SHIVAMOGGA | MALENADUTODAY NEWS | ಮಲೆನಾಡು ಟುಡೆ Jan 15, 2025
ಮಲೆನಾಡು ಜಿಲ್ಲೆಗಳಲ್ಲಿ ಮತ್ತೆ ಕೆಎಫ್‌ಡಿ ಸೋಂಕಿನ ಆತಂಕ ಆರಂಭವಾಗಿದೆ. ವರ್ಷದ ಮೊದಲ ಪ್ರಕರಣಗಳು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಗಿವೆ. ಚಳಿಗಾಲದ ಆರಂಭದಲ್ಲಿಯೇ ಮಲೆನಾಡಿನಲ್ಲಿ ಆತಂಕ ಮೂಡಿಸುವ ಕೆಎಫ್‌ಡಿ ಇಲಾಖೆಗಳ ಜಾಗೃತಿ ಹಾಗೂ ಜಾಗೃತ ಕ್ರಮಗಳಿಂದ ಸಾಕಷ್ಟು ಕಡಿಮೆಯಾಗುತ್ತಿದೆ. ಇದರ ನಡುವೆ ಈ ವರ್ಷ ಶಿವಮೊಗ್ಗದಲ್ಲಿ ಒಬ್ಬರಿಗೆ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ) ಸೋಂಕು ತಗುಲಿರುವುದು ದೃಢಪಟ್ಟಿದೆ.
ತೀರ್ಥಹಳ್ಳಿ ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 63 ವರ್ಷದ ವೃದ್ಧರೊಬ್ಬರಲ್ಲಿ KFD ಪಾಸಿಟಿವ್ ಬಂದಿದೆ. ದೇವಂಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಒಳಪಡಿಸಿದ ಬಳಿಕ, ಶಿವಮೊಗ್ಗದ ಕೆಎಫ್‌ಡಿ ಲ್ಯಾಬ್ನಲ್ಲಿ ತಪಾಸಣೆ ನಡೆಸಿ ಕೆಎಫ್‌ಡಿ ಇರುವಿಕೆಯನ್ನ ದೃಡಿಕರಿಸಲಾಗಿದೆ. ಸದ್ಯ ಅವರಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದದಲ್ಲಿ 25 ವರುಷದ ಯುವಕನಲ್ಲಿ ಕೆಎಫ್‌ಡಿ ಕಂಡು ಬಂದಿರುವ ಬಗ್ಗೆ ವರದಿಯಾಗಿದೆ. ಸೋಂಕಿತ ಯುವಕ ಸದ್ಯ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


SUMMARY | Kyasanur Forest Disease, KFD infection detected in Shivamogga and Chikkamagaluru districts, treatment at Manipal Hospital
KEY WORDS | Kyasanur Forest Disease, KFD infection, Shivamogga , Chikkamagaluru districts, Manipal Hospital