Machenahalli ಶಿವಮೊಗ್ಗ ಭದ್ರಾವತಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಲೇ ಇದೆ. ಈ ಮಧ್ಯೆ ಮಾಚೇನಹಳ್ಳಿಯಲ್ಲಿ ಶಿಮುಲ್ ಡೈರಿ ಎದುರು ಹೆದ್ದಾರಿ ಲೆವಲ್ ಗಾಗಿ ತೋಡಿರುವ ಗುಂಡಿಯಲ್ಲಿ ಧರೆಯ ಮಣ್ಣು ಕುಸಿಯುತ್ತಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಚತುಷ್ಪಥ ರಸ್ತೆಯ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಧರೆ ಕುಸಿದಿದೆ.

ಇದರಿಂದ ಧರೆಯ ಇಕ್ಕೆಲದಲ್ಲಿರುವ ರಸ್ತೆಯು ಕುಸಿಯಬುಹುದಾದ ಆಂತಕವೂ ಎದುರಾಗಿದೆ. ಇನ್ನೂ ಧರೆ ಕುಸಿದಿದ್ದರಿಂದ ಇಲ್ಲಿ ಸಂಚರಿಸುವ ವಾಹನಗಳ ಸಂಚಾಕ್ಕೆ ಅಡಚಣೆ ಆಗಿದೆ. ಅಂಡರ್ ಪಾಸ್ ಕಾಮಗಾರಿ ಹಿನ್ನೆಲೆಯಲ್ಲಿ ವಾಹನಗಳ ಓಡಾಟಕ್ಕಾಗಿ ಸರ್ವೀಸ್ ರೋಡ್ ರೀತಿಯಲ್ಲಿ ಬದಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸರ್ವಿಸ್ ರಸ್ತೆಗೆ ಹತ್ತಿರದಲ್ಲಿಯೇ ಮಣ್ಣು ಕಸಿದಿರುವುದರಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಇದರಿಂದ ವಾಹನಸವಾರರು ಆತಂಕದಲ್ಲಿ ಓಡಾಡುವಂತಾಗಿದೆ. ಹೆದ್ದಾರಿ ಕಾಮಗಾರಿ ಆಮೇವೇಗದಲ್ಲಿ ನಡೆಯುತ್ತಿದ್ದು, ಈಗಾಗಲೆ ಕಾಮಗಾರಿ ಸ್ಥಳೀಯರನ್ನ ಹೈರಾಣಾಗಿಸಿದೆ. ಇದರ ನಡುವೆ ಗುಂಡಿಯಲ್ಲಿನ ಬದಿಯ ಮಣ್ಣು ಕುಸಿದರೆ, ಸಂಚಾರಕ್ಕೆ ತೊಂದರೆಯಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು
4 ವರ್ಷಗಳ ಹಿಂದೆಯೇ ಇಲ್ಲಿ ಅಂಡರ್ ಪಾಸ್ ನಿರ್ಮಾಣ ಕಾಮಾಗಾರಿ ಆರಂಭವಾಗಿತ್ತು. ಆದರೆ ಇದುವರೆಗೂ ಮುಗಿದಿಲ್ಲ. ಇದರಿಂದ ಶಿವಮೊಗ್ಗದಿಂದ ಭದ್ರಾವತಿವೆರೆಗೂ ಹೋಗುವುದೇ ದುಸ್ತರ ಕೆಲಸವಾಗಿದೆ. ಇನ್ನೂ ಘಟನೆ ಬೆನ್ನಲ್ಲೆ ಮಣ್ಣು ಕುಸಿಯುತ್ತಿರುವ ವಿಡಿಯೋ ದೃಶ್ಯಗಳನ್ನು ಭೂ ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಸ್ಥಳಿಯರು ತಂದಿದ್ದಾರೆ. ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
