್ಧಾರವು ಹಬ್ಬದ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ.

Meat Ban on August 27 in shivamogga

Share This Article
1 Comment

Leave a Reply

Your email address will not be published. Required fields are marked *