mangaluru bus incidente thirthahalli 30 ಶಿವಮೊಗ್ಗ ತೀರ್ಥಹಳ್ಳಿ ಹೈವೇಯಲ್ಲಿ ಇವತ್ತು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಿದೆ. ಮಂಗಳೂರು-ಚಳ್ಳಕೆರೆ ಹೋಗುತ್ತಿದ್ದ ದುರ್ಗಾಂಬಾ ಬಸ್ ಗಾಜನೂರು ಅಗ್ರಹಾರದ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿಯಾಗಿತ್ತು.
ಪರಿಣಾಮ ವಾಹನದಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ದುರ್ಘಟನೆಯಲ್ಲಿ ಬಸ್‌ನಲ್ಲಿದ್ದ 27 ಪ್ರಯಾಣಿಕರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
mangaluru bus incidente thirthahalli 30
ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಶಿವಮೊಗ್ಗದ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಗಾಯಾಳುಗಳನ್ನು ಜಖಂಗೊಂಡಿದ್ದ ಬಸ್ನಿಂದ ರಕ್ಷಣೆ ಮಾಡಿದ್ದಾರೆ. ಈ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸ್ ಸಿಬ್ಬಂದಿಯು ನೆರವಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ RFO ರಾಜು ಎಚ್, DFO ಅಶೋಕ್ ಕುಮಾರ್ ಬಿ.ಆರ್, AFSTO ಎಂ. ಹುಸೇನ್, ಹಾಗೂ ಸಿಬ್ಬಂದಿಗಳಾದ ನೂರುಲ್ಲಾ, ಚೇತನ್ ಕುಮಾರ್, ಸತೀಶ್, ರಮೇಶ್, ಮತ್ತು ಸಾಗರ ಹಾಗೂ ಭೀಮಪ್ಪ ಅವರು ಪಾಲ್ಗೊಂಡಿದ್ದರು.

