ನಿಮ್ಮಲ್ಲಿ ಹಳೆಯ ಪುಸ್ತಕಗಳೇನಾದ್ರು ಇದೀಯಾ, ಹಾಗಾದ್ರೆ ಈ ಸುದ್ದಿ ಓದಿ

ಶಿವಮೊಗ್ಗ : ಮನೆಯಲ್ಲಿ ಹಳೆ ಪುಸ್ತಕಗಳಿವೆಯಾ? ಮಕ್ಕಳ ಓದಿಗೆ ಅನುಕೂಲವಾಗುವಂತಹ ಬುಕ್​ಗಳು ನಿಮ್ಮ ಬಳಿ ಇವೆಯಾ? ಹಾಗಾದರೆ, ನೀವೊಂದು ಉಪಕಾರ ಮಾಡುವ ಅವಕಾಶವಿದೆ. ಶಿವಮೊಗ್ಗ  ನಗರದ ಮಂಜುನಾಥ ಟಾಕೀಸ್ ಬಳಿ ಇರುವ ಸರ್ಕಾರಿ ಅನುದಾನಿತ ಜೆಪಿಎನ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಗ್ರಂಥಾಲಯವನ್ನು ಪುನರ್ ಸ್ಥಾಪಿಸಲಾಗಿದೆ. ಗೃಂಥಾಲಯಕ್ಕೆ ಅಮೂಲ್ಯ ಪುಸ್ತಕಗಳು ಬೇಕಾಗಿವೆ. ಈ ನಿಟ್ಟಿನಲ್ಲಿ ನೀವುಗಳು ನಿಮ್ಮ ಪುಸ್ತಕಗಳನ್ನ ಶಾಲೆಗೆ ಒದಗಿಸಬಹುದು

ಶಾಲಾ ಮಕ್ಕಳಿಗೆ ಓದಿನ ಅಭಿರುಚಿ ಬೆಳೆಸಲು ಮತ್ತು ಜ್ಞಾನದ ವಿಸ್ತರಣೆಗಾಗಿ ಈ ಗ್ರಂಥಾಲಯವನ್ನು ಮರುಸಜ್ಜುಗೊಳಿಸಲಾಗುತ್ತಿದೆ. ಇದಕ್ಕಾಗಿ ಸಾರ್ವಜನಿಕರು ಹಾಗೂ ಪುಸ್ತಕ ಪ್ರೇಮಿಗಳು ತಮ್ಮಲ್ಲಿರುವ ಅಥವಾ ಪರಿಚಯಸ್ಥರಲ್ಲಿರುವ ಶಾಲಾ ಮಕ್ಕಳಿಗೆ ಉಪಯುಕ್ತವಾಗುವಂತಹ ಹಳೆಯ ಪುಸ್ತಕಗಳನ್ನು ಶಾಲೆಗೆ ಉಡುಗೊರೆಯಾಗಿ ನೀಡಬೇಕೆಂದು ಶಾಲಾ ಆಡಳಿತ ಮಂಡಳಿ ಮನವಿ ಮಾಡಿದೆ. 

 Library Re establishment at JPN High School 
 Library Re establishment at JPN High School 

ಮಕ್ಕಳ ಸಾಹಿತ್ಯ, ವಿಜ್ಞಾನ, ಕಥೆ, ಕವನ ಹಾಗೂ ಸಾಮಾನ್ಯ ಜ್ಞಾನದ ಪುಸ್ತಕಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಮನೆಯ ಮೂಲೆಯಲ್ಲಿ ಧೂಳು ಹಿಡಿಯುತ್ತಿರುವ ಪುಸ್ತಕಗಳು ಶಾಲೆಯ ಗ್ರಂಥಾಲಯ ಸೇರಿದರೆ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲಿವೆ.  ಈ ಜ್ಞಾನದಾನದ ಅಭಿಯಾನಕ್ಕೆ ಶಿವಮೊಗ್ಗದ ನಾಗರಿಕರು ಕೈಜೋಡಿಸಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರಲಾಗಿದೆ. ಪುಸ್ತಕಗಳನ್ನು ನೀಡಲು ಇಚ್ಛಿಸುವವರು ನೇರವಾಗಿ ಜೆಪಿಎನ್​ ಶಾಲೆಗೆ ನೇರವಾಗಿ ತೆರಳಿ ನೀಡಬಹುದು. ಅಲ್ಲದೆ ಈ ಸಂಬಂಧ +919964164351 ನಂಬರ್​ಗೆ ಸಂಪರ್ಕಿಸಬಹುದು.,.

 Library Re establishment at JPN High School 

shivamogga car decor sun control house
shivamogga car decor sun control house