malnad short news today 11-06-2025 / ಸಿಗಂದೂರಲ್ಲಿ ಪ್ರವಾಸಿಗ ಮಾಡಿದ್ದೇನು? / ಭದ್ರಾವತಿಗೆ ಗುಡ್​ ನ್ಯೂಸ್​/ ಶಿವಮೊಗ್ಗದಲ್ಲಿ ಮತ್ತೆ ಖಾಕಿ ಏರಿಯಾ ಡಾಮಿನೇಷನ್​

Malenadu Today

malnad short news today ಸಾಗರ: ಸಿಗಂದೂರು ಸೇತುವೆಯ (Bridge) ಅಂಬಾರಗೋಡ್ಲು ಭಾಗದಲ್ಲಿ ಗೇಟ್‌ ಸಿಬ್ಬಂದಿಗೆ ಈಚೆಗೆ ಪ್ರವಾಸಿಗರೊಬ್ಬರು ಮಚ್ಚು ತೋರಿಸಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸರು ಸಹ ವಿಚಾರಣೆ ನಡೆಸಿದ್ದು ಲಭ್ಯ ಮಾಹಿತಿ ಪ್ರಕಾರ, ನಡೆದ ಘಟನೆ ಸಂಬಂಧ ಕೇಸ್​ ದಾಖಲಾಗಿಲ್ಲ.  ಧಾರವಾಡ ಮೂಲದ ಪ್ರವಾಸಿಗನೊಬ್ಬ ಕುಟುಂಬ ಸಹಿತ ಕಾರಿನಲ್ಲಿ ಸಿಗಂದೂರಿಗೆ ಬಂದಿದ್ದರು. ಕಾರುಗಳನ್ನು ಸರದಿಯಲ್ಲಿ ಬಿಡುವ ವಿಚಾರದಲ್ಲಿ ಗೇಟ್ ಸಿಬ್ಬಂದಿ ಹಾಗೂ ಪ್ರವಾಸಿಗನ ನಡುವೆ ಜಗಳವಾಗಿದೆ. ಈ ಸಂದರ್ಭ ಪ್ರವಾಸಿಗ ಕಾರಿನಲ್ಲಿದ್ದ ಕೊಡಲಿ ತೋರಿಸಿ ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.ಘಟನೆ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಪ್ರವಾಸಿಗನನ್ನ ವಿಚಾರಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. 

ಭದ್ರಾವತಿಯಲ್ಲಿ ಬೃಹತ್ ವಸತಿ ಬಡಾವಣೆ: ಅರ್ಜಿ ಆಹ್ವಾನ malnad short news today

ಭದ್ರಾವತಿ : ಕರ್ನಾಟಕ ಗೃಹ ಮಂಡಳಿ (KHB) ಭದ್ರಾವತಿ ನಗರದಲ್ಲಿ ಬೃಹತ್ ವಸತಿ ಬಡಾವಣೆ ಅಭಿವೃದ್ಧಿಪಡಿಸಲು ಮುಂದಾಗಿದೆ. ನಗರದ ಹೊರವಲಯದಲ್ಲಿ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕಾರೇಹಳ್ಳಿ ಗ್ರಾಮದಲ್ಲಿ ಈ ಹೊಸ ಬಡಾವಣೆಯನ್ನು ನಿರ್ಮಿಸಲಾಗುತ್ತಿದೆ. ಈ ಸಂಬಂಧ ಸಾರ್ವಜನಿಕರಿಂದ ನಿವೇಶನಗಳಿಗಾಗಿ ಬೇಡಿಕೆ ಸಮೀಕ್ಷೆಯ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಇಲ್ಲಿನ ಕಾರೇಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 150 ಎಕರೆ ಪ್ರದೇಶದಲ್ಲಿ ಸಕಲ ಮೂಲಸೌಕರ್ಯಗಳನ್ನು ಒಳಗೊಂಡ ವಸತಿ ಬಡಾವಣೆಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಆಸಕ್ತ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಪ್ರಾರಂಭದ ದಿನ: ಮೇ 6, 2025 ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 8, 2025 ಹೆಚ್ಚಿನ ವಿವರಗಳಿಗಾಗಿ ಮಂಡಳಿಯ ವೆಬ್‌ಸೈಟ್ https://www.khb.karnataka.gov.in ಅನ್ನು ಸಂಪರ್ಕಿಸಬಹುದು.

ಶಿವಮೊಗ್ಗದಲ್ಲಿ ಪೊಲೀಸರಿಂದ ಏರಿಯಾ ಡಾಮಿನೇಷನ್ malnad short news today

ಶಿವಮೊಗ್ಗ : ಶಿವಮೊಗ್ಗ ಪೊಲೀಸರು ಮತ್ತೊಮ್ಮೆ ಏರಿಯಾ ಡಾಮಿನೇಷನ್​ ಹಾಗೂ ಕಾಲ್ನಡಿಗೆ ಗಸ್ತುನ್ನು ಚುರುಕುಗೊಳಿಸಿದ್ದಾರೆ.  ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ, ಜೂನ್ 10 ರಂದು ಸಂಜೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಏರಿಯಾ ಡಾಮಿನೇಷನ್ (Area Domination) ಮತ್ತು ವಿಶೇಷ ಕಾಲ್ನಡಿಗೆ ಗಸ್ತು ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆಯು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದೆ. ಆಯಾ ಪೊಲೀಸ್ ಉಪ ವಿಭಾಗಗಳ ಡಿವೈಎಸ್‌ಪಿ (DySP) ಗಳ ನೇತೃತ್ವದಲ್ಲಿ, ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ  ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದವರು, ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರು ಮತ್ತು ಕೋಟ್ಪಾ ಕಾಯ್ದೆ (COTPA – Cigarettes and Other Tobacco Products Act) ಉಲ್ಲಂಘಿಸಿದವರ ವಿರುದ್ಧ ಲಘು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

 

Share This Article