Malenadu Farmers ಅಯ್ಯೋ ದನ ಬ್ಯಾಣಕ್ ಹೋಗಿದ್ ಬರ್ಲೇ ಇಲ್ಲ ಮಾರಾಯ ಮೂರ್ ದಿನ ಆತ್ ನೋಡು, ಹಲಸಿನ ಹಣ್ಣು ಸೀಜನ್ ಬೇರೆ ಸಮಾ ತಿನ್ಕೊಂಡ್ ಬರ್ತವೆ. ಮನೆ ನೆನ್ಪಿಲ್ಲೇನೊ ಅವ್ಕೆ.ಇದು ಮಲ್ನಾಡ್ ಭಾಗದಲ್ಲಿ ಬ್ಯಾಣಕ್ಕೆ ದನ ಬಿಟ್ಟು ಹೊಡ್ದ್ ಮೇಲೆ ಜನ ದನ ಕರುಗಳು ಮನೆಗೆ ಬರಲಿಲ್ಲಾ ಅಂದ್ರೆ ಜನ ಮಾತಾಡ್ಕೊಳೊ ಮಾತು. ಆದರೆ ಇನ್ಮುಂದೆ ಹಂಗೆ ಮಾತಾಡಂಗೂ ಇಲ್ಲಾ. ಯಾಕಂದ್ರೆ ನಮ್ಮ ಅರಣ್ಯ ಸಚಿವರು ಮಲ್ನಾಡ್ ಭಾಗದಲ್ಲಿ ದನಕರು ಕುರಿ ಮೇಕೆ ಗಳನ್ನು ಬ್ಯಾಣಕ್ಕೆ ಬಿಡಂಗಿಲ್ಲ ಅಂತ ಆದೇಶ ಕೊಟ್ಟಿದ್ದಾರೆ.
ಆ ಸೂಚನೆಯಲ್ಲಿ ಎಂಥಾ ಉಂಟು ಗೊತ್ತಾ ಕಾಡಲ್ಲಿ ಜಾನುವಾರುಗಳ್ನ ಮೇಯಕ್ ಬಿಟ್ರೆ ಮೊಳ್ಕೆ ಒಡ್ದಿದ್ ಸಣ್ ಸಸಿಗಳ್ನ ಹಾಳ್ ಮಾಡ್ತವೆ. ಇದ್ರಿಂದ ಕಾಡಿನ ಬೆಳವಣಿಗೆ ಆಗಲ್ಲ. ಜೊತೆಗೆ ಕಾಡಲ್ಲಿ ಮೇಯೋ ಸಾಕುಪ್ರಾಣಿಗಳು ಕಾಡು ಪ್ರಾಣಿಗಳ ಮೇವಿಗೆ ಬರ ಉಂಟು ಮಾಡ್ತವೆ. ಇದ್ರಿಂದ ಮಾನವ-ವನ್ಯಜೀವಿ ಸಂಘರ್ಷ ಕಾರಣ ಆಗ್ತದೆ. ಇದ್ರಿಂದ ಮಲೆನಾಡಿನ ಜನ್ರಿಗೂ ಹಾಗೂ ಜಾನುವಾರಿಗೂ ಬಲೆ ಸಂಕಷ್ಟ ಆಗೋ ಕಾಣ್ತಾ ಇದೆ. ನಾಟಿ ಟೈಂನಲ್ಲಿ ದನಗಳನ್ನು ಗದ್ದೆಗೆ ಬಿಡಂಗಿಲ್ಲ.

Malenadu Farmers
ಅತ್ಲಾಗೆ ದನಕರ ಕಟ್ಟಿ ಸಾಕಾಗಲ್ಲ,ಹಂಗಿಂಗ್ ಮಾಡಿ ಕೊಟ್ಗೇಲಿ ಕಟ್ ಹಾಕುದ್ರೆ ಅವ್ ಕಾಲ್ ಬಡ್ ಕಟ್ಟಲ್ಲನ್ರಿ, ಹೀಗಿದ್ದಾಗ ಬಿಟ್ಟು ಹೊಡಿಬೇಡಿ ಅಂದರೆ ದನಕರಕ್ಕೆ ಹುಲ್ ಎಲ್ಲಿಂದ ತಂದ್ ಹಾಕೋದ್ರಿ. ಒಣ ಹುಲ್ ಬಾರಿ ಕಾಸ್ಟ್ಲಿ ಬೇರೆ ಆಗ್ಯಾದೆ. ಹಸಿ ಹುಲ್ ಹಾಕಣ ಅಂದರೆ ತೋಟಕ್ ಔಷದಿ ಹೊಡಿಯೋ ಟೈಮು ಹಂಗಾಗಿ ಬ್ಯಾಣಕ್ ಬಿಟ್ಟಿಲ್ಲಾ ಅಂದರೆ ಬಗಿ ಇಲ್ಲಾ. ಸಿಂಧಿ ದನಗಳು ಏನೋ ಅವ್ವು ಕಟ್ಟಿದ್ದಲ್ಲೆ ನಿಂತ್ ನಿಂತ್ ಬಡ್ ಅಗಿರ್ತವೆ ಅತ್ಲಾಗೂ ಹೋಗಲ್ಲ ಇತ್ಲಗೂ ಹೋಗಲ್ಲ.


