Know your luck career aries to Pisces Your Daily Horoscope 03wealth and career success Know your luck career
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 11 2025: ಶನಿವಾರ ವಿಶ್ವಾವಸು ನಾಮ ಸಂವತ್ಸರ , ದಕ್ಷಿಣಾಯಣ, ಶರದೃತು, ಆಶ್ವಯುಜ ಮಾಸ. ಶುಕ್ಲ ಪಕ್ಷದ ದಶಮಿ ತಿಥಿ, ಶ್ರವಣ ನಕ್ಷತ್ರ (ರಾತ್ರಿ 9:14 ರವರೆಗೆ). ರಾಹು ಕಾಲ: ಬೆಳಿಗ್ಗೆ 09:00 ರಿಂದ 10:30 ರವರೆಗೆ. ಯಮಗಂಡ ಕಾಲ: ಮಧ್ಯಾಹ್ನ 01:30 ರಿಂದ 03:00 ರವರೆಗೆ. ಗುಳಿಕ ಕಾಲ: ಬೆಳಿಗ್ಗೆ 06:00 ರಿಂದ 07:30 ರವರೆಗೆ. ಅಮೃತ ಘಳಿಗೆ: ಮಧ್ಯಾಹ್ನ 12:24 ರಿಂದ 01:51 ರವರೆಗೆ. ಇಂದು 2ನೇ ಶನಿವಾರ, ಚಾಮುಂಡೇಶ್ವರಿ ಮುಡಿ ಉತ್ಸವ ನಡೆಯಲಿದೆ.
ಇಂದಿನ ರಾಶಿ ಭವಿಷ್ಯ:
ಮೇಷ : ವ್ಯಾಪಾರ ವಹಿವಾಟುಗಳಲ್ಲಿ ಕೆಲವು ತೊಂದರೆ ಎದುರಾಗುವ ಸಾಧ್ಯತೆ ಇದೆ. ಹಲವು ವಿಚಾರಗಳು ಮುಂದೂಡಲ್ಪಡಬಹುದು. ಆಲೋಚನೆಗಳಲ್ಲಿ ಅಸ್ಥಿರತೆ. ದೇವಸ್ಥಾನಗಳಿಗೆ ಭೇಟಿ, ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರುವುದು.
ವೃಷಭ : ಕೆಲಸಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಆರ್ಥಿಕ ಪರಿಸ್ಥಿತಿಗೆ ಇಂದು ಚೂರು ಬಲ ಸಿಗಲಿದೆ. ಸಂತೋಷದ ಮತ್ತು ಉತ್ಸಾಹಭರಿತ ದಿನವಾಗಲಿದೆ. ವ್ಯವಹಾರ ವಿಸ್ತರಣೆ, ಉದ್ಯೋಗದಲ್ಲಿ ಉನ್ನತ ಹುದ್ದೆ
ಮಿಥುನ : ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ. ಆರ್ಥಿಕ ಸ್ಥಿತಿಯಲ್ಲಿ ಧನಲಾಭ, ಅನಗತ್ಯ ಖರ್ಚು ಮತ್ತು ಅನಾರೋಗ್ಯ. ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ಈ ದಿನವು ಸಾಮಾನ್ಯವಾಗಿರಲಿದೆ
ಕರ್ಕಾಟಕ : ದೀರ್ಘಕಾಲದ ಸಾಲ ಕ್ಲೀಯರ್ ಆಗಲಿದೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕೈಗೆತ್ತಿಕೊಂಡ ಪ್ರಮುಖ ಕೆಲಸ ಪೂರ್ಣವಾಗಲಿದೆ. ವ್ಯಾಪಾರ ವಹಿವಾಟು ಉದ್ಯೋಗದಲ್ಲಿ ಇಂದು ಧನಲಾಭ.
ಸಿಂಹ : ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಹೆಚ್ಚುತ್ತದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ವೃದ್ಧಿಯಾಗುತ್ತದೆ. ಆಸ್ತಿಯಿಂದ ಲಾಭ. ಹೊಸ ವ್ಯಕ್ತಿಗಳ ಪರಿಚಯ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆಗೆ ಪರಿಹಾರ ಕಾಣುತ್ತದೆ.
