linganamakki dam Water Level Today Report ಲಿಂಗನಮಕ್ಕಿ ಜಲಾಶಯ: ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ – ಆಶಾದಾಯಕ ಬೆಳವಣಿಗೆ
ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. (ಜೂನ್ 16, 2025) ಬೆಳಿಗ್ಗೆ 8:00 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ, ಲಿಂಗನ ಮಕ್ಕಿ ಜಲಾಶಯದ ನೀರಿನ ಮಟ್ಟದ ವಿವರ ಹೀಗಿದೆ.
ಪ್ರಸ್ತುತ ನೀರಿನ ಮಟ್ಟ 1766.40 ಅಡಿಗಳಿಗೆ ತಲುಪಿದ್ದು ಕೇವಲ ಒಂದು ದಿನದ ಅಂತರದಲ್ಲಿ 2.65 ಅಡಿಗಳಷ್ಟು ನೀರಿನ ಮಟ್ಟ ಹೆಚ್ಚಾಗಿದೆ. ಇನ್ನೂ ಜಲಾಶಯದ ಗರಿಷ್ಠ ನೀರಿನ ಮಟ್ಟ (FRL) 1819.00 ಅಡಿಗಳಿಷ್ಟಿದೆ. ಕಳೆದ ವರ್ಷ ಇದೇ ದಿನದಂದು ನೀರಿನ ಮಟ್ಟ 1745.25 ಅಡಿಗಳಷ್ಟಿತ್ತು. ಡ್ಯಾಂನ ಒಳಹರಿವು 39961.00 ಕ್ಯೂಸೆಕ್ಸ್‌ನಷ್ಟಿದೆ. ಹೊರಹರಿವು 3012.00 ಕ್ಯೂಸೆಕ್ಸ್‌ನಷ್ಟಿದೆ. ಈ ಪೈಕಿ ಪೆನ್‌ಸ್ಟಾಕ್‌ಗಳಿಂದ 2239.86 ಕ್ಯೂಸೆಕ್ಸ್ ಮತ್ತು ಸ್ಲೂಸ್ ಮೂಲಕ 771.00 ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.

linganamakki dam Water Level Today Report
151.64 ಟಿಎಂಸಿ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ತುತ 35.01 ಟಿಎಂಸಿ (ಶೇ. 23.09) ನೀರು ಸಂಗ್ರಹವಾಗಿದೆ. ಜಲಾಶಯದ ಅಧಿಕಾರಿಗಳ ಮಾಹಿತಿ ಪ್ರಕಾರ, ಲಿಂಗನಮಕ್ಕಿಯಲ್ಲಿ 9.50 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಲಿಂಗನಮಕ್ಕಿಯಲ್ಲಿ 138.0 ಮಿ.ಮೀ. ಮಳೆ ದಾಖಲಾಗಿದ್ದು, ಇದು ಜಲಾಶಯಕ್ಕೆ ಉತ್ತಮ ಹರಿವನ್ನು ನೀಡುತ್ತಿದೆ.

ಲಿಂಗನಮಕ್ಕಿ ಡ್ಯಾಂ, ಲಿಂಗನಮಕ್ಕಿ ಜಲಾಶಯ, ಲಿಂಗನಮಕ್ಕಿ ನೀರಿನ ಮಟ್ಟ, ಡ್ಯಾಂ ಒಳಹರಿವು, ಡ್ಯಾಂ ಹೊರಹರಿವು, ಲಿಂಗನಮಕ್ಕಿ ಮಳೆ, ಶರಾವತಿ ಡ್ಯಾಂ, ಜಲಾಶಯದ ಸ್ಥಿತಿ, ಶಿವಮೊಗ್ಗ ಡ್ಯಾಂ , Linganamakki Dam, Linganamakki Reservoir, Linganamakki water level, Dam inflow, Dam outflow, Linganamakki rain, Sharavathi Dam, Reservoir status, Shivamogga Dam
ಮಲ್ನಾಡ್ನ ಸುದ್ದಿಗಳಿಗಾಗಿ ಇಲ್ಲಿನೋಡಿ