Vidyanagar SBI ನವೆಂಬರ್ 18, 2025 : ಮಲೆನಾಡು ಟುಡೆ : ಶಿವಮೊಗ್ಗ ವಿದ್ಯಾನಗರ ಎಸ್ಬಿಐ ಮುಂಭಾಗ ನಿನ್ನೆ ದಿನ ಸೋಮವಾರ ಸಂಜೆ ಲಾರಿಯೊಂದು ಹರಿದು ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವಿದ್ಯಾ ನಗರ ನಿವಾಸಿ ಮಣಿಕಂಠ (25) ಮೃತರು. ಮನೆಯಿಂದ ಹೊರಗಡೆ ಹೊರಟಿದ್ದು, ಮುಂಭಾಗದಲ್ಲಿ ತೆರಳು ತ್ತಿದ್ದ ಟಿಲ್ಲರ್ನ್ನು ಓವರ್ ಟೇಕ್ ಮಾಡಲು ಹೋದಾಗ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದ್ದು, ಹಿಂಬದಿ ಚಕ್ರ ಮಣಿಕಂಠ ಅವರ ಮೇಲೆ ಹರಿದಿದೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಭವಿಷ್ಯ: ಇವತ್ತಿನ ರಾಶಿಫಲ! ಆರ್ಥಿಕ ಸಂಕಷ್ಟ, ಅಡೆತಡೆ! ವಿಶೇಷ ಸುದ್ದಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
ಜೂನಿಯರ್ ಹಾಕಿ ವಿಶ್ವಕಪ್ಗೆ ಶಿವಮೊಗ್ಗದ ಸುನಿಲ್ ಪಿ.ಬಿ. ಆಯ್ಕೆ!
Shimoga Accident: Lorry Runs Over Biker, Instant Death at Vidyanagar SBI