ಕನ್ಯಾ : ಆರ್ಥಿಕ ತೊಂದರೆಗ. ದೂರ ಪ್ರಯಾಣ. ಅನಾರೋಗ್ಯ, ಕೌಟುಂಬಿಕ ಕಲಹ ಮತ್ತು ಸ್ನೇಹಿತರೊಂದಿಗೆ ವಿವಾದ, ಮಾನಸಿಕ ಒತ್ತಡ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಗಜಿಬಿಜಿ
ತುಲಾ : ಮಾಡಿದ ಕೆಲಸಗಳಲ್ಲಿ ತೃಪ್ತಿ ಇರದು. ಆರೋಗ್ಯದಲ್ಲಿ ಏರುಪೇರು ಮತ್ತು ಹೆಚ್ಚುವರಿ ಖರ್ಚು ಎದುರಾಗಬಹುದು. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಏರಿಳಿತದ ದಿನ
ವೃಶ್ಚಿಕ : ಹೊಸ ಕೆಲಸ ಪ್ರಾರಂಭಿಸಲು ಶುಭ ದಿನ. ಶುಭ ಸುದ್ದಿಯನ್ನು ಕೇಳುವ ಯೋಗವಿದೆ. ಆರ್ಥಿಕವಾಗಿ ಪ್ರಗತಿ ಸಾಧಿಸುವಿರಿ. ದೇವಾಲಯಗಳಿಗೆ ಭೇಟಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಅನುಕೂಲಕರ/.
ಧನು : ವಿದ್ಯಾರ್ಥಿಗಳಿಗೆ ಅನುಕೂಲಕರವಾದ ವಾತಾವರಣವಿರುತ್ತದೆ. ವ್ಯವಹಾರದಲ್ಲಿ ಉತ್ತಮ ಯಶಸ್ಸು. ಪ್ರೀತಿಪಾತ್ರರಿಂದ ಆಹ್ವಾನ. ಮನರಂಜನೆಯಲ್ಲಿ ದಿನಕಳೆಯುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಉತ್ಸಾಹ ಕಂಡುಬರುತ್ತದೆ.
ಮಕರ : ಆರ್ಥಿಕವಾಗಿ ಕೆಲವು ತೊಂದರೆಗಳು ಎದುರಾಗಬಹುದು. ಕೆಲಸದಲ್ಲಿ ಅಡೆತಡೆ ಮತ್ತು ದೂರ ಪ್ರಯಾಣದಿಂದ ಅನಾರೋಗ್ಯ. ಆಧ್ಯಾತ್ಮಿಕ ಸ್ಥಳಗಳಲ್ಲಿ ಮಾನಸಿಕ ನೆಮ್ಮದಿ ಹುಡುಕುವ ಪ್ರಯತ್ನ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚಿನ ನಿರೀಕ್ಷೆ ಇರದು.

ಕುಂಭ: ಕಠಿಣ ಪರಿಶ್ರಮವಿಲ್ಲದ ದಿನ. ಹೆಚ್ಚುವರಿ ಖರ್ಚು, ಸಂಬಂಧಿಕರೊಂದಿಗೆ ಜಗಳ. ಅಸ್ಥಿರವಾದ ಆಲೋಚನೆಗಳಿಂದಾಗಿ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಗೊಂದಲದ ವಾತಾವರಣ ಇರಬಹುದು
ಮೀನ : ಹಳೆಯ ಸಾಲದ ಒತ್ತಡ. ಪ್ರೀತಿಪಾತ್ರರಿಂದ ಸಲಹೆ ಮತ್ತು ಸಹಕಾರ ದೊರೆಯುತ್ತದೆ. ಪ್ರಮುಖ ಕೆಲಸ ನಿಗದಿತ ಸಮಯಕ್ಕೆ ಪೂರ್ಣಗೊಳ್ಳುತ್ತವೆ. ವ್ಯವಹಾರ ಲಾಭದಾಯಕವಾಗಿ ನಡೆಯಲಿವೆ ಮತ್ತು ಉದ್ಯೋಗದಲ್ಲಿರುವವರಿಗೆ ಹೊಸ ಹುದ್ದೆ ಸಿಗಲಿದೆ

Know your luck career finance and health Horoscope Today
Areca Nut Price, October 11 2025 Rasi Bhavishya, Daily Astrology Prediction, Panchang Today, Kannada Calendar, Today’s Lucky Rasi, ಇಂದಿನ ಜಾತಕ, ಇಂದಿನ ರಾಶಿ ಭವಿಷ್ಯ, ಅಕ್ಟೋಬರ್ 11 2025 ಪಂಚಾಂಗ, ದಿನ ಭವಿಷ್ಯ, ಇಂದು ಯಾವ ರಾಶಿಗೆ ಶುಭ, ಅಡಿಕೆ ಬೆಲೆ, ಜ್ಯೋತಿಷ್ಯ. Know your luck career
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!