lakshmi hebbalkar | ಲಕ್ಷ್ಮೀ ಹೆಬ್ಬಾಳ್ಳಕರ್ ಕಾರು ಅಪಘಾತ ನಡೆದಿದ್ದೇನು? ವೈದ್ಯರು ಏನಂದ್ರು

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 14, 2025 ‌‌  

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ರವರ ಕಾರು ಅಪಘಾತವಾಗಿದೆ. ಘಟನೆಯಲ್ಲಿ ಅವರಿಗೆ ಪೆಟ್ಟಾಗಿದ್ದು, ಅವರ ಸಹೋದರ ಸಹ ಗಾಯಗೊಂಡಿದ್ದಾರೆ.  ಬೆಳಗಾವಿ ಜಿಲ್ಲೆ, ‌ಕಿತ್ತೂರು ಬಳಿ  ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. 

Malenadu Today

ಪರಿಣಾಮ ಅವರ ಬೆನ್ನಿನ ಎರಡು‌ ಮೂಳೆಯಲ್ಲಿ ಎಲ್1 ಎಲ್4 ನಲ್ಲಿ ಸೀಳು ಕಂಡುಬಂದಿದೆ. ಕಾರಿನಲ್ಲಿದ್ದ ಅವರ ಸಹೋದರ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಮುಖ, ತಲೆಗೆ ಗಾಯಗಳಾಗಿದೆ. ಸಿಎಲ್‌ಪಿ ಸಭೆ ಮುಗಿಸಿ ಬೆಂಗಳೂರಿನಿಂದ ಬರುತ್ತಿದ್ದ ವೇಳೆ ಘಟನೆ ನಡೆದಿದ್ದು,  ಅಂಬಡಗಟ್ಟಿ ಗ್ರಾಮದ ಬಳಿ ವಾಹನಕ್ಕೆ ಅಡ್ಡ ಬಂದ ನಾಯಿಗೆ ಕಾರು ಡಿಕ್ಕಿಯಾಗುವುದನ್ನ ತಪ್ಪಿಸುವ ಸಂದರ್ಭದಲ್ಲಿ ಅವಘಡವಾಗಿದೆ. 

Malenadu Today

ಸದ್ಯ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಲಕ್ಷ್ಮೀ ಹೆಬ್ಬಾಳ್ಕರ್‌ರವರನ್ನು ದಾಖಲು ಮಾಡಲಾಗಿದ್ದು, ಅಲ್ಲಿಯೇ ಅವರು ಚಿಕಿತ್ಸೆ ಪಡೆಯಲಿದ್ದಾರೆ.ಈ ಸಂಬಂದ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯ ವೈದ್ಯರು ಸಚಿವೆಯ ಬೆನ್ನುಮೂಳೆಯು ಎರಡು ಕಡೆ ಅಲ್ಪ ಪ್ರಮಾಣದಲ್ಲಿ ಸೀಳಿದೆ, ಉಳಿದಂತೆ ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದಿದ್ದಾರೆ

Malenadu Today

SUMMARY | lakshmi hebbalkar car accident

KEY WORDS |‌ lakshmi hebbalkar car accident

Share This Article