malnad news today / ಶಿವಮೊಗ್ಗ ಪೊಲೀಸರ ಒಂದೊಳ್ಳೆ ಕೆಲಸ / ಚಿತ್ರದುರ್ಗ ಹೈವೆಯಲ್ಲಿ ಬಿರುಕು/ ಗುಂಡಿಗೆ ಬಿದ್ದ ಹಸು!/ ಶಿವಮೊಗ್ಗ ಸುದ್ದಿಗಳು

Malenadu Today

malnad news today ಶಿವಮೊಗ್ಗ: ಕೂಡ್ಲಿಗೆರೆಯಲ್ಲಿ ರಕ್ತದಾನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ

malnad news today  ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ಭದ್ರಾವತಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಕೂಡ್ಲಿಗೆರೆ ಇವರ ಸಂಯುಕ್ತ ಆಶ್ರಯದಲ್ಲಿ, ಮೆಗ್ಗಾನ್ ರಕ್ತ ಕೇಂದ್ರದ ಸಹಯೋಗದೊಂದಿಗೆ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ವೈದ್ಯರು, ಸರ್ಕಾರಿ ನೌಕರರು, ಮಹಿಳೆಯರು, ಸಾರ್ವಜನಿಕರು, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ನೌಕರರು ಸೇರಿದಂತೆ ಒಟ್ಟು 54 ಮಂದಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು. ಸಮಾಜಕ್ಕೆ ಉಪಯುಕ್ತವಾದ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

blood donated by shivamogga police
blood donated by shivamogga police
malnad news today malnad news today
malnad news today

ಶಿವಮೊಗ್ಗ: ಹಸುವನ್ನ ರಕ್ಷಿಸಿದ ಅಗ್ನಿಶಾಮಕ ದಳ

ಶಿವಮೊಗ್ಗದ ಹೆರಿಗೆ ಸಮೀಪದ ಹಾತಿನಗರದ ಟಿಎಸ್‌ಡಬ್ಲ್ಯೂ ಕಾಲೋನಿಯಲ್ಲಿ ನಿನ್ನೆ ಮಧ್ಯಾಹ್ನ ಮೇವು ಅರಸುತ್ತಿದ್ದ  ಹಸುವೊಂದು ಆಯತಪ್ಪಿ ನೀರಿನ ಗುಂಡಿಗೆ ಬಿದ್ದಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಶಿವಮೊಗ್ಗ ಅಗ್ನಿಶಾಮಕ ದಳದ ಸಿಬ್ಬಂದಿ, ಹಗ್ಗದ ನೆರವಿನಿಂದ ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಡಿಎಫ್‌ಎ ಅಶೋಕ್ ಕುಮಾರ್ ನೇತೃತ್ವದಲ್ಲಿ ಎಎಸ್‌ಒ ಮುಕ್ತಮ್ ಹುಸೇನ್, ಚೇತನ್, ಗಣೇಶ್, ಶರತ್‌ಕುಮಾರ್, ನಿಹಾರ್, ಯರ‍್ರಿ ಸ್ವಾಮಿ, ಪ್ರಸಾದ್ ನಾಯಕ್ ಮತ್ತು ಯಶವಂತ್ ಭಾಗವಹಿಸಿದ್ದರು.

- Advertisement -
shivamogga chitradurga highway road broken malnad news today
shivamogga chitradurga highway road broken

ಶಿವಮೊಗ್ಗ-ಚಿತ್ರದುರ್ಗ ಹೆದ್ದಾರಿ ಗುಣಮಟ್ಟದ ಬಗ್ಗೆ ಸಾರ್ವಜನಿಕರ ಆಕ್ರೋಶ

ಶಿವಮೊಗ್ಗ-ಚಿತ್ರದುರ್ಗ ಸಂಪರ್ಕಿಸುವ 527 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ 13, ಲೋಕಾರ್ಪಣೆಗೊಂಡು ಕೇವಲ ಒಂದು ತಿಂಗಳಲ್ಲೇ ಬಿರುಕು ಬಿಟ್ಟಿದೆ. ಒಂದೇ ಮಳೆಗೆ ರಸ್ತೆಯ ಇಕ್ಕೆಲೆಗಳು ಬಿರುಕು ಬಿಟ್ಟಿದ್ದು, ಇಲ್ಲಿನ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.  ಸುಮಾರು 106 ಕಿ.ಮೀ. ಉದ್ದದ ಈ ಹೆದ್ದಾರಿ ನಿರ್ಮಾಣದಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಭದ್ರಾ ನದಿಗೆ ಅಡ್ಡಲಾಗಿ ಹೊಳೆಹೊನ್ನೂರಿನಲ್ಲಿ ಸೇತುವೆಯನ್ನೂ ಕಟ್ಟಲಾಗಿದೆ. ಕಳೆದ ತಿಂಗಳಷ್ಟೇ ಸಂಸದ ಬಿ.ವೈ. ರಾಘವೇಂದ್ರ ಅವರು ಉದ್ಘಾಟಿಸಿದ್ದ ಈ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಕ್ರಾಂಕ್​ಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಗುತ್ತಿಗೆ ಪಡೆದ ಕಂಪನಿ ಮತ್ತು ಸಂಬಂಧಪಟ್ಟ ಇಂಜಿನಿಯರ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. 

malnad news today

 

Share This Article