ಓಲ್ಡ್​ ಟೌನ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೇಮ ಕದನ! ಪ್ರೀತಿಸಿದ ಯುವತಿಯ ಬ್ರದರ್​​ ಗ್ಯಾಂಗ್​ನಿಂದ ಇಬ್ಬರಿಗೆ ಇರಿತ, ಸಾವು! ಎಸ್​ಪಿ ಹೇಳಿದ್ದೇನು?

ajjimane ganesh

Bhadravathi ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ನಡೆದ ಗಲಾಟೆಯಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಭದ್ರಾವತಿ ನಗರದ (Bhadravathi)ಜೈಭೀಮ್ ನಗರದಲ್ಲಿ ಪರಸ್ಪರ ಪ್ರೀತಿಸಿದ್ದ ಯುವತಿ ಮತ್ತು ಯುವಕನ ಪರವಾಗಿ ಮಧ್ಯ ಪ್ರವೇಶಿಸಿ ಬೆಂಬಲ ನೀಡಲು ಪ್ರಯತ್ನಿಸಿದರು ಎಂಬ ಕಾರಣಕ್ಕೆ ಇಬ್ಬರನ್ನು ಮಾರಣಾಂತಿಕವಾಗಿ ಇರಿದು ಕೊಲೆ ಮಾಡಿದ್ದಾರೆ. ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. 

Lovers Support Leads to Double M in Bhadravathi 5 Accused Arrested
Lovers Support Leads to Double M in Bhadravathi 5 Accused Arrested

ಘಟನೆ ಸಂಬಂಧ ಎಸ್​ಪಿ ಮಿಥುನ್​ ಕುಮಾರ್​ ಮಾಧ್ಯಮಗಳಿಗೆ ವಾಟ್ಸಾಪ್​ ಸಂದೇಶ ರವಾನಿಸಿದ್ದು, ಘಟನೆಯ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ಅದರ ಪ್ರಕಾರ, ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಯುವಕ-ಯುವತಿ ನಾಪತ್ತೆಯಾಗಿದ್ದರು. ಪರಸ್ಪರ ಪ್ರೀತಿಸಿದ್ದ ಅವರು ಓಡಿ ಹೋಗಿದ್ದು, ನಿನ್ನೆ ಸಂಜೆ ವೇಳೆ ಹಳೇ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಇವರಿಬ್ಬರನ್ನು ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಪಂಚಾಯಿತಿಗೆ ಅಂತಾ ಹಲವಾರು ಮಂದಿ ಸೇರಿದ್ದರು. ಇನ್ನೂ ಯುವತಿ ತಾನು ಯುವಕನ ಜೊತೆಯಲ್ಲೇ ಹೋಗುವುದಾಗಿ ಕುಟುಂಬಸ್ಥರ ಎದುರು ಸ್ಪಷ್ಟಪಡಿಸಿದ್ದಳು. ಈ ಕಾರಣಕ್ಕೆ ಗಲಾಟೆ ನಡೆದಿದೆ. ಗಲಾಟೆಯ ನಡುವೆ ಸಿಟ್ಟಾದ ಯುವತಿಯ ಸಹೋದರ ಮತ್ತು ಆತನ ಸ್ನೇಹಿತರು, ಯುವಕನ ಪರವಾಗಿದ್ದಾರೆ. ಆತನಿಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರಿಗೆ ಇರಿದಿದ್ದಾರೆ.  25 ವರ್ಷದ ಕಿರಣ್‌ ಮತ್ತು ಈ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ 65 ವರ್ಷದ ಮಂಜುನಾಥ್ ಎಂಬಿಬ್ಬರು ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇನ್ನೂ ಘಟನೆ ಸಂಬಂಧ ಪೊಲೀಸರು ಐವರು ಆರೊಪಿಗಳನ್ನ ಅರೆಸ್ಟ್ ಮಾಡಿದ್ದಾರೆ. Bhadravathi

Lovers Support Leads to Double M in Bhadravathi 5 Accused Arrested
Lovers Support Leads to Double M in 5 Accused Arrested

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Lovers Support Leads to Double M in Bhadravathi 5 Accused Arrested
Lovers Support Leads to Double M in  5 Accused Arrested
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಪ್ರೇಮಿಗಳಿಗೆ ಬೆಂಬಲ ಭದ್ರಾವತಿಯಲ್ಲಿ ಇಬ್ಬರ ಕಗ್ಗೊಲೆ; ಯುವತಿ ಸಹೋದರ ಸೇರಿ 5 ಮಂದಿ ಬಂಧನLovers Support Leads to Double M in 5 Accused Arrested Bhadravathi
Share This Article