ಮಂಜುನಾಥ್​ ಗೌಡರಿಗೆ ಮಲೆನಾಡು ಅಭಿವೃದ್ಧಿ! ಸುಂದರೇಶ್​ರಿಗೆ ಸೂಡಾ? ಪಲ್ಲವಿ ಅವರಿಗೆ ಸಾಂಬಾರ್ ಮಂಡಳಿ! ಇವತ್ತೇ ಘೋಷಣೆ ಸಾಧ್ಯತೆ

SHIVAMOGGA  Feb 29, 2024   ಕಾಂಗ್ರೆಸ್​ನಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಂಚಿಕೆ ಅರ್ಧವಾಗಿತ್ತು, ಇದೀಗ ಪೂರ್ತಿಯಾಗುವುದು ಗ್ಯಾರಂಟಿ ಯಾಗಿದೆ. ಈ ಮೊದಲು  ಶಿವಮೊಗ್ಗ ಜಿಲ್ಲೆ ಭದ್ರಾವತಿ ಶಾಸಕ ಸಂಗಮೇಶ್ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಸ್ಥಾನ ಲಭಿಸಿತ್ತು

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತಕ್ಕೆ ಶಿವಮೊಗ್ಗ ಜಿಲ್ಲೆ ಸಾಗರ-ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರನ್ನ ನೇಮಿಸಲಾಗಿದೆ.ಇತ್ತ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್​ ಗೆ ನಿರೀಕ್ಷೆಯಂತೆಯೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ/ಲ್ಯಾಂಡ್ ಆರ್ಮಿಯ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. 

ಇದಿಷ್ಟೆ ಅಲ್ಲದೆ ಶಿವಮೊಗ್ಗದಲ್ಲಿ ಕಾರ್ಯಕರ್ತರ ಕೋಟದಲ್ಲಿ ಜಿ.ಪಲ್ಲವಿ, ಹೆಚ್​.ಎಸ್​.ಸುಂದರೇಶ್ ಹಾಗೂ ಆರ್​.ಎಂ.ಮಂಜುನಾಥ್​ ಗೌಡರಿಗೆ ಸ್ಥಾನಮಾನ ಸಿಗಲಿದೆ ಎಂದು ಮಲೆನಾಡು ಟುಡೆ ಖಚಿತ ಮೂಲಗಳ ವರದಿಯನ್ನ ಪ್ರಸಾರ ಮಾಡಿತ್ತು. ಇದೀಗ ವರದಿ ನಿಜವಾಗಿದೆ. 

ಈ ಸಂಬಂಧ 44 ಕಾಂಗ್ರೆಸ್ ಕಾರ್ಯಕರ್ತರಿಗೆ ಇಂದು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪ್ರಕಟವಾಗುವ ನಿರೀಕ್ಷೆಯಿದೆ. ಇದಕ್ಕೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ  ಪಟ್ಟಿಯನ್ನು ಅಂತಿಮಗೊಳಿಸಿ ಸಹಿ ಕೂಡ ಹಾಕಿದ್ದಾರೆ ಎನ್ನಲಾಗಿದೆ. 

ಇವತ್ತು ಗುರುವಾರ ಆಯಾ ಇಲಾಖೆಗಳಿಂದ ಸಂಬಂಧಪಟ್ಟವರಿಗೆ ನೇಮಕ ಆದೇಶ ರವಾನೆಯಾಗಲಿದೆ. ಈ  ಪೈಕಿ  ಶಿವವಮೊಗ್ಗದ ವಿಚಾರವಾಗಿ ನೋಡುವುದಾದರೆ ಆರ್.ಎಂ.ಮಂಜುನಾಥ ಗೌಡರಿಗೆ ಮಲೆನಾಡು ಅಭಿವೃದ್ಧಿ ಮಂಡಳಿ ಹೆಚ್​ ಎಸ್​ ಸುಂದರೇಶ್, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ  ಪಲ್ಲವಿ, ಸಾಂಬಾರು ಮಂಡಳಿ ನೀಡುವ ಸಾಧ್ಯತೆ ಇದೆ. 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು