Maha Kumbh Mela | ಕುಂಭ ಮೇಳ ಕ್ಕೆ ತೆರಳಿದ್ದ ಶಿವಮೊಗ್ಗದ ಮಂದಿ ಸುರಕ್ಷಿತ | ಏನಂದ್ರು ಗೊತ್ತಾ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 31, 2025 ‌‌ 

ಉತ್ತರಪ್ರದೇಶದ ಪ್ರಯಾಗರಾಜ್‌ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದ ಬೆನ್ನಲ್ಲೆ ಶಿವಮೊಗ್ಗದಿಂದ ಕುಂಭಮೇಳಕ್ಕೆ ತೆರಳಿದ್ದ ಯಾತ್ರಿಕರು ಕ್ಷೇಮವಾಗಿದ್ದಾರೆ ಎಂಬ ಸುದ್ದಿಯೊಂದು ಸಮಾಧಾನ ಮೂಡಿಸ್ತಿದೆ. 

- Advertisement -

Maha Kumbh Mela

ಲಭ್ಯ ಮಾಹಿತಿ ಪ್ರಕಾರ, ಶಿವಮೊಗ್ಗದಿಂದ ಏಳು ಮಂದಿ ಮಹಾಕುಂಭಮೇಳಕ್ಕೆ ತೆರಳಿದ್ದರು. ಅಯೋದ್ಯೆಗೆ ತೆರಳಿ, ಅಲ್ಲಿಂದ ವಾರಣಸಿಗೆ ಬಂದು, ಬಳಿಕ ಅಲ್ಲಿಂದ ಕ್ಯಾಬ್‌ ಹಾಗೂ ಬಸ್‌ ಮತ್ತು ಸ್ಥಳಿಯರ ನೆರವಿನೊಂದಿಗೆ ಕುಂಭಮೇಳದ ಸ್ಥಳಕ್ಕೆ ತೆರಳಿದ್ದರು. ಇದರ ನಡುವೆ ಮೌನಿ ಅಮಾವಾಸ್ಯೆಯ ದಿನ ಜನ ಪ್ರವಾಹವೇ ಅಲ್ಲಿ ನೆರದ ಹಿನ್ನೆಲೆಯಲ್ಲಿ ಹಲವರು ಕಾಲ್ತುಳಿತದಲ್ಲಿ ಸಿಲುಕಿ ಸಾವನ್ನಪ್ಪಿದ್ದರು. 

ಹೀಗಾಗಿ ಶಿವಮೊಗ್ಗದಿಂದ ತೆರಳಿದ ಯಾತ್ರಿಕರ ವಿಚಾರವಾಗಿಯೂ ಆತಂಕ ಮೂಡಿತ್ತು. ಈ ನಡುವೆ ಶಿವಮೊಗ್ಗದಿಂದ ತೆರಳಿದ್ದ ಅಶೋಕ್‌ ಬೆದ್ರೆ, ಹಾಗೂ ಲತಾ ಬೆದ್ರೆಯವರು ಕುಂಭಮೇಳದಿಂದ ವಿಡಿಯೋ ಮೂಲಕ ಮಾತನಾಡಿ ಆ ದೃಶ್ಯಾವಳಿಗಳನ್ನು ತಮ್ಮ ಕುಟುಂಬಸ್ಥರಿಗೆ ಕಳುಹಿಸಿಕೊಟ್ಟಿದ್ದಾರೆ. 

ಇನ್ನೂ ವಿಡಿಯೋದಲ್ಲಿ ಕುಂಭಮೇಳದಲ್ಲಿ ಹೆಚ್ಚು ಟ್ರಾಫಿಕ್‌ ಅನ್ನುವುದು ಬಿಟ್ಟರೆ ಎಲ್ಲಾ ವ್ಯವಸ್ಥೆಗಳು ಅನುಕೂಲಕರವಾಗಿದೆ. ಇಂತಹ ಅವಕಾಶವನ್ನು ಮಿಸ್‌ ಮಾಡಿಕೊಳ್ಳಬೇಡಿ ಎಂದಿದ್ದಾರೆ. 

SUMMARY  | Pilgrims from Shimoga are safe at the ongoing Maha Kumbh Mela in Prayagraj, Uttar Pradesh.

KEY WORDS | Pilgrims from Shimoga are safe at Maha Kumbh Mela , Maha Kumbh Mela, Prayagraj, Uttar Pradesh

Share This Article