ಶಿವಮೊಗ್ಗ : ಕುಟ್ರಳ್ಳಿ ಟೋಲ್​ ಗೇಟ್​ ಬಳಿ ಟ್ರಾಫಿಕ್​ ಜಾಮ್ : ಜಟಾಪಟಿ  ಜೋರು : ಕಾರಣವೇನು  

prathapa thirthahalli
Prathapa thirthahalli - content producer

Kutrahalli Toll Gate : ಶಿಕಾರಿಪುರ ತಾಲ್ಲೂಕಿನ ಕುಟ್ರಳ್ಳಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ಮತ್ತು ವಿಧಿಸಿರುವ ಹೆಚ್ಚುವರಿ ಶುಲ್ಕವನ್ನು ವಿರೋಧಿಸಿ ನಿನ್ನೆಯಷ್ಟೇ ಬಂದ್‌ಗೆ ಕರೆ ನೀಡಲಾಗಿದ್ದರೂ, ಇಂದು ಬೆಳಿಗ್ಗೆ ವಾಹನ ಚಾಲಕರು ಟೋಲ್‌ ಗೇಟ್‌ನಲ್ಲಿ ತೆರಿಗೆ ಪಾವತಿಸುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಟೋಲ್ ಸಿಬ್ಬಂದಿ ಹಾಗೂ ವಾಹನ ಚಾಲಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಘಟನೆಯ ಕುರಿತು ಮಾಹಿತಿ ಪಡೆದ ಶಿಕಾರಿಪುರ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಪ್ರತಿಭಟನಾನಿರತರನ್ನು ನಿಯಂತ್ರಿಸಿದ ಪೊಲೀಸರು ಪ್ರತಿಭಟನೆ ಮಾಡಬೇಕಿದ್ದರೆ ನಿನ್ನೆಯೇ ಮಾಡಬೇಕಿತ್ತು, ಇಂದು ಇಲ್ಲಿ ಗದ್ದಲ ಸೃಷ್ಟಿಸುವುದಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಶಿರಾಳಕೊಪ್ಪದ ಚಾಲಕರೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಟೋಲ್ ಗೇಟ್ ಬಳಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಸರ್ಕಾರಿ ಬಸ್ಸುಗಳು ಸೇರಿದಂತೆ ಇತರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರು ಈ ಗೊಂದಲದಿಂದಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

Kutrahalli Toll Gate

ಕುಟ್ರಳ್ಳಿ ಟೋಲ್​ಗೇಟ್​ ಬಳಿ ಟ್ರಾಫಿಕ್​ ಜಾಮ್​
ಕುಟ್ರಳ್ಳಿ ಟೋಲ್​ಗೇಟ್​ ಬಳಿ ಟ್ರಾಫಿಕ್​ ಜಾಮ್​

Kutrahalli Toll Gate

 

View this post on Instagram

 

A post shared by KA on line (@kaonlinekannada)

Share This Article