madhu bangarappa : ಸಿಗಂಧೂರು ಸೇತುವೆಗೆ ಹೋಗಿ ಅಣ್ಣಾ ಉಯ್ಯಾಲೆ ಆಡಿ ಬಂದಿದ್ದಾರೆ : ಮಧು ಬಂಗಾರಪ್ಪ ಹೀಗಂದಿದ್ಯಾಕೆ
madhu bangarappa : ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ ನಡೆಸಿದರು.
ಇಬ್ಬರು ಸಹ”ಅಭಿವೃದ್ಧಿ ಹರಿಕಾರರು ಎಂದು ಪುಗಸಟ್ಟೆ ಪ್ರಚಾರ ತೆಗೆದುಕೊಳ್ಳುತ್ತಾರೆ. ಮಲೆನಾಡಿನ ಜನರು ಎಂದರೆ ಅವರಿಗೆ ಆಗುವುದಿಲ್ಲ ಎನಿಸುತ್ತದೆ. ಈ ಹಿಂದೆ ಅವರು ದಂಡಾವತಿ ಯೋಜನೆಯನ್ನು ವಿರೋಧಿಸಿದ್ದರು. ನೀರಾವರಿ ಯೋಜನೆಗಳೆ ಇವರಿಗೆ ಬೇಕಾಗಿಲ್ಲ. ಒಬ್ಬರ ಮನೆಹಾಳು ಮಾಡಿ ಅಭಿವೃದ್ಧಿ ಮಾಡಬಾರದು ಎಂದರು. ಇದೇ ವೇಳೆ ನಿನ್ನೆ ದಿನ ಸಿಗಂದೂರು ಸೇತುವೆಗೆ ಹೋಗಿ ಅಣ್ಣ, ತಮ್ಮ ಇಬ್ಬರೂ ಉಯ್ಯಾಲೆ ಆಡಿಕೊಂಡು ಬಂದಿದ್ದಾರೆ” ಎಂದರು.
ದಿನ ಬೆಳಿಗ್ಗೆ ಎದ್ದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯವರು ಟೀಕೆ ಮಾಡುತ್ತಾರೆ. ಆಗ ಸರ್ಕಾರ ಬೀಳುತ್ತೆ, ಈಗ ಸರ್ಕಾರ ಬೀಳುತ್ತೆ ಅಂತಾ ಟೀಕೆ ಮಾಡುವುದಷ್ಟೇ ಇವರ ಕೆಲಸವಾಗಿದೆ” ಎಂದು ಮಧು ಬಂಗಾರಪ್ಪ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ನಂತರ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾತನಾಡಿದ ಅವರು, ಸುಮಾರು 17 ಸಾವಿರ ಮಕ್ಕಳಲ್ಲಿ 12 ಸಾವಿರಕ್ಕೂ ಹೆಚ್ಚು ಮಕ್ಕಳು ಉತ್ತಮ ಅಂಕ ಗಳಿಸಿದ್ದು, ಮತ್ತೆ ಪರೀಕ್ಷೆ ನಡೆಸಿರುವುದು ಮಕ್ಕಳಿಗೆ ಅನುಕೂಲವಾಗಿದೆ ಎಂದರು.ಪ್ರವಾಸೋದ್ಯಮ ಮತ್ತು ಕ್ರೀಡೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಹೆಚ್ಚು ಅನುದಾನ ತರಲು ಯೋಜನೆ ರೂಪಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಚಂದ್ರಗುತ್ತಿ ಅಭಿವೃದ್ಧಿಗೂ ಹೆಚ್ಚು ಹಣ ತರಲು ಯೋಜಿಸಲಾಗಿದ್ದು, ಇದಕ್ಕಾಗಿ ₹2.84 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
madhu bangarappa : ಆರ್ ಅಶೋಕ್ ಕನ್ನಡಕ್ಕೆ ಮಧು ಲೇವಡಿ
ಇದೇ ವೇಳೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕನ್ನಡ ಭಾಷೆಯ ಬಗ್ಗೆ ಲೇವಡಿ ಮಾಡಿದ ಮಧು ಬಂಗಾರಪ್ಪ, “ಆರ್. ಅಶೋಕ್ ಕನ್ನಡವೇ ಸರಿ ಇಲ್ಲ. ಅದೇನೋ ‘ಬಿದಿತ್ತದೆ, ಬಿದ್ದೋತದೆ’ ಅಂತಾರೆ. ಇಂತಹವರೆಲ್ಲ ನನ್ನ ಕನ್ನಡದ ಬಗ್ಗೆ ಟೀಕೆ ಮಾಡ್ತಾರೆ. ಅದೇನು ಬೆಂಗಳೂರು ಕನ್ನಡ ಮಾತನಾಡ್ತಾರೋ ಏನೋ” ಎಂದು ವ್ಯಂಗ್ಯವಾಡಿದರು.