ಹೀಟಿಗ್ ಬಂದ್ ಟೈಮಲ್ಲಿ ಒಂದು ಇಂಗಿಷನ್ ಹಾಕ್ಸುದ್ರೆ ಅದರ ಕೆಲಸ ಸಾಪ್ ಆತು. ಆದರೆ ಮಲ್ನಾಡ್ ಗಿಡ್ಡ ಹಂಗಂತ ಮಾಡಿರ ಇಲ್ಲಪ ಅವ್ವು ನಿತ್ತಲ್ ನಿಲ್ಲಲ್ಲ ಅವ್ಕೆ ಅಲ್ಲಿ ಇಲ್ಲಿ ಹೆರ್ಕಿ ತಿಂದು ಹೊಟ್ಟೆ ತುಂಬ್ಸಕೊಂಡ್ ಬಂದೇ ಅಭ್ಯಾಸ. ಇದ್ರು ಮದ್ಯ ಈ ಸರ್ಕಾರದವ್ರು ನೋಡುದ್ರೆ ದನಗಳನ್ನ ಮೇಯೋಕೆ ಬಿಟ್ರೆ , ಕಾಡಲ್ಲಿ ಚಿಗುರು ಬಿಟ್ಟ ಸಸಿ ಮೊಳಕೆ ಒಡಿಯಲ್ಲ ಹಾಳಾಕ್ತದೆ ಅಂತಾರೆ.ಆದರೆ ಅವ್ವು ಹೋಗಿ ಅಲ್ಲಿ ಮೇಯ್ದು ಸಗಣಿ ಹಾಕುದ್ರೆ ಇನ್ನೂ ಚೆನ್ನಾಗಿ ಮೊಳಕೆ ಚಿಗುರುತ್ತಲ್ಲಾ, ಈ ವಾದ ಯಾರು ಕೇಣಸ್ಕಳ್ಲಿಲ್ಲವಾ ಎಂತದೋ ಹಾಗೆ ಆಗಿನ್ ಕಾಲದಿಂದ ದನ ಕರುಗಳಿಂದ ಕಾಡ್ ನಾಶ ಆಗ್ದಿದ್ ಕಾಣೆ, ಈಗ ಆಗ್ತದೆಯೆ ಏನೋ?
Malenadu Farmers
ಅಲ್ದೆ ಕಾಡಲ್ಲಿ ಜಿಂಕೆ, ಕಡವೆ, ಹಂದಿ, ಮೊಲ, ಆನೆ ಇವೆಲ್ಲಾ ಗಿಡದ್ ಚಿಗರ್ ತಿಂತಾವೆ, ದನ ಮಾತ್ರ ಕಾಡ್ ಹಾಳ್ ಮಾಡ್ತದೆ ಅಂತಿರಾ? ಸಂಶಯ ಇದೆ ಕಣ್ರಿ. ಆದರೂ ಕಾನೂನು ಆಗದೆ, ನೋಟಿಸ್ ಬಂದದೆ. ದೊಡ್ಡ ದೊಡ್ಡವರು ಇದರ ಬಗ್ಗೆ ಅಪಸ್ವರ ಎತ್ತಾರೆ ಅಂತಾ ಕಾಣ್ತದೆ. ಆದರೂ ಅಲ್ಲಿವರೆಗೂ ಲೋಟ ತುಂಬುವಷ್ಟು ಹಾಲ್ ಕೊಡದ ಗಿಡ್ಡಗಳನ್ನ ಎಲ್ಲಿಗೆ ಬೆರ್ಸದು ಅಂತಾ ಗೊತ್ತಾಗ್ತಿಲ್ಲ
Malenadu Farmers Face Crisis as Forest Department Bans Cattle Grazing in Forests
Malenadu Farmers ,ಮಲೆನಾಡು, ದನಕರು, ಅರಣ್ಯ, ಮೇಯಲು ಬಿಡುವುದು, ಸರ್ಕಾರದ ಆದೇಶ, ಗಿಡ್ಡ ದನ, ರೈತರ ಸಂಕಷ್ಟ, ಮಾನವ-ವನ್ಯಜೀವಿ ಸಂಘರ್ಷ, ಕಾಡಿನ ಬೆಳವಣಿಗೆ, Malenadu, Cattle Grazing, Forest Department, Government Order, Gidda Cattle, Farmer’s Crisis, Human-Wildlife Conflict, Forest Conservation, Shivamogga, #Malenadu #CattleGrazingBan #ForestConservation #Shivamogga #FarmersProtest #GiddaCattle #KarnatakaForests