ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗಕ್ಕೆ ಟಿಎನ್ಐಟಿ ಉತ್ತಮ ಪತ್ರಿಕೋದ್ಯಮ ವಿಭಾಗ ಪ್ರಶಸ್ತಿಯ ಗರಿ

Malenadu Today

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ ‘ದ ನ್ಯೂ ಇಂಡಿಯನ್ ಟೈಮ್ಸ್’ ಕೊಡಮಾಡುವ ಉತ್ತಮ ಪತ್ರಿಕೋದ್ಯಮ ವಿಭಾಗ ಎಂಬ ಪ್ರಶಸ್ತಿ ಲಭಿಸಿದೆ.

ದ ನ್ಯೂ ಇಂಡಿಯನ್ ಟೈಮ್ಸ್ ಮಾಧ್ಯಮ ಸಂಸ್ಥೆ ಆಯೋಜಿಸಿದ್ದ ಟಿಎನ್ಐಟಿ ಮಿಡೀಯಾ ಅವಾರ್ಡ್ಸ್ 2023 ಕಾರ್ಯಕ್ರಮದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ ಟಿಎನ್ಐಟಿ ಉತ್ತಮ ಪತ್ರಿಕೋದ್ಯಮ ವಿಭಾಗ ಎಂಬ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಿರಿ ಕನ್ನಡ ಟಿವಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗಿದೆ.

Malenadu Today

ವೇದಿಕೆಯಲ್ಲಿ ಸುದ್ದಿ ನಿರೂಪಕರಾದ ಚಂದನ್ ಶರ್ಮ, ರಾಘವ್ ಸೂರ್ಯ ಹಾಗೂ ಗಣೇಶ್ ಕಾಸರಗೋಡು ಪ್ರಶಸ್ತಿ ಘೋಷಿಸಿದರು. ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ವಿಭಾಗದ ವಿದ್ಯಾರ್ಥಿಗಳು ಪ್ರಶಸ್ತಿ ಸ್ವೀಕರಿಸಿದರು. ಪತ್ರಿಕೋದ್ಯಮ ವಿಭಾಗ ವಿದ್ಯಾರ್ಥಿಗಳಿಗೆ ಮಾಧ್ಯಮ ಕುರಿತಾದ ಶಿಕ್ಷಣ ಹಾಗೂ ತರಬೇತಿಯಲ್ಲಿ ದಾಪುಗಾಲು ಇಡುತ್ತಿದೆ. ಹದಿನೈದು ವರ್ಷಗಳಿಂದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ‘ಸಹ್ಯಾದ್ರಿ ಟೈಮ್ಸ್’ ಹಾಗೂ ಕಳೆದ ಐದು ವರ್ಷದಿಂದ ನೂತನ ಸ್ಟುಡಿಯೋ ಸಹಾಯದಿಂದ ವಿದ್ಯಾನ್ಮಾನ ಮಾಧ್ಯಮದ ತರಬೇತಿ ಹಾಗೂ ‘ಸಹ್ಯಾದ್ರಿ ಟಿವಿ’ ಯೂ ಟ್ಯೂಬ್ ಚಾನೆಲ್ ತ್ವರಿತ ಬೆಳವಣಿಗೆಯನ್ನು ಗುರುತಿಸಿ ಟಿಎನ್ಐಟಿ ಉತ್ತಮ ಪತ್ರಿಕೋದ್ಯಮ ವಿಭಾಗ ಪ್ರಶಸ್ತಿ ನೀಡಿದೆ.

READ | ಮಾಡಾಳ್ ಲೋಕಾ ರೇಡ್​ ಎಫೆಕ್ಟ್! ಚೆನ್ನಗಿರಿ ಕ್ಷೇತ್ರಕ್ಕೆ ಜೀವಪರವಾಗುತ್ತಾರಾ ಡಾ.ಧನಂಜಯ್ ಸರ್ಜಿ!? ಏನಿದು ಚರ್ಚೆ!?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Share This Article