ಮಿನಿಸ್ಟರ್ ಹೆಸರು ಬಳಸಿದ ತಹಶೀಲ್ದಾರ್​ ಪುತ್ರ ಅರೆಸ್ಟ್! ನಡೆದಿದ್ದೆನು? ಎಸ್​ಪಿ ಹೇಳಿದ್ದೇನು?

ajjimane ganesh

Man Arrest for Cheating in the Name of minister in shivamogga  ಶಿವಮೊಗ್ಗ, malenadu today news : August 24 2025, ಟ್ರಾನ್ಸಫರ್​ ಮಾಡಿಸಿಕೊಳ್ಳುವುದು ಒಂದು ಹಂತದ ದಂಧೆಯಾಗಿದೆ ಅನ್ನುವುದು ಕಾಮನ್ ಮ್ಯಾನ್​ಗೂ ಗೊತ್ತಿರುವ ವಿಚಾರ. ಈ ನಡುವೆ  ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ PA  ನಾನು , ನಿಮ್ಮ ಟ್ರಾನ್ಸಫರ್ ಮಾಡಿಸಿಕೊಡ್ತೀನಿ ಎಂದು ಹೇಳಿ ಸರ್ಕಾರಿ ಅಧಿಕಾರಿಗಳಿಗೆ ವಂಚನೆಗೆ ಯತ್ನಿಸಿದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ವಿಷಯದ ಕುರಿತಾಗಿ  ಶಿವಮೊಗ್ಗದ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ಆಗಿದೆಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ

Man Arrest for Cheating in the Name of minister in shivamogga
Man Arrest for Cheating in the Name of minister in shivamogga

ಭದ್ರಾವತಿ : ಗಂಡನ ಕೊಂದು ಭದ್ರಾ ನದಿಗೆ ಎಸೆದ ಕೇಸ್ : ಶಿಕ್ಷಕಿ & ಪ್ರಿಯಕರನಿಗೆ ಮರಣದಂಡನೆ! https://malenadutoday.com/bhadravathi-court-death-sentence-teacher/ 

- Advertisement -

ಶಿಕ್ಷಣ ಸಚಿವ ಮಧು ಬಂಗಾರಪ್ಪರವರ ಹೆಸರು ದುರ್ಬಳಕೆ

ಮೈಸೂರಿನ ರಾಮಕೃಷ್ಣನಗರ ನಿವಾಸಿಯಾದ ನಿವೃತ್ತ ತಹಶೀಲ್ದಾರ್ ಪುತ್ರ ಎಸ್.ವಿ.ಎನ್. ರಘುನಾಥ (36) ಬಂಧಿತ ಆರೋಪಿ. ನಡೆದ ವಿಚಾರಕ್ಕೆ ಬರುವುದಾದರೆ, ಈ ರಘುನಾಥ್ ಈತ ಇತ್ತೀಚೆಗೆ ವರ್ಗಾವಣೆಗೊಂಡು ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿಯೊಬ್ಬರನ್ನು ಸಂಪರ್ಕಿಸಿ ನಿಮ್ಮ ವರ್ಗಾವಣೆ ನಾನು ಮಾಡಿಸಿಕೊಡುತ್ತೇನೆ, ನಾನು ಸಚಿವ ಮಧು ಬಂಗಾರಪ್ಪ ಅವರ ಸೊರಬದ ಗೃಹ ಕಚೇರಿಯಲ್ಲಿ ಆಪ್ತ ಸಹಾಯಕನಾಗಿದ್ದೇನೆ ಎಂದಿದ್ದಾನೆ. 

car decor new

ಈ ಹೊತ್ತಿಗಾಗಲೇ ಶಿಕ್ಷಣ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶ್ರೀಪತಿಯವರಿಗೆ, ಹೀಗೊಬ್ಬ ವ್ಯಕ್ತಿ ಸಚಿವರ ಹೆಸರನ್ನು ಹೇಳಿಕೊಂಡು ಕರೆ ಮಾಡುತ್ತಿದ್ದಾನೆ ಎಂಬ ವಿಚಾರ ಗೊತ್ತಾಗಿತ್ತು. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯುತ್ತಿರುವಾಗಲೇ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿಯವರಿಗೆ ರಘುನಾಥ್ ಕರೆ ಮಾಡಿದ್ದರು. ತಕ್ಷಣವೇ ಶ್ರೀಪತಿಯವರು ಆತನ ಬಗ್ಗೆ ವಿಚಾರಿಸಲು ಸೂಚಿಸಿದರು. ಅದರಂತೆ ಫೋನ್ ನಂಬರ್ ಪರಿಶೀಲಿಸಿದಾಗ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಿದೆ. ಆನಂತರ  ಸಚಿವರ ಕಚೇರಿಗೆ ವಿಷಯ ತಿಳಿದು ಕಾಂಗ್ರೆಸ್ ಮುಖಂಡ ಗಿರೀಶ್ ಅವರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

Man Arrest for Cheating in the Name of minister in shivamogga

Share This Article