Shivamogga | Feb 1, 2024 | DCC Bank Shikaripura ಹಲವು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಹರಾಜಿನಲ್ಲಿ ಪಡೆದ ಸತ್ತು ಇದುವರೆಗೂ ತನಗೆ ಹಸ್ತಾಂತರಿಸದ ಹಿನ್ನೆಲೆ ಸಾಲ ಸಮಸ್ಯೆಗೆ ಸಿಲುಕಿದ ವ್ಯಕ್ತಿಯೋರ್ವ ಶಿಕಾರಿಪುರ ಪೇಟೆಯಲ್ಲಿರುವ ಡಿಸಿಸಿ ಬ್ಯಾಂಕ್ ಎದುರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಎಸ್.ಪಿ.ಸಂತೋಷಕುಮಾರ್ ಆತ್ಮಹತ್ಯೆಗೆ ಯತ್ನಿಸಿದವ್ಯಕ್ತಿ. ಪೆಟ್ರೋಲ್ ಸುರಿದುಕೊಂಡು ಬ್ಯಾಂಕ್ ಬಾಗಿಲಿನಲ್ಲಿಯೇ ಬೆಂಕಿ ಹಚ್ಚಿಕೊ ಳ್ಳಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಆತ್ಮಹತ್ಯೆ ಯತ್ನ ವಿಫಲ ಗೊಳಿಸಿದರು.
ಏನಿದು ಪ್ರಕರಣ
ಸಂತೋಷಕುಮಾರ್ 2017ರಲ್ಲಿ ಡಿಸಿಸಿ ಬ್ಯಾಂಕ್ ನಡೆಸಿದ ಹರಾಜಿನಲ್ಲಿ ಚನ್ನಕೇಶವ ನಗರದ ಸುಸ್ತಿದಾರರೊಬ್ಬರಿಗೆ ಸೇರಿದ 30/50 ಅಳತೆಯಲ್ಲಿನ ಮೂರು ಅಂತಸ್ಥಿನ ಕಟ್ಟಡ, 4 ಗುಂಟೆ ಅಳತೆಯ ನಿವೇಶನ ಸ್ವತ್ತನ್ನು ₹76 ಲಕ್ಷಕ್ಕೆ ಯಶಸ್ವಿ ಬಿಡ್ಡುದಾರರಾಗಿ ಹರಾಜು ಪಡೆದಿದ್ದರು.’
15 ದಿನಗಳಲ್ಲಿ ಬಿಡ್‌ನ ಪೂರ್ಣ ಮೊತ್ತ ಬ್ಯಾಂಕ್‌ಗೆ ಪಾವತಿಸಿದರು. ಹರಾಜಿನ ನಂತರ ಸ್ವತ್ತು ಅಳತೆ ಮಾಡುವಾಗ ಮೂರು ಅಂತಸ್ಥಿನ ಕಟ್ಟಡದ ಕೇವಲ 5 ಅಡಿ ಮಾತ್ರ ಅಳತೆ ವ್ಯಾಪ್ತಿಗೆ ಬರುತ್ತದೆ ಎನ್ನುವುದು ಗೊತ್ತಾಗಿದೆ. ಅಲ್ಲಿಂದ ಇಲ್ಲಿಯವರೆಗೂ ನನಗೆ 4 ಗುಂಟೆ ನಿವೇಶನ ಮಾತ್ರ ನೀಡಿದ್ದು, ಕಟ್ಟಡ ಈವರೆಗೂ ಹಸ್ತಾಂತರಿಸಿಲ್ಲ ಎಂದು ಸಂತೋಷ್ ಆರೋಪಿಸಿದ್ದಾರೆ. ಈ ಕಾರಣಕ್ಕೆ ಡಿಸಿಸಿ ಬ್ಯಾಂಕ್ ವಿರುದ್ಧ ಪ್ರತಿಭಟಿಸಿ, ತಮ್ಮ ವ್ಯಾಪ್ತಿಗೆ ಬರುವ ಕಟ್ಟಡ ನೀಡಬೇಕು ಎಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇನ್ನೂ ಈ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ, ವಿವರವನ್ನು ಮುಖ್ಯ ಶಾಖೆಗೆ ಕಳುಹಿಸಲಾಗಿದ್ದು, ಅಲ್ಲಿಂದ ಯಾವುದೇ ನಿರ್ದೇಶನ ಬಂದಿಲ್ಲವೆಂದು ಶಿಕಾರಿಪುರದ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.