BREAKING NEWS / ಬಿಜೆಪಿ ಗ್ರೂಪ್​ನಿಂದ ಎಕ್ಸಿಟ್ ಆದರಾ ಕುಮಾರ್ ಬಂಗಾರಪ್ಪ!? ಏನಿದು ಇವತ್ತಿನ ಬಿಗ್ ನ್ಯೂಸ್​!

Kumar Bangarappa has exited the WhatsApp group of the taluk BJP unitಕುಮಾರ್ ಬಂಗಾರಪ್ಪರವರು ತಾಲ್ಲೂಕು ಬಿಜೆಪಿ ಘಟಕದ ವಾಟ್ಸ್ಯಾಪ್ ಗ್ರೂಪ್​ನಿಂದ ಎಕ್ಸಿಟ್ ಆಗಿದ್ದಾರೆ

BREAKING NEWS / ಬಿಜೆಪಿ ಗ್ರೂಪ್​ನಿಂದ ಎಕ್ಸಿಟ್ ಆದರಾ ಕುಮಾರ್ ಬಂಗಾರಪ್ಪ!? ಏನಿದು ಇವತ್ತಿನ ಬಿಗ್ ನ್ಯೂಸ್​!

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಬೆಳವಣಿಗೆ ನಡೆಯುತ್ತಿರುವ ಬಗ್ಗೆ ಸುಳಿವು ಲಭ್ಯವಾಗಿದೆ. ಜಿಲ್ಲಾ ರಾಜಕಾರಣದಲ್ಲಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪರವರ ನಡೆಯು ಕುತೂಹಲ ಮೂಡಿಸ್ತಿದೆ. ಚುನಾವಣೆಯ ಸೋಲಿನ ಬಳಿಕ, ಅಷ್ಟಾಗಿ ಎಲ್ಲಿಯು ಕಾಣಿಸಿಕೊಳ್ಳದ ಅವರು ಇತ್ತೀಚೆಗೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಿದ್ದರು. 

ಇದರ ಬೆನ್ನಲ್ಲೆ ಅವರ ರಾಜಕೀಯ ನಡೆ ಕುತೂಹಲಕ್ಕೆ ಕಾರಣವಾಗಿದ್ದು, ಅದರಲ್ಲಿಯು ಸೊರಬ ತಾಲ್ಲೂಕು ಬಿಜೆಪಿ ಘಟಕದ ವಾಟ್ಸ್ಯಾಪ್ ಗ್ರೂಪ್​ನಿಂದ ಹೊರಬಿದ್ದಿರುವುದು ಚರ್ಚೆಗೆ ಕಾರಣವಾಗಿದೆ. ಚುನಾವಣೆಯ ನಂತರ ಬಿಜೆಪಿಯ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳದ ಕುಮಾರ್ ಬಂಗಾರಪ್ಪ, ಕ್ಷೇತ್ರದಿಂದಲೂ ದೂರ ಉಳಿದಿದ್ದರು. ಈ ಮಧ್ಯೆ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಕಳೆದ ಗುರುವಾರ  ಕುಮಾರ್ ಬಂಗಾರಪ್ಪ ಅವರ 60ನೇ ವರ್ಷದ ಜನ್ಮದಿನಾಚರಣೆ ಆಚರಿಸಿದ್ದರು. 

ಕುಮಾರ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ, ಕಾಂಗ್ರೆಸ್ ಸೇರ್ಪಡೆ ಕೇವಲ ವಂದತಿ

ಮಾಜಿ ಶಾಸಕ ಕುಮಾರ ಬಂಗಾರಪ್ಪ ಬಿಜೆಪಿಯಲ್ಲಿ ಇದ್ದಾರೆ. ಈ ಬಗ್ಗೆ ಯಾವುದೇ ಅನುಮಾನಗಳು ಬೇಡ. ತಾಲೂಕನ್ನು ಅಭಿವೃದ್ಧಿ ಮಾಡಿಯೂ ಪರಾಜಿತರಾದ ಬಗ್ಗೆ ಬೇಸರವಿರಬಹುದು. ಆದರೆ ಮುಂದಿನ ದಿನಗಳಲ್ಲಿ ಸಕ್ರಿಯರಾಗುತ್ತಾರೆ. ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೆ ಎನ್ನುವುದು ಸುಳ್ಳಿನ ವದಂತಿ. ಕಾಂಗ್ರೆಸ್ ಮತ್ತು ಅವರ ನಡುವೆ ಯಾವುದೇ ರೀತಿಯ ಬೆಳವಣಿಗೆ ನಡೆದಿಲ್ಲ ಎಂದು ಸಂಸದ ರಾಘವೇಂದ್ರರವರು ಹೇಳಿದ್ದಾರೆ. 

ಆ ಕಡೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಕುಮಾರ್​ ಬಂಗಾರಪ್ಪರವರನ್ನು ಪಕ್ಷಕ್ಕೆ ಸೆಳೆಯಲು ಕಸರತ್ತು ನಡೆಸ್ತಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿರುವ ಬಲವಾದ ಮಾತು. ಮುಂದಿನ ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆ ಕುಮಾರ್ ಬಂಗಾರಪ್ಪರವರು ಎಂಬ ಚರ್ಚೆಯು ಇದರ ಬೆನ್ನಲ್ಲಿದೆ. 

ಇನ್ನೊಂದೆಡೆ ಬಿಜೆಪಿಯಲ್ಲಿ ಕುಮಾರ್​ ಬಂಗಾರಪ್ಪರವರನ್ನು ಉತ್ತರಕನ್ನಡ ಕ್ಷೇತ್ರದಿಂದ ನಿಲ್ಲಿಸಲಾಗುತ್ತದೆ. ಶಿವಮೊಗ್ಗದಿಂದ ರಾಘವೇಂದ್ರರವರು ಸ್ಪರ್ಧಿಸುತ್ತಾರೆ ಎಂಬ ಒಳಮಾತುಗಳು ಚಾಲ್ತಿಯಲ್ಲಿದೆ. ಇದರ ನಡುವೆ ಕುಮಾರ್​ ಬಂಗಾರಪ್ಪರವರ ವಾಟ್ಸ್ಯಾಪ್​ ಗ್ರೂಪ್​ ಎಕ್ಸಿಟ್ ಮೆಸೇಜ್  ಬೇರೆಯದ್ದೇ ಚರ್ಚೆಗೆ ದಾರಿ ಮಾಡಿದೆ. ಈ ಬಗ್ಗೆ ಏನು ವಿಷಯ? ಎಂಬುದನ್ನ ಕುಮಾರ್ ಬಂಗಾರಪ್ಪರವರೇ ಸ್ಪಷ್ಟಪಡಿಸಬೇಕಿದೆ. 


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!